ಸ್ವಾತಂತ್ರ ದಿನಾಚರಣೆಯ ವೇಳೆ ಸೈಕಲ್ ಕಳೆದುಕೊಂಡು ಅಳುತ್ತಿದ್ದ ಬಾಲಕಿಯನ್ನು ನೋಡಿ ಪ್ರೀತಂ ಗೌಡ ರವರು ಮಾಡಿದ್ದೇನು ಗೊತ್ತಾ??

ಸ್ವಾತಂತ್ರ ದಿನಾಚರಣೆಯ ವೇಳೆ ಸೈಕಲ್ ಕಳೆದುಕೊಂಡು ಅಳುತ್ತಿದ್ದ ಬಾಲಕಿಯನ್ನು ನೋಡಿ ಪ್ರೀತಂ ಗೌಡ ರವರು ಮಾಡಿದ್ದೇನು ಗೊತ್ತಾ??

ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನ ಜಿಲ್ಲೆಯಲ್ಲಿ ಕೇಸರಿ ಬಾವುಟವನ್ನು ಹಾರಿಸಿ ಗೆದ್ದು ಬಂದಿದ್ದ ಪ್ರೀತಂ ಗೌಡ ರವರು ತದನಂತರ ಭಾರಿ ಸದ್ದು ಮಾಡಿದ್ದರು. ಮುಂದೊಂದು ದಿನ ಹಾಸನ ಜಿಲ್ಲೆಯಿಂದ ತಾನೊಬ್ಬ ಅಪ್ರತಿಮ ನಾಯಕನಾಗಿ ಬೆಳೆಯುತ್ತೇನೆ ಎಂದು ತನ್ನ ನಾಯಕತ್ವದ ಗುಣಗಳನ್ನು ಎಲ್ಲಾ ಕಡೆ ಪ್ರದರ್ಶಿಸಿ, ಪ್ರತಿಯೊಂದು ಕಾಮಗಾರಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನವನ್ನು ಸೆಳೆದು ಹಾಸನ ಜಿಲ್ಲೆಗೆ ಹಲವಾರು ಅಭಿವೃದ್ಧಿಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ವಿಚಾರವಾಗಿ ಕೆಲವು ತಿಂಗಳುಗಳ ಹಿಂದೆ ನಿತಿನ್ ಗಡ್ಕರಿ ರವರು ಪ್ರೀತಂಗೌಡ ರವರನ್ನು ಹಾಡಿ ಹೊಗಳಿದ್ದ ಸನ್ನಿವೇಶವನ್ನು ನಾವು ಇಲ್ಲಿ ಸ್ಮರಿಸಬಹುದು.

ಇಷ್ಟೆಲ್ಲಾ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪ್ರೀತಂ ಗೌಡ ರವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಯಾವುದೋ ಒಂದು ಅಭಿವೃದ್ಧಿಯ ಕೆಲಸದಲ್ಲಿ ಇವರು ಸದ್ದು ಮಾಡುತ್ತಿಲ್ಲ ಬದಲಾಗಿ ಮಾನವೀಯತೆಯನ್ನು ಮೆರೆದು ಸದ್ದು ಮಾಡಿದ್ದಾರೆ. ಕೇವಲ ನಿನ್ನೆಯಷ್ಟೇ ಈ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ಪ್ರೀತಂ ಗೌಡ ರವರ ನಡೆಗೆ ಬಾರಿ ಪ್ರಶಂಸೆಗಳು ವ್ಯಕ್ತವಾಗಿವೆ. ಅಷ್ಟಕ್ಕೂ ಅವರು ಮಾಡಿದ್ದಾದರೂ ಏನು ಗೊತ್ತಾ?? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಎಲ್ಲಾ ಮಕ್ಕಳು ಆಗಸ್ಟ್ 15ರಂದು ಸ್ಟೇಡಿಯಂ ಗಳಿಗೆ ತೆರಳಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು. ಇದೇ ವೇಳೆ ಸ್ವಾತಂತ್ರ್ಯ ದಿನಾಚರಣೆಯ ಖುಷಿಯಲ್ಲಿ ಸೈಕಲ್ನಲ್ಲಿ ತೆರಳಿದ್ದ ಶಾಲಾ ಬಾಲಕಿ ಸೈಕಲ್ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡು ಸ್ಟೇಡಿಯಂ ನಿಂದ ಹೊರಬಂದಾಗ ಕಳುವಾಗಿರುವುದು ತಿಳಿದಿತ್ತು. ಕೂಡಲೇ ಶಾಲಾ ಬಾಲಕಿ ಅಳಲು ಪ್ರಾರಂಭ ಮಾಡಿದ್ದರು, ತಂದೆಯು ಸೈಕಲ್ ಇಲ್ಲದೆ ಮನೆಗೆ ಹೋದರೆ ಹೊಡೆಯುತ್ತಾರೆ ಎಂದು ಹೆದರಿ ಅಳುತ್ತಾ ನಿಂತಿದ್ದರು. ಹಾಸನ ನಗರದ ಫಿಲೋಮಿನಾ ಶಾಲೆಯ 9ನೇ ವಿದ್ಯಾರ್ಥಿ ಮಾನ್ಯ ಎಂಬ ಬಾಲಕಿಯ ಸೈಕಲ್ ಕಳುವಾಗಿತ್ತು.

ಅದೃಷ್ಟವಶಾತ್, ಇದೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರೀತಮ್ ಗೌಡ ರವರು ಸ್ಟೇಡಿಯಂನಿಂದ ಹೊರ ಬಂದಾಗ ಬಾಲಕಿಯ ಅಳುತ್ತಿರುವುದನ್ನು ಕಂಡು, ಏನಾಯಿತು ಎಂದು ವಿಚಾರಿಸಿದಾಗ, ಸೈಕಲ್ ಕಳುವಾಗಿರುವ ವಿಷಯವನ್ನು ಕಣ್ಣೀರಿಡುತ್ತಲೇ ಪ್ರೀತಂ ಗೌಡ ರವರ ಬಳಿ ಹೇಳಿಕೊಂಡರು. ಕೂಡಲೇ ಈ ವಿಷಯಕ್ಕೆ ಸ್ಪಂದಿಸಿದ ಶಾಸಕರಾದ ಪ್ರೀತಂ ಗೌಡ ರವರು ಕೇವಲ ಇನ್ನೊಂದು ಗಂಟೆಯಲ್ಲಿ ನಿನಗೆ ಸೈಕಲ್ ಕೊಡಿಸುತ್ತೇನೆ ಅಳುವುದನ್ನು ನಿಲ್ಲಿಸು ಎಂದು ಅಭಯ ನೀಡಿ, ತಮ್ಮ ಆಪ್ತ ಸಹಾಯಕರಿಗೆ ಸೂಚನೆ ನೀಡಿ ಬಾಲಕಿ ಹಾಗೂ ಆಕೆಯ ಪೋಷಕರನ್ನು ಸೈಕಲ್ ಮಾರಾಟ ಮಳಿಗೆ ಕರೆಸಿಕೊಂಡು ಹೋಗಿ 12 ಸಾವಿರ ರೂಗಳ‌ ಸೈಕಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರೀತಮ್ ಗೌಡ ರವರ ಈ ತುರ್ತು ಸ್ಪಂದನೆಗೆ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆಗಳು ಕೇಳಿ ಬಂದಿವೆ. ಕರುನಾಡ ವಾಣಿ ತಂಡದಿಂದ ಪ್ರೀತಂಗೌಡ ರವರಿಗೆ ವಿಶೇಷ ರೀತಿಯ ಧನ್ಯವಾದಗಳು.