ಐತಿಹಾಸಿಕ ಘಟನೆಗೆ ಸಾಕ್ಷಿಯಾದ ಕಾಶ್ಮೀರ ! ಇದನ್ನು ಯಾವ ಬಕೆಟ್ ಮಾಧ್ಯಮಗಳು ತೋರಿಸುವುದಿಲ್ಲ !

ಐತಿಹಾಸಿಕ ಘಟನೆಗೆ ಸಾಕ್ಷಿಯಾದ ಕಾಶ್ಮೀರ ! ಇದನ್ನು ಯಾವ ಬಕೆಟ್ ಮಾಧ್ಯಮಗಳು ತೋರಿಸುವುದಿಲ್ಲ !

ಕಳೆದ ಕೆಲವು ದಿನಗಳಿಂದ ಸ್ಥಳೀಯ ಮಾಧ್ಯಮಗಳು ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂಬ ಸುದ್ದಿಗಳು ಹಾಗೂ ನಕಲಿ ವಿಡಿಯೋಗಳು ಪ್ರಸಾರಗೊಳ್ಳುತ್ತಿವೆ. ಯಾವುದೇ ಅಂತಾರಾಷ್ಟ್ರೀಯ ಮಾಧ್ಯಮಗಳು ಜಮ್ಮು-ಕಾಶ್ಮೀರಕ್ಕೆ ನಿಜವಾಗಿಯು ತೆರಳಿ ನಡೆಯುತ್ತಿದೆ ಎನ್ನಲಾಗುತ್ತಿರುವ ಯಾವುದೇ ಹಿಂಸಾಚಾರಗಳ ವಿಡಿಯೋ ಚಿತ್ರೀಕರಣ ಮಾಡಿಲ್ಲ, ಕೇವಲ ಭಾರತದ ಸ್ಥಳೀಯ ಮಾಧ್ಯಮಗಳು ಈ ರೀತಿಯ ನಕಲಿ ವಿಡಿಯೋ ಗಳನ್ನು ಬಿಡುಗಡೆ ಮಾಡಿ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಆಹಾರವನ್ನಾಗಿ ನೀಡಿದ್ದಾರೆ. ಇದರಿಂದ ಇಡೀ ವಿಶ್ವದಲ್ಲಿ ಭಾರತದ ಮೋದಿ ನೇತೃತ್ವದ ಸರ್ಕಾರವು ಜಮ್ಮು-ಕಾಶ್ಮೀರದ ಮೇಲೆ ಅಕ್ಷರಸಹ ದಬ್ಬಾಳಿಕೆ ನಡೆಸುತ್ತಿದೆ, ಜನರಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಸುದ್ದಿಗಳು ಹರಡಿದ ತಕ್ಷಣ, ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ರವರು ಎಚ್ಚೆತ್ತುಕೊಂಡು ಕೇವಲ ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಅಂತರರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದಲ್ಲಿ ಇದ್ದುಕೊಂಡು ದೇಶದ್ರೋಹಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದರು. ನೀವು ಪ್ರಸಾರ ಮಾಡುತ್ತಿರುವ ವಿಡಿಯೋ ಸತ್ಯವಾಗಿದ್ದರೆ ನಮ್ಮ ತಕರಾರು ಯಾವುದೇ ಇಲ್ಲ, ಒಂದು ವೇಳೆ ನೀವು ನಕಲಿ ಸುದ್ದಿಯನ್ನು ಪ್ರಸಾರ ಮಾಡಿ ಭಾರತದ ಪ್ರತಿಷ್ಟೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತೊಡಕುಂಟಾದರೆ, ಯಾವುದೇ ಮಾಧ್ಯಮಗಳಿರಲಿ ಅಪಾಯ ಕಟ್ಟಿಟ್ಟಬುತ್ತಿ, ಎಲ್ಲದಕ್ಕಿಂತ ದೇಶ ಮೊದಲು ಎಂದು ಖಡಕ್ ಸಂದೇಶ ರವಾನೆ ಮಾಡಿದರು.

