ಭಾರತಕ್ಕೆ ಮತ್ತೊಂದು ಬ್ರಹ್ಮಾಸ್ತ್ರ ನೀಡಲು ಸಿದ್ಧವಾಗಿ ಮೋದಿಗಾಗಿ ಕಾದುಕುಳಿತಿದೆ ರಷ್ಯಾ ! ಶತ್ರುಗಳ ಎದೆಯಲ್ಲಿ ನಡುಕ ಶುರು

ಭಾರತಕ್ಕೆ ನೆರೆಹೊರೆಯ ರಾಷ್ಟ್ರಗಳಿಂದ ಯಾವ ರೀತಿಯ ಅಪಾಯಗಳು ಯಾವ ಕ್ಷಣದಲ್ಲಿ ಬೇಕಾದರೂ ಎದುರಾಗಬಹುದು ಎಂದು ಎಲ್ಲರಿಗೂ ತಿಳಿದಿದೆ. ಅದೇ ಕಾರಣದಿಂದ ಕಳೆದ 5.30 ವರ್ಷಗಳಿಂದ ನರೇಂದ್ರ ಮೋದಿಯವರು ಭಾರತೀಯ ಸೇನೆಯನ್ನು ಬಲಗೊಳಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ಭಾರತೀಯ ಸೇನೆಯ ತೆಕ್ಕೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸೇರ್ಪಡೆಗೆ ಒತ್ತು ನೀಡಿರುವ ನರೇಂದ್ರ ಮೋದಿ ರವರು ವಿದೇಶಗಳಿಂದ ಆಮದು ಮಾಡಿಕೊಳ್ಳುವುದಷ್ಟೇ ಅಲ್ಲದೇ ಸ್ವದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡಿ ರಫ್ತು ಮಾಡುವ ಮೂಲಕ ಮತ್ತಷ್ಟು ಉದ್ಯೋಗ ಸೃಷ್ಟಿ ಹಾಗೂ ಭಾರತಕ್ಕೆ ವಿದೇಶಿ ಹಣ ಹರಿದು ಬರುವಂತೆ ಮಾಡಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.

ಹೀಗಿರುವಾಗ ಭಾರತದ ಮಿತ್ರ ರಾಷ್ಟ್ರಗಳಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುವ ರಷ್ಯಾ ದೇಶವು ಈಗಾಗಲೇ ಭಾರತಕ್ಕೆ ಹಲವಾರು ಬಾರಿ ಬಲಿಷ್ಠ ಶಸ್ತ್ರಾಸ್ತ್ರಗಳನ್ನು ನೀಡಿದೆ. ಭಾರತದ ಪ್ರಮುಖ ಟ್ಯಾಂಕರ್ ಗಳನ್ನು ಹಾಗೂ ಶಸ್ತ್ರ ಸಜ್ಜಿತ ವಾಹನಗಳ ಸರಬರಾಜು ಮಾಡುವ ಅತಿ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾ ದೇಶವು ಇದೀಗ ಮತ್ತೊಂದು ಬ್ರಹ್ಮಾಸ್ತ್ರವನ್ನು ನೀಡಲು ಸಿದ್ಧವಾಗಿದ್ದು, ಇದನ್ನು ಕಂಡ ನೆರೆಹೊರೆಯ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಈಗಾಗಲೇ ನಡುಕ ಆರಂಭವಾಗಿದೆ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಹ ಈ ಬ್ರಹ್ಮಾಸ್ತ್ರವನ್ನು ಭಾರತ ಬಹಳ ಸುಲಭವಾಗಿ ಪಾಕಿಸ್ತಾನದ ಮೇಲೆ ಪ್ರಯೋಗಮಾಡಲು ಅನುಕೂಲಕರವಾಗಿದ್ದು, ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವ ಈ ಬ್ರಹ್ಮಾಸ್ತ್ರವನ್ನು ಭಾರತಕ್ಕೆ ನೀಡಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸ ಬೇಕೆಂಬ ನಿರ್ಧಾರಕ್ಕೆ ಬಂದಿದೆ.

ಅಷ್ಟಕ್ಕೂ ಆ ಬ್ರಹ್ಮಾಸ್ತ್ರದ ವಿಶೇಷಗಳು ಏನು ಗೊತ್ತಾ?? ಹಾಗೂ ಇದರಿಂದ ಭಾರತಕ್ಕೆ ಆಗುವ ಲಾಭಗಳೇನು ಗೊತ್ತಾ??

