ಶಾರುಖ್ ಖಾನ್ ಗೆ ಪಾಕ್ ಸೇನಾ ಅಧಿಕಾರಿಯಿಂದ ಬಂತು ಮನವಿ, ಶಾರುಖ್ ನಡೆ ನೋಡಿ ಸಿಡಿದೆದ್ದ ನೆಟ್ಟಿಗರು

ಶಾರುಖ್ ಖಾನ್ ರವರು ಮತ್ತೊಮ್ಮೆ ಉದ್ದಟತನ ಮೆರೆದಿದ್ದಾರೆ, ಈಗಾಗಲೇ ಭಾರತ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ದೇಶ ಭಕ್ತರನ್ನು ಕೆಣಕಿ ತನ್ನ ಸಿನಿಮಾ ಜೀವನವನ್ನು ಬಹುತೇಕೆ ಅಂತ್ಯಗೊಳಿಸಿರುವ ಶಾರುಖ್ ಖಾನ್ ರವರು ಇದೀಗ ಮತ್ತೊಮ್ಮೆ ದೇಶ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಈ ವಿಚಾರದಿಂದ ಶಾರುಖ್ ರವರ ನಿರ್ಮಾಣದಲ್ಲಿ ನಿರ್ಮಿತವಾಗಿರುವ “Bard of blood” ಸೀರೀಸ್ ಮೇಲೆ ದೇಶ ಭಕ್ತರ ಕೆಂಗಣ್ಣಿಗೆ ಬಿದ್ದಿದೆ. ಇದರಿಂದ ಈಗಾಗಲೇ ಒಮ್ಮೆ ಶಾರುಖ್ ರವರಿಗೆ ಬುದ್ದಿ ಕಲಿಸಿರುವ ದೇಶ ಭಕ್ತರು ಈದೀಗ ಮತ್ತೊಮ್ಮೆ ಈ ವಿಚಾರದಲ್ಲಿ ಶಾರುಖ್ ರವರ ವಿರುದ್ಧ ನಿಲ್ಲಲು ಮುಂದಾಗಿದ್ದಾರೆ. ಅಷ್ಟಕ್ಕೂ ನಡೆದ್ದದೇನು ಗೊತ್ತಾ?

ಇದೀಗ ನೆಟ್‌ಫ್ಲಿಕ್ಸ್‌ ನಲ್ಲಿ ಭಾರತ ಮೂಲದ ಸೀರೀಸ್ ಗಳ ಹವಾ ಜೋರಾಗಿಯೇ ಇದೆ, ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧಾರ ಮಾಡಿರುವ ನೆಟ್‌ಫ್ಲಿಕ್ಸ್‌ ಸಂಸ್ಥೆಯು ಭಾರತೀಯರ ಸೀರೀಸ್ ಹಾಗೂ ಸಿನಿಮಾ ಗಳನ್ನು ಪ್ರಮೋಟ್ ಮಾಡುತ್ತಿದೆ. ಅಷ್ಟೇ ಅಲ್ಲದೆ ವಿಶೇಷವಾಗಿ ಭಾರತೀಯರಿಗೆ ಇಷ್ಟ ವಾಗುವಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಮೊತ್ತಕ್ಕೆ ಕೊಂಡು ಕೊಳ್ಳುತ್ತಿದೆ. ಹೀಗಿರುವಾಗ ಈಗಾಗಲೇ ಸಿನಿಮಾ ವೈಫಲ್ಯಗಳ ಮೂಲಕ ಕಂಗೆಟ್ಟಿರುವ ಶಾರುಖ್ ಖಾನ್ ರವರು ತಾವೇ ಕುದ್ದು ಬಂಡವಾಳ ಹೂಡಿ ನಿರ್ಮಾಣ ಮಾಡಿರುವ ಸೀರೀಸ್ ನ ಟ್ರೈಲರ್ ರಿಲೀಸ್ ಆದ ಸಂಭ್ರಮದಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದರು.

