ನೆರೆಯಲ್ಲಿ ಸಿಲುಕಿದ್ದ ಅಂಧ ಮಕ್ಕಳನ್ನು ಕಂಡು ಯಶ್ ಮಾಡಿದ್ದೇನು ಗೊತ್ತಾ?? ತಡವಾಗಿ ಹೊರಬಿತ್ತು ಸುದ್ದಿ

ಕರ್ನಾಟಕದ ಖ್ಯಾತ ನಟರಾಗಿರುವ ಯಶ್ ರವರ ಸಾಮಾಜಿಕ ಕಳಕಳಿಯ ಬಗ್ಗೆ ಈಗಾಗಲೇ ನಿಮಗೆ ಎಲ್ಲರಿಗೂ ತಿಳಿದೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಪ್ರತಿಯೊಂದು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಷಣವೇ ಸಮಸ್ಯೆಯ ಬಗ್ಗೆ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ತನ್ನ ಕೈಲಾದ ಸಹಾಯ ಮಾಡುವಲ್ಲಿ ಯಶ್ ರವರು ಒಂದು ಹೆಜ್ಜೆ ಮುಂದಿರುತ್ತಾರೆ. ಇದೀಗ ಉತ್ತರ ಕರ್ನಾಟಕದಲ್ಲಿ ನೆರೆಯಿಂದ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದ 70 ಅಂಧ ಮಕ್ಕಳು ಯಶ್ ರವರ ಕಣ್ಣಿಗೆ ಬಿದ್ದ ನಂತರ ಮುಂದೇನಾಯಿತು ಎಂಬ ಸುದ್ದಿ ಹೊರಬಿದ್ದಿದೆ. ಯಾವ ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡಿಲ್ಲ, ಬದಲಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತ ಸುದ್ದಿ ಹರಿಯುತ್ತಿದ್ದು ಯಶ್ ರವರ ಸಾಮಾಜಿಕ ಕಳಕಳಿಗೆ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಹೌದು, ಉತ್ತರ ಕರ್ನಾಟಕದಲ್ಲಿ ಮಳೆಯ ರುದ್ರ ನರ್ತನದಿಂದ ಅಂಧ ಮಕ್ಕಳ ವಸತಿ ಶಾಲೆ ಅಕ್ಷರಸಹ ನಲುಗಿ ಹೋಗಿತ್ತು, ಅಂಧ ಮಕ್ಕಳ ಜೀವನವನ್ನು ಮತ್ತಷ್ಟು ಕತ್ತಲಿಗೆ ತಳ್ಳಿತ್ತು ಈ ಪ್ರವಾಹ. ತಮಗೆ ಎಂದು ನಿರ್ಮಿಸಲಾದ ವಸತಿ ಶಾಲೆಯನ್ನು ಪ್ರವಾಹದಿಂದ ಕಳೆದುಕೊಂಡು ಅಂಧ ಮಕ್ಕಳು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ ಈ ವಿಷಯ ತಿಳಿದ ಕೂಡಲೇ ಕರ್ನಾಟಕದ ಖ್ಯಾತ ನಟರಾಗಿರುವ ಯಶ್ ರವರು ಅಂಧಮಕ್ಕಳಿಗೆ ಸಹಾಯಾಸ್ತ ಚಾಚಿದ್ದಾರೆ. ಗದಗ ಜಿಲ್ಲೆಯ ಹೊಳೆಆಲೂರು ಗ್ರಾಮದ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಪ್ರವಾಹದಿಂದ ಜಲಾವೃತವಾಗಿದ್ದು ಕಾರಣ, ಕೂಡಲೇ ಯಶ್ ಅವರು ಧಾರವಾಡದ ಚೈತನ್ಯ ಕಲಾ ಮಂಟಪದಲ್ಲಿ ಈ ಅಂಧ ಮಕ್ಕಳಿಗೆ ಸಂಪೂರ್ಣ ಆಶ್ರಯ ನೀಡಲು ವ್ಯವಸ್ಥೆ ಮಾಡಿದ ಸುದ್ದಿ ಇದೀಗ ಹೊರಬಿದ್ದಿದೆ. ಯಶೋಮಾರ್ಗ ದ ಸದಸ್ಯರು ಎಲ್ಲಾ ಮಕ್ಕಳಿಗೂ ಹೊಸ ಜಾಕೆಟ್, ಊಟ ತಿಂಡಿ ವ್ಯವಸ್ಥೆ ಮಾಡಿ ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಈ ಸುದ್ದಿಯನ್ನು ಯಾವ ಮಾಧ್ಯಮಗಳು ಪ್ರಸಾರ ಮಾಡುತ್ತಿಲ್ಲ.

Facebook Comments

Post Author: RAVI