ಹಣದ ನೆರವಿನ ನಂತರ ನೆರೆ ಸಂತ್ರಸ್ತರಿಗೆ ಮತ್ತೊಮ್ಮೆ ಸಹಾಯ ಹಸ್ತ ಚಾಚಿದ ವೀರೇಂದ್ರ ಹೆಗಡೆ ಸರ್ ! ಘೋಷಣೆ ಮಾಡಿದ್ದು ಏನು ಗೊತ್ತಾ?

ಹಣದ ನೆರವಿನ ನಂತರ ನೆರೆ ಸಂತ್ರಸ್ತರಿಗೆ ಮತ್ತೊಮ್ಮೆ ಸಹಾಯ ಹಸ್ತ ಚಾಚಿದ ವೀರೇಂದ್ರ ಹೆಗಡೆ ಸರ್ ! ಘೋಷಣೆ ಮಾಡಿದ್ದು ಏನು ಗೊತ್ತಾ?

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ದೇಶದ ಬಹುತೇಕ ಭಾಗದ ಜನರು ಕರ್ನಾಟಕ ಎಂದ ತಕ್ಷಣ ಧರ್ಮಸ್ಥಳ ಎಂಬ ಪುಣ್ಯಕ್ಷೇತ್ರವನ್ನು ನೆನಪು ಮಾಡಿಕೊಳ್ಳುತ್ತಾರೆ. ಇಂತಹ ಪ್ರಸಿದ್ಧಿಯನ್ನು ಪಡೆದಿರುವ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಯಾಗಿರುವ ವೀರೇಂದ್ರ ಹೆಗಡೆ ರವರು ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದಿರುತ್ತಾರೆ. ಈಗಾಗಲೇ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತಂದು, ಹಳ್ಳಿಯ ಜನರು ಸಹ ಶುದ್ಧೀಕರಿಸಿದ ನೀರನ್ನು ಕುಡಿಯುವ ರೀತಿಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿರುವ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ರವರು ಇತ್ತೀಚಗಷ್ಟೇ ಉತ್ತರ ಕರ್ನಾಟಕದ ಜನತೆಯ ಪ್ರವಾಹಕ್ಕೆ 25 ಕೋಟಿ ರೂಗಳ ನೆರವನ್ನು ಘೋಷಣೆ ಮಾಡಿದ್ದರು.

ಅಷ್ಟೇ ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿಧಾನಸಭಾ ಕ್ಷೇತ್ರ ಬೆಳ್ತಂಗಡಿ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಐವತ್ತು ಲಕ್ಷ ರೂಗಳ ನೆರವನ್ನೂ ನೀಡಿದ್ದರು. ಇದಾದ ನಂತರ ಇದೀಗ ಮತ್ತೊಮ್ಮೆ ವೀರೇಂದ್ರ ಹೆಗಡೆ ರವರು ಕೃಷ್ಣ ನದಿಯ ಪ್ರವಾಹದಿಂದ ತತ್ತರಿಸಿರುವ ಜನಗಳಿಗೆ ನೆರವಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ದಿನ ನಿತ್ಯ ಅಗತ್ಯವಾದ ವಸ್ತುಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡು, ಎಲ್ಲ ವಸ್ತುಗಳನ್ನು ಸೇರಿಸಿ ಒಂದೊಂದು ಕಿಟ್ ಗಳನ್ನಾಗಿ ಕ್ರೋಡೀಕರಣ ಮಾಡಿ ಇದೀಗ ಉತ್ತರ ಕರ್ನಾಟಕದ ಜನತೆಗೆ ತಲುಪಿಸಿದ್ದಾರೆ. ಆಹಾರ ಸಾಮಗ್ರಿ ಯಿಂದ ಇಡಿದು ಶುಚಿಕಾರಕ ವಸ್ತುಗಳ ವರೆಗೂ ಎಲ್ಲ ವಸ್ತುಗಳನ್ನು ಸೇರಿಸಿ ಕಿಟ್ ಗಳನ್ನು ಮಾಡಲಾಗಿದೆ. ಈ ವಸ್ತುಗಳು ಇದೀಗ ಚಿಕ್ಕೋಡಿ ಶಾಖೆಯಿಂದ ಉತ್ತರ ಕರ್ನಾಟಕದ ಜನತೆಗೆ ಸರಬರಾಜು ಮಾಡಲಾಗಿದೆ.