1 ನೇ ಟೆಸ್ಟ್‌ನಿಂದ ಅಶ್ವಿನ್ ಮತ್ತು ರೋಹಿತ್ ಅವರನ್ನು ಏಕೆ ಹೊರಗಿಡಲಾಗಿದೆ ಗೊತ್ತಾ? ವಿರಾಟ್ ಹೇಳಿದ್ದು ಹೀಗೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಉದ್ಘಾಟನ ಪಂದ್ಯದಲ್ಲಿ ಟೀಮ್ ಇಂಡಿಯಾ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಬರೋಬ್ಬರಿ 318 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿತು. ಆದರೆ ಫಲಿತಾಂಶದ ಹೊರತಾಗಿಯೂ ವಿರಾಟ್ ಕೊಹ್ಲಿ ರವರ ಒಂದು ನಡೆ ಕೆಲವರಲ್ಲಿ ಅಸಮಾಧಾನ ಮೂಡಿಸಿದೆ. ಅದುವೇ ಇಂಗ್ಲೆಂಡ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಹಾಗೂ ಹಿರಿಯ ಬೌಲರ್ ಅಶ್ವಿನ್ ರವರನ್ನು ಬೆಂಚ್ ಕಾಯುವಂತೆ ಮಾಡಿದ್ದು. ಇದರಿಂದ ಸಾಮಾನ್ಯವಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮ ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದರು ಹಾಗೂ ಇನ್ನುಳಿದಂತೆ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಶ್ವಿನ್ ಬೆಂಚ್ ಕಾಯುವಂತೆ ಮಾಡಿದ್ದಕ್ಕಾಗಿ ಆಶ್ಚರ್ಯಚಕಿತರಾಗಿದ್ದರು.

ಅಶ್ವಿನ್ ಬದಲಿಗೆ ಜಡೇಜಾ ಹಾಗೂ ರೋಹಿತ್ ಶರ್ಮಾ ಬದಲಿಗೆ ಯುವ ಹನುಮಾ ವಿಹಾರ್ ಸ್ಥಾನ ಪಡೆದಿದ್ದರು. ಆದರೆ ಎರಡು ಆಟಗಾರರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಟ ಆಡಿದ್ದಾರೆ. ಜಡೇಜಾ ತಂಡ ಗೆಲುವಿನ ಸಮೀಪ ಸ್ಥಾನ ಪಡೆಯಲು ಸಹಾಯ ಮಾಡಲು ಖಂಡಿತವಾಗಿಯೂ ಪ್ರಯತ್ನಿಸಿದರು ಹಾಗೂ ಹನುಮಾ ವಿಹಾರೀ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯಕ್ಕೆ ನ್ಯಾಯ ಒದಗಿಸಿದರು ಮತ್ತು 93 ರನ್ ಗಳಿಸಿದರು.ಈ ಎಲ್ಲಾ ಚರ್ಚೆಯ ಮಧ್ಯೆ ಕೊಹ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ, ಇದು ತಂಡದ ನಿರ್ಧಾರವಾಗಿದೆ ಮತ್ತು ತಂಡದ ಉತ್ತಮ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಆಯ್ಕೆ ಮಾಡಲಾಗಿದೆ, ಸಂಯೋಜನೆ ಮುಖ್ಯವಾದ ಕಾರಣ ವಿಹಾರಿಯನ್ನು ಆಯ್ಕೆ ಮಾಡಲಾಗಿದೆ ಅಷ್ಟೇ ಅಲ್ಲದೆ ಅರೆಕಾಲಿಕ ಪರಿಣಾಮಕಾರಿ ಬೌಲರ್ ಎಂದು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.

Facebook Comments

Post Author: RAVI