ಬಿಗ್ ನ್ಯೂಸ್: ಶಶಿ ತರೂರ್ ಗೆ ಬಿಗ್ ಶಾಕ್ ! ಶಶಿ ತರೂರ್ ಬಂಧಿಸಿ ! ಆದೇಶ ಹೊರಡಿಸಿದ ನ್ಯಾಯಾಲಯ

ಕಾಂಗ್ರೆಸ್ ಪಕ್ಷದ ಹಿರಿಯ ಸಂಸದ ಶಶಿ ತರೂರ್ ಅವರು ಹಲವಾರು ಬಾರಿ ತಮ್ಮ ಕಾರ್ಯ ವೈಖರಿಯ ಮೂಲಕ ಸದ್ದು ಮಾಡಿದ್ದ ಕ್ಕಿಂತಲೂ ಹೆಚ್ಚು ತಮ್ಮ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಾರೆ. ಇದೇ ರೀತಿ ಕಳೆದ ವರ್ಷ ಜುಲೈನಲ್ಲಿ ಬಿಜೆಪಿ ಪಕ್ಷದ ವಿರುದ್ಧ ನೀಡಿದ ಹೇಳಿಕೆ ಇದೀಗ ಶಶಿ ತರೂರ್ ಅವರಿಗೆ ಮುಳುವಾಗಿದೆ. ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಯಾವ ರೀತಿ ಹೇಳಿಕೆ ನೀಡಬೇಕು ಎಂಬುದನ್ನು ಶಶಿ ತರೂರ್ ಅವರು ಅಂದು ಅಕ್ಷರ ಸಹ ಮರೆತು ಹೋಗಿದ್ದರು. ಕೇವಲ ಬಿಜೆಪಿ ಪಕ್ಷವನ್ನು ದೂಷಿಸುವ ಉದ್ದೇಶದಿಂದ ಶಶಿ ತರೂರ್ ಅವರು ನೀಡಿದ್ದ ಹೇಳಿಕೆ ಇದೀಗ ಅವರಿಗೆ ದೊಡ್ಡ ಕಂಟಕವಾಗಿದೆ ಹಾಗೂ ಈ ಪ್ರಕರಣದಲ್ಲಿ ಶಶಿ ತರೂರ್ ಅವರಿಗೆ ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಗೊಳಿಸಿ ಬಂಧನಕ್ಕೆ ಆದೇಶ ನೀಡಿದೆ.

ಕಳೆದ ವರ್ಷ ಜುಲೈನಲ್ಲಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದ ಶಶಿ ತರೂರ್ ಅವರು ಸಮಾವೇಶವೊಂದರಲ್ಲಿ ಮಾತನಾಡುವಾಗ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದರೆ ಇಡೀ ಭಾರತ ಹಿಂದೂ ಪಾಕಿಸ್ತಾನ ವಾಗಲಿದೆ, ದೇಶದ ಸಂವಿಧಾನವನ್ನು ಬದಲಿಸುವ ಪ್ರಯತ್ನಕ್ಕೆ ಬಿಜೆಪಿ ಪಕ್ಷ ಕೈ ಹಾಕಲಿದೆ. ದೇಶದ ಸಂವಿಧಾನದ ಜಾಗಕ್ಕೆ ಹಿಂದೂರಾಷ್ಟ್ರ ಸಂವಿಧಾನ ಬಂದು ಕೂರಲಿದೆ, ಹೀಗಾಗಿ ದೇಶದ ಅಲ್ಪಸಂಖ್ಯಾತರು ತಮ್ಮ ಹಕ್ಕಿನ ಜೊತೆಗೆ ಗೌರವಯುತ ಬದುಕನ್ನು ಕಳೆದುಕೊಳ್ಳಲಿದ್ದಾರೆ, ಅಲ್ಪಸಂಖ್ಯಾತರ ಸ್ವಾತಂತ್ರ್ಯ ಹಾಗೂ ಸಮಾನತೆಯ ಕಳೆದುಕೊಳ್ಳುವ ಪರಿಸ್ಥಿತಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಹಾಗೂ ಉಕ್ಕಿನ ಮನುಷ್ಯ ವಲ್ಲಭಾಯಿ ಪಟೇಲ್ ರವರು ಕನಸು ಕಂಡಿದ್ದ ಭಾರತ ದೇಶದಲ್ಲಿ ಸಾಧ್ಯವಾಗುವುದಾದರೆ ಹಿಂದೂ ಪಾಕಿಸ್ತಾನ ವಾದಂತೆ ಎಂದು ಹೇಳಿಕೆ ನೀಡಿದ್ದರು. ಇದೇ ಹೇಳಿಕೆ ಇದೀಗ ಇವರಿಗೆ ಮುಳುವಾಗಿದೆ.

Facebook Comments

Post Author: RAVI