ಇದರ ನಂತರ ಇದೀಗ ಜಮ್ಮುಕಾಶ್ಮೀರವು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ, ದುರಾದೃಷ್ಟವೆಂದರೆ ಈ ಸುದ್ದಿಯನ್ನು ಯಾವ ಮಾಧ್ಯಮಗಳು ನಿಮ್ಮ ಮುಂದೆ ಪ್ರಸಾರ ಮಾಡುತ್ತಿಲ್ಲ, ನಕಲಿ ಸುದ್ದಿಯನ್ನು ಹೊರಡಿಸಿ ಎಂದರೇ ಮುಂದೆ ಬರುವ ಮಾಧ್ಯಮಗಳು ಈ ಸುದ್ದಿಯನ್ನು ಮರೆತಂತೆ ಕಾಣುತ್ತಿದೆ. ಅಷ್ಟಕ್ಕೂ ಐತಿಹಾಸಿಕ ಘಟನೆಯಾದರೂ ಏನು ಗೊತ್ತಾ?? ಜಮ್ಮು-ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಸ್ಥಾನಮಾನ ರದ್ದತಿಯಿಂದ ಹಿಂಸಾಚಾರಗಳು ಭುಗಿಲೇಳುತ್ತವೆ ಎಂಬ ಮಾತುಗಳು ಕೇಳಿಬಂದಿದ್ದವು, ಇದೀಗ ಈಮಾತುಗಳೆಲ್ಲವೂ ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಪ್ರತಿ ವರ್ಷ ವಿಶೇಷ ಸ್ಥಾನಮಾನ ಇದ್ದರೂ ಸಹ ನಡೆಯುತ್ತಿದ್ದ ಹಿಂಸಾಚಾರಗಳಿಗೆ ಇದೀಗ ಸಂಪೂರ್ಣ ಬ್ರೇಕ್ ಬಿದ್ದಿದೆ.

ಅದರಲ್ಲಿಯೂ ಈದ್ ಮಿಲಾದ್ ಹಬ್ಬದಂದು ಪ್ರತಿವರ್ಷ ಸೇನೆ ಹಾಗೂ ಕಲ್ಲು ತೂರಾಟಗಾರರ ನಡುವೆ ಬಾರಿ ಚಕಮಕಿ ನಡೆಯುತ್ತಿತ್ತು.‌ ಕೆಲವು ದೇಶ ದ್ರೋಹಿಗಳು ಹಾಗೂ ಪ್ರತ್ಯೇಕವಾದಿಗಳು ಯುವಕರ ಅಸಹಾಯಕತೆಯನ್ನು ಬಳಸಿಕೊಂಡು ಹಣದ ಆಮಿಷ ತೋರಿಸಿ ಹಬ್ಬದಂದು ಸೇನೆಯ ಮೇಲೆ ಕಲ್ಲು ತೂರಾಟ ನಡೆಸುವಂತೆ ಪ್ರಚೋದನೆ ಮಾಡುತ್ತಿದ್ದರು, ಇದರಿಂದ ಈ ಬಾರಿಯೂ ಸಹ ಈ ರೀತಿಯ ಘಟನೆ ನಡೆಯುತ್ತವೆ  ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಯಾವೊಬ್ಬ ಮುಸಲ್ಮಾನ ಬಾಂಧವರು ಸಹ ಈ ಬಾರಿಯ ಈದ್ ಮಿಲಾದ್ ಸಂಭ್ರಮದಲ್ಲಿ ಸೇನೆಯ ಮೇಲೆ ಧ್ವನಿ ಸಹ ಎತ್ತಿಲ್ಲ. ಬದಲಾಗಿ ಈದ್ಗಾ ಮೈದಾನ ಸೇರಿದಂತೆ ಹಲವಾರು ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಿಹಿ ಹಂಚಿಕೊಂಡು ವಾಪಸಾಗಿದ್ದಾರೆ. ಆದರೆ ಈ ಸುದ್ದಿಯನ್ನು ಮಾತ್ರ ಯಾವ ವಾಹಿನಿಗಳು ಪ್ರಸಾರ ಮಾಡುತ್ತಿಲ್ಲ.