ಮತ್ತೊಂದು ವಿಚಾರದಲ್ಲಿ ಶುರುವಾಯಿತು ಚೀನಾ-ಅಮೆರಿಕ ನಡುವೆ ಜಗಳ ! ಮತ್ತೊಮ್ಮೆ ಖಡಕ್ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಚೀನಾ

ಮತ್ತೊಂದು ವಿಚಾರದಲ್ಲಿ ಶುರುವಾಯಿತು ಚೀನಾ-ಅಮೆರಿಕ ನಡುವೆ ಜಗಳ ! ಮತ್ತೊಮ್ಮೆ ಖಡಕ್ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಚೀನಾ

ಇತ್ತೀಚಿಗೆ ಚೀನಾ ಹಾಗೂ ಅಮೆರಿಕ ದೇಶಗಳ ನಡುವಿನ ಕಾಳಗ ತಾರಕಕ್ಕೇರಿದೆ. ಈ ಎರಡು ದೇಶಗಳು ನಡೆಸುತ್ತಿರುವ ವ್ಯಾಪಾರ ಹಾಗೂ ವ್ಯವಹಾರಗಳ ಜಟಾಪಟಿ ವಿಶ್ವದ ಇನ್ನಿತರ ದೇಶಗಳ ಆರ್ಥಿಕತೆಯ ಮೇಲೆ ಬಾರಿ ಪ್ರಭಾವವನ್ನು ಬೀರುತ್ತಿವೆ. ಈ ಎರಡು ದೇಶಗಳ ಹಗ್ಗಜಗ್ಗಾಟ ದಿಂದ ಭಾರತದ ದೇಶದ ಆರ್ಥಿಕತೆಗೂ ಸಹ ಕೊಂಚ ಹೊಡೆತ ಬಿದ್ದಿದೆ, ಇಡೀ ವಿಶ್ವವೇ ಎರಡು ದೇಶಗಳ ನಡುವಿನ ಕಾಳಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಿರುವಾಗ ಅಮೇರಿಕಾ ದೇಶದ ನಡೆಗೆ ಇದೀಗ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಲು ನಿರ್ಧಾರ ಮಾಡಿದ್ದು, ಒಂದು ವೇಳೆ ಇದೇ ವಿಷಯವನ್ನು ಅಮೇರಿಕಾ ದೇಶವು ಈ ಕೂಡಲೇ ನಿಲ್ಲಿಸದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ..

ಅಮೆರಿಕ ದೇಶವು ತೈವಾನ್ ದೇಶಕ್ಕೆ ಇದೀಗ ಎಫ್ 16 ಯುದ್ಧ ವಿಮಾನಗಳನ್ನು ಮಾರಲು ಮುಂದಾಗಿದೆ. ಮೊದಲಿನಿಂದಲೂ ಚೀನಾ ದೇಶವು ತೈವಾನ್ ದೇಶವನ್ನು ತನ್ನ ಭೂ ಭಾಗವನ್ನಾಗಿ ಪರಿಗಣಿಸುತ್ತಿದೆ, ಹೀಗಿರುವಾಗ ತೈವಾನ್ ದೇಶಕ್ಕೆ ಯುದ್ಧವಿಮಾನಗಳ ಮಾರಾಟವನ್ನು ನಿಲ್ಲಿಸದೇ ಹೋದಲ್ಲಿ, ತೈವಾನ್ ದೇಶದ ಮೇಲೆ ಸೇನೆಯ ಬಲವನ್ನು ಪ್ರಯೋಗ ಮಾಡಿ ಕ್ಷಣಮಾತ್ರದಲ್ಲಿ ವಶಪಡಿಸಿಕೊಳ್ಳುತ್ತೇವೆ, ಆದ ಕಾರಣದಿಂದ ಅಮೆರಿಕ ದೇಶವು ಈ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಇಲ್ಲವಾದರೆ ಚೀನಾದೇಶವು ಈ ವಿಷಯದಲ್ಲಿ ಕೈಕಟ್ಟಿ ಕೂರುವುದಿಲ್ಲ ಎಂದು ಚೀನಾದ ಸೇನಾಧಿಕಾರಿ ಮೇಜರ್ ಜನರಲ್ ಚೆನ್ ರೊಂಗ್ಡಿ ಹೇಳಿದ್ದಾರೆ.