ಪುನೀತ್ ರಾಜಕುಮಾರ್ ಪುಟ್ಟ ಮಗಳು ಮಾಡಿದ ಕೆಲಸಕ್ಕೆ ನೀವು ಶಹಭಾಷ್ ಎನ್ನಲೇಬೇಕು !!

ಯುವರತ್ನ ಎಂದು ಬಿರುದು ಪಡೆದು ಕೊಂಡಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಮಗಳು ಇದೀಗ ಸುದ್ದಿಯಲ್ಲಿದ್ದಾರೆ. ಕೆಲವು ಸೆಲೆಬ್ರಿಟಿಗಳ ಮಕ್ಕಳು ಕೂಡ ಅವರ ತಂದೆ ಹಾಗೂ ತಾಯಿಯ ಹಾದಿಯಲ್ಲಿ ನಡೆಯಲು ಇಷ್ಟಪಡುತ್ತಾರೆ. ಅದರಂತೆಯೇ ಕನ್ನಡ ಚಿತ್ರರಂಗದ ಹಲವಾರು ನಟ-ನಟಿಯರ ಮಕ್ಕಳು ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ, ಸಾಮಾನ್ಯವಾಗಿ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಬಂದು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಆದರೆ ಇಲ್ಲಿ ಸಿನಿಮಾ ರಂಗಕ್ಕೆ ಬಂದು ನಟನೆ ಮಾಡುವ ಬದಲು ಸಮಾಜ ಮುಖೀ ಕಾರ್ಯದಲ್ಲಿ ಪುನೀತ್ ರಾಜಕುಮಾರ್ ರವರ ಪುಟ್ಟ ಮಗಳು ಇದೀಗ ಎಲ್ಲೆಡೆ ಸದ್ದು ಮಾಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ದಿವಂಗತ ನಮ್ಮೆಲ್ಲರ ನೆಚ್ಚಿನ ನಟ ಡಾಕ್ಟರ್ ರಾಜ್ ಕುಮಾರ್ ರವರು, ಮೊದಲಿನಿಂದಲೂ ನೇತ್ರದಾನದ ಬಗ್ಗೆ ವಿಶೇಷವಾದ ಆಸಕ್ತಿ ಇಟ್ಟುಕೊಂಡಿದ್ದರು. ಅದರಂತೆಯೇ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಇನ್ನು ಪುನೀತ್ ರಾಜಕುಮಾರ್ ರವರು ಸಹ ತಮ್ಮ ತಂದೆಯ ಹಾದಿಯಲ್ಲಿ ನಡೆದು ಈಗಾಗಲೇ ನೇತ್ರದಾನ ಮಾಡಿದ್ದಾರೆ, ಇದೀಗ ಇದೇ ಹಾದಿಯಲ್ಲಿ ಪುನೀತ್ ರಾಜಕುಮಾರ್ ರವರ ಪುಟ್ಟ ಮಗು ದೃತಿ ರವರು ನೇತ್ರದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಾವೇ ಖುದ್ದು ಈ ಅಭಿಯಾನಕ್ಕೆ 20,000 ರೂಗಳನ್ನು ಸಾಮಾನ್ಯ ಜನರಿಂದ ಸಂಗ್ರಹಣ ಮಾಡಿ ಸಹಾಯ ಮಾಡಿದ್ದಾರೆ. ಈ ರೀತಿಯ ಸಾಮಾಜಿಕ ಕಳಕಳಿಯನ್ನು ಮೆರೆದಿರುವ ತೃತಿ ಪುನೀತ್ ರಾಜಕುಮಾರ್ ರವರಿಗೆ ಕರುನಾಡ ವಾಣಿ ತಂಡದಿಂದ ವಿಶೇಷ ವಂದನೆಗಳು.ನಮ್ಮ ಸುದ್ದಿಗಳು ನಿಮಗೆ ಇಷ್ಟವಾದಲ್ಲಿ ಸ್ನೇಹಿತರ ಜೊತೆ ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ. ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಪೇಜ್ ಅನ್ನು ಲೈಕ್ ಮಾಡಿ, ಫಾಲೋ ಮಾಡಿ

Facebook Comments

Post Author: Ravi Yadav