ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ ಕಾಂಗ್ರೆಸ್ ನ ಹಿರಿಯ ನಾಯಕ ! ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ! ಯಾವ ಕಾರಣಕ್ಕೆ ಗೊತ್ತಾ??

ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ ಕಾಂಗ್ರೆಸ್ ನ ಹಿರಿಯ ನಾಯಕ ! ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ! ಯಾವ ಕಾರಣಕ್ಕೆ ಗೊತ್ತಾ??

ಸದಾ ನರೇಂದ್ರ ಮೋದಿ ರವರನ್ನು ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಇದೀಗ ಇದ್ದಕ್ಕಿದ್ದ ಹಾಗೆ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಒಂದು ಕಡೆ ಕಾಂಗ್ರೆಸ್ ಪಕ್ಷದ ನಾಯಕರು ಇದೇ ಕಾರಣಕ್ಕಾಗಿ ನರೇಂದ್ರ ಮೋದಿ ಅವರನ್ನು ದೂಷಿಸುತ್ತಿರುವ ಸಂದರ್ಭದಲ್ಲಿ, ಅದೇ ಪಕ್ಷದ ಹಿರಿಯ ನಾಯಕ ರೀತಿಯ ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಇನ್ನಿಲ್ಲದ ಮುಜುಗರ ತಂದಿದೆ. ಸದಾ ಒಂದಲ್ಲ ಒಂದು ಕಾರಣಕ್ಕೆ ನರೇಂದ್ರ ಮೋದಿಯವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಸಚಿವ ಪಿ ಚಿದಂಬರಂ ರವರು ಇದ್ದಕ್ಕಿದ್ದ ಹಾಗೆ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಹೌದು, ಇಷ್ಟು ದಿವಸ ನರೇಂದ್ರ ಮೋದಿ ಯಾವುದೇ ಕೆಲಸ ಮಾಡಿದರೂ ಟೀಕೆ ಮಾಡುತ್ತಿದ್ದ ಚಿದಂಬರಂ ಅವರು ಇದೀಗ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

ಇದು ಅಚ್ಚರಿ ಎನಿಸಿದರೂ ಸತ್ಯ, ಯಾಕೆ ಗೊತ್ತಾ?? ಸಂಪೂರ್ಣ ವಿಷಯಗಳಿಗಾಗಿ ಮುಂದೆ ಸಂಪೂರ್ಣ ಓದಿ. ನಿನ್ನೆ ಸತತ 6ನೇ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿದರು. ಇದೇ ವೇಳೆಯಲ್ಲಿ ದೇಶದ ಮುಂದಿನ ಪ್ರಗತಿಗೆ ಅಡಿಪಾಯ ಹಾಕುಸುವಂತಹ ನಾನಾ ಯೋಜನೆಗಳ ಸುಳಿವು ನೀಡಿ, ಮುಂದೆ ಭಾರತ ದೇಶವು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಯ ಹಾದಿಯಲ್ಲಿ ಮತ್ತಷ್ಟು ಮುಂದಕ್ಕೆ ಸಾಗಲಿದೆ ಎಂದು ಘೋಷಣೆಗಳನ್ನು ಮಾಡಿದರು. ದೇಶದ ಪ್ರಗತಿಗೆ ಜನಸಂಖ್ಯಾ ನಿಯಂತ್ರಣ, ಸ್ವಚ್ಛತೆಗಾಗಿ ಪ್ಲಾಸ್ಟಿಕ್ ನಿರ್ಮೂಲನೆ, ಭವಿಷ್ಯದ ದೃಷ್ಟಿಕೋನ ಹಾಗೂ ಪರಿಸರ ಸಂರಕ್ಷಣೆ. ಇದೇ ರೀತಿಯಾಗಿ ಇನ್ನು ಹಲವಾರು ಯೋಜನೆಗಳನ್ನು ಜಾರಿಗೆ ತರುವುದಾಗಿ ನರೇಂದ್ರ ಮೋದಿ ಅವರು ಭಾರತದ ಭವಿಷ್ಯವನ್ನು 2 ಕ್ಷಣಗಳ ಕಾಲ ಕಣ್ಣ ಮುಂದೆ ತಂದಿದ್ದರು.

