ಬಿಗ್ ನ್ಯೂಸ್: ಪಾಕಿಸ್ತಾನಕ್ಕೆ ಮತ್ತೊಂದು ಖಡಕ್ ಎಚ್ಚರಿಕೆ ನೀಡಿ ಬಿಪಿನ್ ರಾವತ್ ಹೇಳಿದ್ದೇನು ಗೊತ್ತಾ??

ಇದೀಗ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವು ಸುಖಾಸುಮ್ಮನೆ ಮೂಗು ತೂರಿಸದೆ ಇರಲು ಸಾಧ್ಯವಾಗುತ್ತಿಲ್ಲ, ಭಾರತದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವ ಕಾರಣ ಪಾಕಿಸ್ತಾನವು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದೆ. ತನ್ನ ತಾಕತ್ತು ಏನು ಎಂಬುದು ತಿಳಿದಿದ್ದರೂ ಸಹ ಯಾವುದನ್ನು ಯೋಚನೆ ಮಾಡದೆ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಿಸಿ, ದಿನೇದಿನೇ ಸೇನಾ ಜಮಾವಣೆ ಹೆಚ್ಚು ಮಾಡುತ್ತಿದೆ. ಇತ್ತ ಯಾವುದಕ್ಕೂ ಜಗ್ಗದ ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಸೇನೆಯಿಂದ ಒಂದು ಚಿಕ್ಕ ತಪ್ಪು ಆದರೂ ಸಹ ತಕ್ಕ ತಿರುಗೇಟು ನೀಡಿ ಪಾಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸುತ್ತೇವೆ ಎಂದು ಸಿದ್ಧವಾಗಿ ನಿಂತಿದೆ. ಹೀಗಿರುವಾಗ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ರವರು ಮತ್ತೊಮ್ಮೆ ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ್ದರು.

ಈ ಎಲ್ಲಾ ವಿದ್ಯಮಾನಗಳ ನಡುವೆ ಬಿಪಿನ್ ರಾವತ್ ರವರು, ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಭಾರತೀಯ ಸೇನಾ ಅಧ್ಯಕ್ಷರಾದ ಬಿಪಿನ್ ರಾವತ್ ರವರು ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು, ಒಂದು ವೇಳೆ ಪಾಕಿಸ್ತಾನ ದೇಶವು ತನ್ನ ತಾಕತ್ತನ್ನು ಮರೆತು ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನ ಪಟ್ಟಲ್ಲಿ, ಭಾರತ ಸೇನೆ ತಕ್ಕ ತಿರುಗೇಟು ನೀಡಲಿದೆ. ಈ ಬಾರಿ ಒಂದು ವೇಳೆ ಕಾಶ್ಮೀರಕ್ಕಾಗಿ ಪಾಕಿಸ್ತಾನ ಹಾಗು ಭಾರತದ ನಡುವೆ ಯುದ್ಧ ಆರಂಭವಾದರೆ, ಕದನ ವಿರಾಮ ಇರುವುದಿಲ್ಲ ಕೇವಲ ಕಾಶ್ಮೀರ ಮಾತ್ರ ಉಳಿಯುತ್ತದೆ ಪಾಕಿಸ್ತಾನ ಉಳಿಯುತ್ತದೆ ಎಂಬ ನಂಬಿಕೆ ನನಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದ್ದು ಭಾರತ ದೇಶವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಮತ್ತೊಮ್ಮೆ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿದೆ.

Facebook Comments

Post Author: Ravi Yadav