ಕಾಶ್ಮೀರ ವಿಷಯದಲ್ಲಿ ಮೋದಿ ಎದುರು ಬಂದ ತಕ್ಷಣ ಯು-ಟರ್ನ್ ಹೊಡೆದ ಟ್ರಂಪ್ ! ಹೇಳಿದ್ದೇನು ಗೊತ್ತಾ??

ಕಾಶ್ಮೀರ ವಿಷಯದಲ್ಲಿ ಮೋದಿ ಎದುರು ಬಂದ ತಕ್ಷಣ ಯು-ಟರ್ನ್ ಹೊಡೆದ ಟ್ರಂಪ್ ! ಹೇಳಿದ್ದೇನು ಗೊತ್ತಾ??

ಕಳೆದ ಕೆಲವು ದಿನಗಳ ಹಿಂದಷ್ಟೇ ಅಮೇರಿಕಾ ದೇಶದ ಅಧ್ಯಕ್ಷರಾದ ಟ್ರಂಪ್ ರವರು ಇಡೀ ವಿಶ್ವವೇ ಬೆರಗಾಗುವಂತಹ ಹಾಗೂ ನಂಬಲಾಗದಂತಹ ಹೇಳಿಕೆಯನ್ನು ನೀಡಿದ್ದರು. ಜಮ್ಮು ಹಾಗೂ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ನರೇಂದ್ರಮೋದಿ ಅವರು ನನ್ನನ್ನು ಮಾತುಕತೆಗೆ ಮುಂದೆ ಬರುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ರವರ ಆಡಳಿತ ವೈಖರಿ ಇಡೀ ವಿಶ್ವಕ್ಕೆ ತಿಳಿದಿದೆ, ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆ ಮಾತುಕತೆಗೆ ಸಿದ್ಧವಿರದ ನರೇಂದ್ರ ಮೋದಿ ರವರು, ಇತರ ದೇಶಗಳ ಪ್ರಧಾನಿಯನ್ನು ಮಧ್ಯಸ್ಥಿಕೆ ವಹಿಸಿ ಎಂದು ಮನವಿ ಮಾಡಿಕೊಳ್ಳುತ್ತಾರೆ ಎಂದರೆ ನಂಬಲಾರದ ಮಾತು ಎಂದು ಅಭಿಪ್ರಾಯಗಳು ಕೇಳಿ ಬಂದಿದ್ದವು.

ಇದೇ ವಿಷಯವನ್ನು ಭಾರತದ ರಾಯಭಾರಿಗಳು ಖಚಿತಪಡಿಸಿದ್ದರು, ಅಷ್ಟೇ ಅಲ್ಲದೆ ಸಂಸತ್ತಿನಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ನಾಯಕರು ನಾವು ಯಾವುದೇ ನಾಯಕನನ್ನು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸಿ ಎಂದು ಕೇಳಿಕೊಂಡಿಲ್ಲ. ಮೊದಲಿನಿಂದಲೂ ಪಾಕಿಸ್ತಾನವು ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿಕೆ ನೀಡುತ್ತಿದೆ. ಆದರೆ ನಾವೇ ಯಾವುದೇ ಮಾತುಕತೆಗೆ ಸಿದ್ಧವಿಲ್ಲ, ಯಾಕೆಂದರೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಮುಂದಾದರೆ ನಾವು ಕೇವಲ ಇಂದಿನ ಕಾಶ್ಮೀರವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಲು ಸಾಧ್ಯವಿಲ್ಲ ಬದಲಾಗಿ ಹಲವಾರು ವರ್ಷಗಳಿಂದ ಆಕ್ರಮಿಸಿಕೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಸಹ ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.

ಇಷ್ಟೆಲ್ಲ ವಿವರಗಳನ್ನು ನೀಡಿ ಅಮೇರಿಕಾ ದೇಶದ ರಾಯಭಾರಿಗಳಿಗೆ ಹಾಗೂ ಖುದ್ದು ಟ್ರಂಪ್ ರವರಿಗೆ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದರೂ ಸಹ ಮತ್ತೊಮ್ಮೆ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಇದರಿಂದ ಮತ್ತಷ್ಟು ಕೆರಳಿದ ಭಾರತ ಅಮೆರಿಕಾ ದೇಶಕ್ಕೆ ಖಡಕ್ ಸಂದೇಶ ಸಹಿತ ಎಚ್ಚರಿಕೆಯನ್ನು ರವಾನೆ ಮಾಡಿತ್ತು. ತದನಂತರ ತೆಪ್ಪಗಾದದ್ದ ಟ್ರಂಪ್ ರವರು, ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಭಾರತ ಮನವಿ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ತದನಂತರ ಇಮ್ರಾನ್ ರವರು ಟ್ರಂಪ್ ರವರ ಕದತಟ್ಟಿ ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದರು. ಮತ್ತೆ ಈ ವಿಷಯದ ಕುರಿತು ಮಾತನಾಡಲು ಪ್ರಯತ್ನಪಟ್ಟಿದ್ದ ಟ್ರಂಪ್ ರವರಿಗೆ ಮತ್ತೊಮ್ಮೆ ಮೋದಿ ಕಡೆಯಿಂದ ಕಠಿಣ ಸಂದೇಶ ರವಾನೆಯಾಗಿತ್ತು.

ಈ ಸಂದೇಶ ರವಾನೆಯಾದ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ರವರು ತೆಪ್ಪ ಗಾಗಿದ್ದಾರೆ ಹಾಗೂ ಇನ್ನು ಮುಂದೆ ಜಮ್ಮು ಹಾಗೂ ಕಾಶ್ಮೀರದ ವಿಷಯದಲ್ಲಿ ನಾನು ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಮಧ್ಯಸ್ಥಿಕೆ ವಹಿಸಲು ಮುಂದೆ ಬರುವುದಿಲ್ಲ. ಜಮ್ಮು ಹಾಗೂ ಕಾಶ್ಮೀರ ದ ಕುರಿತ ಮಧ್ಯಸ್ಥಿಕೆಯ ಯಾವುದೇ ಪ್ರಸ್ತಾಪವನ್ನು ಯಾರ ಮುಂದೆಯೂ ಮಂಡಿಸುವುದಿಲ್ಲ ಎಂದು ಖಚಿತಪಡಿಸಿರುವುದಾಗಿ ಘೋಷಿಸಿದ್ದಾರೆ. ಇದೇ ವಿಷಯವನ್ನು ಭಾರತೀಯ ರಾಯಭಾರಿಯಾದ ಹರ್ಷವರ್ಧನ್ ಅವರು ಸ್ಪಷ್ಟಪಡಿಸಿದ್ದು, ಆದಷ್ಟು ಶಾಂತಿಯುತವಾಗಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಕಾಳಗವನ್ನು ಬಗೆಹರಿಸಿಕೊಳ್ಳಬೇಕು ಎಂದು ಟ್ರಂಪ್ ಮನವಿ ಮಾಡಿದ್ದಾರೆ ಎಂದು ಸಹ ತಿಳಿಸಿದ್ದಾರೆ.