ಇವರನ್ನು ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ಫಾಲೋ ಮಾಡುತ್ತಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಆಸಿಫ್ ಗಫೂರ್ ರವರು ಶಾರುಖ್ ಖಾನ್ ರವರ ಟ್ವೀಟ್ ನೋಡಿ, ಇದನ್ನು ಪ್ರಮೋಟ್ ಮಾಡುವ ಬದಲು ನೀವು ಶಾಂತಿಯನ್ನು ಉತ್ತೇಜಿಸಬೇಕು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯ ದ ಕುರಿತು ಮಾತನಾಡಬೇಕು ಎಂದು ಪ್ರತಿಕ್ರಿಯೆ ನೀಡಿದರು. ಈ ಥ್ರಿಲ್ಲರ್ ಸೀರೀಸ್ ಭಾರತ ಬೇಹುಗಾರಿಕಾ ಸಂಸ್ಥೆಯಾದ ರಾ ಅಧಿಕಾರಿಯ ಕಥೆಯನ್ನು ಆಧರಿಸಿದೆ. ಆದ ಕಾರಣದಿಂದ ಇದು ಪಾಕಿಸ್ತಾನ ಸೇನೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಪಾಕಿಸ್ತಾನ ಕೆಂಗಣ್ಣಿಗೆ ಗುರಿಯಾದರೆ ಶಾರುಖ್ ಮೇಲೆ ಯಾಕೆ ಕೋಪ ಅಂತೀರಾ? ತಿಳಿಯಲು ಕೆಳಗಡೆ ಓದಿ

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಶಾರುಖ್ ರವರು, ಭಾರತದ ವಿರುದ್ಧ ಹೇಳಿಕೆ ನೀಡಿ ಕೆಲವು ತಿಂಗಳುಗಳ ಹಿಂದೆ ಕೆಂಗಣ್ಣಿಗೆ ಗುರಿಯಾಗಿದ್ದು ನಿಮಗೆ ತಿಳಿದೇ ಇದೆ, ಆದರೆ ಇಂದು ಶಾರುಖ್ ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೇಶದ ವಿರುದ್ಧ ಮಾತನಾಡಲು ಮುಂದೆ ಬರುತ್ತೀರಾ ಆದರೆ ಕಾಶ್ಮೀರ ನಮ್ಮದು ನೀವು ತೆಪ್ಪಗಿರಿ ಎಂದು ಸಹ ಪ್ರತಿಕ್ರಿಯೆ ನೀಡಿಲ್ಲ. ಯಾಕೆ? ಒಹ್ ಪಾಕಿಸ್ತಾನದಲ್ಲಿ ಇರುವ ನಿಮ್ಮ ಅಭಿಮಾನಿಗಳು ಮುಂದೆ ನಿಮ್ಮ ಸಿನಿಮಾ ನೋಡುವುದಿಲ್ಲ ಎಂಬ ಕಾರಣಕ್ಕ? ಪಾಕಿಸ್ತಾನದಲ್ಲಿ ಅವಘಡ ಸಂಭವಿಸಿದರೆ ಹಣದ ಸಹಾಯ ಮಾಡುವ ನೀವು, ಇಂದು ಭಾರತ ಜನರಿಗೆ ಯಾಕೆ ಮಾಡಿಲ್ಲ? ನಿಮ್ಮ ಈ ಬುದ್ದಿ ಇಂದಲೇ ನೀವು ಈ ಸ್ಥಿತಿಗೆ ಬಂದಿದ್ದೀರಾ ! ಮೊದಲು ಪಾಕಿಸ್ತಾನಿಯರಿಗೆ ಕಾಶ್ಮೀರ ನಮ್ಮದು, ನೀವು ಈ ವಿಷಯದಲ್ಲಿ ಮೂಗು ತೋರಿಸಬೇಡಿ ಎಂದು ತಕ್ಕ ಪ್ರತಿಕ್ರಿಯೆ ನೀಡಿ ಎಂದು ಒತ್ತಾಯ ಮಾಡಿದ್ದಾರೆ.

Facebook Comments

Post Author: RAVI