ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಇಮ್ರಾನ್ ಖಾನ್ ! ಭಾರತದ ವಿರುದ್ಧ ತೊಡೆತಟ್ಟಿ ಹೇಳಿದ್ದೇನು ಗೊತ್ತಾ??

ಕೆಲವು ಗಂಟೆಗಳ ಹಿಂದಷ್ಟೇ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿರುವ ಮಹಮದ್ ರವರು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ವಿಚಾರವಾಗಿ ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ನರೇಂದ್ರ ಮೋದಿ ಅವರ ವರ್ಚಸ್ಸು ಅಂತರರಾಷ್ಟ್ರೀಯಮಟ್ಟದಲ್ಲಿ ಬಾರಿ ಬೆಳೆದು, ಎಲ್ಲ ದೇಶಗಳು ನರೇಂದ್ರ ಮೋದಿರವರ ನಿರ್ಧಾರದ ಪರ ಮಾತನಾಡುತ್ತಿದ್ದಾರೆ. ಯಾವ ವಿಶ್ವಸಂಸ್ಥೆಯು ನಮ್ಮ ಬೆಂಬಲಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ತಮ್ಮ ಅಳಲನ್ನು ಬಹಿರಂಗವಾಗಿ ತೋಡಿಕೊಂಡಿದ್ದರು. ಇದರ ಬೆನ್ನಲ್ಲೆ ಮಾತನಾಡಿರುವ ಇಮ್ರಾನ್ ಖಾನ್ ರವರು, ಭಾರತದ ಕಾಶ್ಮೀರದ ವಿಚಾರದಲ್ಲಿ ಮತ್ತೊಮ್ಮೆ ನಾಲಿಗೆ ಹರಿಬಿಟ್ಟು ತೊಡೆ ತಟ್ಟಿದ್ದಾರೆ.

ಬಲಿಷ್ಠ ಭಾರತೀಯ ಸೇನೆಯನ್ನು ನೇರವಾಗಿ ಎದುರು ಹಾಕಿಕೊಳ್ಳುವ ಶಕ್ತಿ ತನಗೆ ಇಲ್ಲ ಎಂದು ತಿಳಿದರೂ ಸಹ ಕೇವಲ ಮೊದಲಿನಿಂದಲೂ ಅಣ್ವಸ್ತ್ರ, ಅಣ್ವಸ್ತ್ರ ಎಂದು ಬೊಬ್ಬೆ ಹೊಡೆದು ಕೊಳ್ಳುತ್ತಿರುವ ಪಾಕಿಸ್ತಾನವು, ಇಡೀ ಭಾರತವನ್ನು ಕೇವಲ  ಅಣ್ವಸ್ತ್ರಗಳಿಂದ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಿದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ. ಇತ್ತ ಭಾರತೀಯ ಸೇನೆಯನ್ನು ಪಾಕಿಸ್ತಾನ ಸೇನೆ ನೇರವಾಗಿ ಎದುರಿಸುವುದು ಅಸಾಧ್ಯದ ಮಾತು ಎಂಬುದು ತಿಳಿದಿದ್ದರೂ ಸಹ, ದೇಶದ ಆರ್ಥಿಕತೆಯ ಬಗ್ಗೆ ಕಿಂಚಿತ್ತು ಯೋಚನೆ ಮಾಡದ ಇಮ್ರಾನ್ ಖಾನ್ ರವರು ಇದೀಗ ಭಾರತದ ವಿರುದ್ಧ ಯುದ್ಧದ ಮಾತುಗಳನ್ನು ಆಡಿದ್ದಾರೆ.

ಹೌದು ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ  ಸ್ಥಾನ ಮಾನವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತೆಗೆದುಹಾಕಿದೆ, ಇದರಿಂದ ಕಾಶ್ಮೀರ ಸ್ವಾತಂತ್ರ್ಯ ಕಳೆದುಕೊಂಡಿದೆ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹಾಗೂ ಅಲ್ಲಿನ ಜನರ ಬದುಕಿಗಾಗಿ ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಜನತೆಯು ಎಲ್ಲದಕ್ಕೂ ಸಿದ್ಧರಾಗಿದ್ದಾರೆ. ಭಾರತ ಈ ನಿರ್ಧಾರದ ಮೂಲಕ ಅತಿದೊಡ್ಡ ಪ್ರಮಾದವನ್ನು ಎಸಗಿದೆ, ನರೇಂದ್ರ ಮೋದಿ ಅವರು ಇದೀಗ ತಮ್ಮ ಅಂತಿಮ ಆಟವನ್ನು ಆಡುತ್ತಿದ್ದಾರೆ. ಖಂಡಿತ ನರೇಂದ್ರಮೋದಿ ರವರ ಈ ನಡೆ ಭಾರತಕ್ಕೆ ಬಹು ದುಬಾರಿಯಾಗಲಿದೆ.

ಜಮ್ಮು-ಕಾಶ್ಮೀರ ಯಾವುದೇ ಅಂತಾರಾಷ್ಟ್ರೀಯ ಸಮುದಾಯದ ರಾಡರ್ ನಲ್ಲಿ ಇರಲಿಲ್ಲ, ಆದರೆ ಜಾಗತಿಕ ನಿರೂಪಣೆಯಲ್ಲಿ ಕಾಶ್ಮೀರ ವಿಷಯ ಇದೀಗ ಸೇರಿಕೊಂಡಿದೆ ಹಾಗೂ ಇನ್ನು ಮುಂದೆ ತಾನು ಕಾಶ್ಮೀರದ ರಾಯಭಾರಿಯಾಗಿ ಕೆಲಸ  ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು, ಇನ್ನು ಮುಂದೆ ಕಾಶ್ಮೀರದ ಬ್ರಾಂಡ್ ಅಂಬಾಸಿಡರ್ ಆಗಿ ಇಡೀ ಕಾಶ್ಮೀರದ ಸಮಸ್ಯೆಯನ್ನು ಜಗತ್ತಿನ ಎಲ್ಲಾ ವೇದಿಕೆಗಳಿಗೆ ಕೊಂಡೊಯ್ಯುತ್ತೇನೆ, ಜಮ್ಮು ಹಾಗೂ ಕಾಶ್ಮೀರ ಸ್ವತಂತ್ರಕ್ಕಾಗಿ ಭಾರತದ ಜೊತೆ ಯುದ್ಧ ಮಾಡಲು ಪಾಕಿಸ್ತಾನ ಸಿದ್ಧವಾಗಿದೆ, ಇಡೀ ಭಾರತದಲ್ಲಿ ವಾಸಿಸುತ್ತಿರುವ 18 ಕೋಟಿ ಮುಸ್ಲಿಮರಿಗೆ ಆಗುವ ಅಪಾಯವನ್ನು ಉಲ್ಲೇಖಿಸಿ ಭಾರತದಲ್ಲಿ ನೆಲೆಸಿರುವ ಕಾಶ್ಮೀರಿ ರಾಜಕಾರಣಿಗಳು ಇಂದು ಎರಡು ರಾಷ್ಟ್ರ ಸಿದ್ಧಾಂತವನ್ನು ವಿರೋಧ ಮಾಡುತ್ತಿದ್ದಾರೆ ಎಂದು ಜಮ್ಮು-ಕಾಶ್ಮೀರದ ಕೆಲವು ರಾಜಕಾರಣಿಗಳ ಪರ ಧ್ವನಿ ಎತ್ತಿದ್ದಾರೆ.

Facebook Comments

Post Author: Ravi Yadav