ನರೇಂದ್ರ ಮೋದಿರವರ ಯೋಜನೆಗಳನ್ನು ಕಾಂಗ್ರೆಸ್ ಪಕ್ಷವು ಭಾರಿ ಟೀಕೆ ಮಾಡಿತ್ತು, ಕೆಲವರು ಯೋಜನೆಗಳಲ್ಲಿಯೂ ಸಹ ಧರ್ಮಗಳನ್ನು ಎಳೆದು ತಂದು ನರೇಂದ್ರ ಮೋದಿ ರವರು ಮುಸ್ಲಿಮರ ಮೇಲಿನ ದ್ವೇಷಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು. ಇನ್ನು ಕೆಲವರು, ದೇಶದ ಆರ್ಥಿಕ ಸ್ಥಿತಿಯನ್ನು ನರೇಂದ್ರ ಮೋದಿ ರವರು ಮರೆತು ಉಳಿದ ಯೋಜನೆಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಿದ್ದಾರೆ. ಇನ್ನು ಇದೇ ರೀತಿಯ ಹತ್ತು-ಹಲವಾರು ಟೀಕಾ ಬಾಣಗಳನ್ನು ನರೇಂದ್ರ ಮೋದಿರವರ ಮೇಲೆ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಬಿಟ್ಟಿದ್ದರು. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ರವರು ನರೇಂದ್ರ ಮೋದಿ ರವರ ಪರವಾಗಿ ಯೋಜನೆಗಳ ಕುರಿತು ದ್ವನಿ ಎತ್ತಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ??

ದೇಶದ ಪ್ರಗತಿಗೆ ಜನಸಂಖ್ಯಾ ನಿಯಂತ್ರಣ ಕಾನೂನು ತುರ್ತು ಅಗತ್ಯವಾಗಿದೆ, ಈ ಯೋಜನೆಯ ವಿಚಾರದಲ್ಲಿ ನರೇಂದ್ರ ಮೋದಿ ರವರ ನಿಲುವು ಅತ್ಯಂತ ಸಂಬಂಧಿತ ಮತ್ತು ಸಕಾಲಿಕ ವಾಗಿದೆ, ಇನ್ನು ಅದೇ ರೀತಿ ನರೇಂದ್ರ ಮೋದಿ ರವರ ಪ್ಲಾಸ್ಟಿಕ್ ನಿರ್ಮೂಲನಾ ಯೋಜನೆಯು ಸಹ ಅತ್ಯಂತ ಮಹತ್ವಕರವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಕೋನ ಹಾಗೂ ಪರಿಸರ ಸಂರಕ್ಷಣೆಯ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಮುಂದೆ ನಡೆಯಬಹುದಾದ ಎಲ್ಲಾ ಅಪಾಯಗಳನ್ನು ತಡೆಗಟ್ಟುವ ವಿಚಾರದಲ್ಲಿ ನರೇಂದ್ರ ಮೋದಿ ಅವರು ಮುಂದಾಗಿರುವುದು ಸಕಾಲಿಕ. ಇಡೀ ದೇಶವೇ ಪ್ಲಾಸ್ಟಿಕ್ ಎಂಬ ಪಿಡುಗಿನಿಂದ ಮುಕ್ತಿ ಹೊಂದಬೇಕಿದೆ, ಇನ್ನು ಸಂಪತ್ತು ಸೃಷ್ಟಿಸುವ ಅವರನ್ನು ಗೌರವಿಸಬೇಕು ಎಂಬ ಮೋದಿರವರ ಸ್ಪಷ್ಟ ನಿಲುವು ಕೂಡ ಮಹತ್ವವಾಗಿದೆ. ದೇಶದ ಪ್ರಗತಿಯಲ್ಲಿ ಉದ್ಯಮಿಗಳ ಪಾತ್ರ ಬಹುಮುಖ್ಯ, ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾರತ ದೇಶದ ಅಭಿವೃದ್ಧಿಗೆ ನೆರವು ನೀಡುವ ಎಲ್ಲ ಜನರನ್ನು ಗೌರವಿಸಬೇಕು. ಈ ವಿಚಾರಗಳಲ್ಲಿ ಮೋದಿರವರ ನಿಲುವು ಸರಿ ಎಂದು ಸಾಮಾಜಿಕ ಜಾಲತಾಣ ವಾದ ಟ್ವಿಟರ್ ಮೂಲಕ ಹಾಡಿಹೊಗಳಿದ್ದಾರೆ.