ರಷ್ಯಾ ದೇಶದ ಬ್ರಹ್ಮಾಸ್ತ್ರ ಗಳಲ್ಲಿ ಒಂದಾಗಿರುವ ಟಿ-14 ಟ್ಯಾಂಕರ್ ಗಳನ್ನು ಭಾರತಕ್ಕೆ ನೀಡಲು ಒಪ್ಪಿಗೆ ನೀಡಿರುವ ರಷ್ಯಾ ದೇಶದ ಅಧ್ಯಕ್ಷ ಪುಟಿನ್ ರವರು, ನರೇಂದ್ರ ಮೋದಿ ರವರು ಮುಂದಿನ ರಷ್ಯಾ ಪ್ರವಾಸ ಕೈಗೊಂಡಾಗ ಈ ಕುರಿತು ಅಂದಾಜು 4.5 ಬಿಲಿಯನ್ ಡಾಲರ್ ಮೊತ್ತದ ಕುರಿತು ಒಪ್ಪಂದ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಹಳೆಯ ಟಿ-72 ಬ್ಯಾಂಕುಗಳಿಗೆ ಬದಲಾಗಿ ಈ ಟ್ಯಾಂಕರ್ ಗಳನ್ನು ನೀಡಲು ರಷ್ಯಾ ದೇಶವು ಮುಂದಾಗಿದ್ದು, ಭಾರತೀಯ ಸೇನೆಗೆ ಇದರಿಂದ ಆನೆ ಬಲ ಬರಲಿದೆ. ಎಂತಹ ಸಂದಿಗ್ಧ ಸಮಯದಲ್ಲಿ ಯೂ ಹಾಗೂ ಯಾವುದೇ ರೀತಿಯ ನೆಲದಲ್ಲೂ ಬಹಳ ಸುಲಭವಾಗಿ ಸಾಗುವ ತಾಕತ್ತು ಈ ಟ್ಯಾಂಕರ್ಗಳು ಹೊಂದಿವೆ.

ಮೂಲಗಳ ಪ್ರಕಾರ ಅಮೇರಿಕಾ ದೇಶದ M1 ಅಬ್ರಾಹಂ ಟ್ಯಾಂಕರ್ಗಳಿಗಿಂತ ಈ ಟಿ-14 ಟ್ಯಾಂಕರ್ ಗಳು ಬಹಳ ಬಲಿಷ್ಠವಾಗಿದ್ದು, ಹಲವಾರು ಕ್ಷಿಪಣಿಗಳು ಒಮ್ಮೆಲೆ ಇದರ ಮೇಲೆ ಎರಗಿದರು ಸಹ ಅಲುಗಾಡದೆ ಮುಂದೆ ಸಾಗುವಂತಹ ಬಲಿಷ್ಠ ಕವಚವನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಮಂಜುಗಡ್ಡೆ, ಮರುಭೂಮಿ ಸೇರಿದಂತೆ ಕಿರಿದಾದ ಪ್ರದೇಶಗಳಲ್ಲಿಯೂ ಸಹ ಬಹಳ ಸುಲಭವಾಗಿ ಚಲಿಸಿ ಯಾವುದೇ ಅಡೆತಡೆ ಇಲ್ಲದೆ ಶತ್ರುಗಳ ಮೇಲೆ ನಿಖರವಾಗಿ ದಾಳಿ ನಡೆಸಲು ಹೇಳಿಮಾಡಿಸಿದಂತಿದೆ. ಒಂದು ವೇಳೆ ನರೇಂದ್ರ ಮೋದಿ ರವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲಿ, ಮೊದಲನೇ ಸರಣಿ ಮಾತ್ರ ರಷ್ಯಾ ದೇಶದಲ್ಲಿ ಉತ್ಪಾದನೆ ಯಾಗಲಿದ್ದು ಮುಂದಿನ ಸರಣಿಯಲ್ಲಿ ಉತ್ಪಾದನೆಯಾಗುವ ಟ್ಯಾಂಕರ್ಗಳು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತದಲ್ಲಿ ಉತ್ಪಾದನೆಯಾಗಲಿದೆ. ಈ ಮೂಲಕ ಮತ್ತಷ್ಟು ಉದ್ಯೋಗಗಳ ಸೃಷ್ಟಿಗೆ ಸಹಾಯವಾಗಲಿದೆ ಎಂಬುದು ರಷ್ಯಾ ದೇಶದ ವಾದ.

Facebook Comments

Post Author: Ravi Yadav