ಮೋದಿ ಹೊಡೆತಕ್ಕೆ ಒಬ್ಬಂಟಿಯಾದ ಪಾಕಿಸ್ತಾನ ! ಬಹಿರಂಗವಾಗಿ ಅಳಲು ತೋಡಿಕೊಂಡಿದ್ದು ಹೇಗೆ ಗೊತ್ತಾ??

ನರೇಂದ್ರ ಮೋದಿ ರವರು ವಿದೇಶಿ ಪ್ರವಾಸ ಮಾಡುವಾಗ ದೇಶದ ಹಲವಾರು ಜನರು ಟೀಕೆ ಮಾಡಿದ್ದರು. ನರೇಂದ್ರ ಮೋದಿ ರವರು ವಿದೇಶಗಳಿಗೆ ತೆರಳಿ ಭಾರತಕ್ಕೆ ವಿದೇಶಿ ಬಂಡವಾಳವನ್ನು ಹರಿದು ಬರುವಂತೆ ಮಾಡಿ ಉದ್ಯೋಗ ಅವಕಾಶಗಳನ್ನು ಹೆಚ್ಚು ಮಾಡಿ, ಭಾರತ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು ಎಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಲವಾರು ದೇಶಗಳಿಗೆ ಪ್ರವಾಸ ಮಾಡಿ ಬಂದಿದ್ದರು. ಊಹಿಸಿದಂತೆ ವಿದೇಶದ ಹಲವಾರು ಕಂಪನಿಗಳು ಭಾರತದಲ್ಲಿ ಶಾಖೆಗಳನ್ನು ತೆರೆದು ಉದ್ಯೋಗಾವಕಾಶಗಳನ್ನು ನೀಡಲು ನಿರ್ಧಾರ ಮಾಡಿದ್ದರು. ಆದರೆ ಇದರ ಲಾಭ ಇಷ್ಟಕ್ಕೆ ಮುಗಿದಿಲ್ಲ, ಇದೀಗ ಭಾರತದ ವರ್ಚಸ್ಸು ಏನು ಎಂಬುದು ಇಡೀ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶಗಳಿಗೂ ಸ್ಪಷ್ಟವಾಗಿ ರವಾನೆಯಾಗಿದೆ.

ಇತ್ತೀಚೆಗಷ್ಟೇ ಜಮ್ಮು ಹಾಗೂ ಕಾಶ್ಮೀರದ ವಿಚಾರದಲ್ಲಿ ಭಾರತವನ್ನು ಒಬ್ಬಂಟಿಯಾಗಿ ಮಾಡಬೇಕು ಎಂದು ಪಾಕಿಸ್ತಾನವು ಹಲವಾರು ದೇಶಗಳ ಕದಾ ತಟ್ಟಿತ್ತು, ಅಮೆರಿಕ ಸೇರಿದಂತೆ ಇನ್ನೂ ಹಲವಾರು ಮುಸ್ಲಿಂ ರಾಷ್ಟ್ರಗಳ ಬೆಂಬಲ ಪಡೆಯಲು ತುದಿಗಾಲಲ್ಲಿ ನಿಂತಿದ್ದ ಪಾಕಿಸ್ತಾನಕ್ಕೆ ಒಂದರ ನಂತರ ಮತ್ತೊಂದು ರಾಷ್ಟ್ರಗಳು ಶಾಕ್ ನೀಡಿದ್ದವು. ಇದಾದ ನಂತರ ಬೇರೆ ವಿಧಿ ಇಲ್ಲದೆ ವಿಶ್ವಸಂಸ್ಥೆಯ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಗಿಂತಲೂ ಸಹ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಹಿರಂಗವಾಗಿ ವಿಶ್ವ ಸಂಸ್ಥೆಯ ಅಧಿಕಾರಿಗಳು ಈ ಕುರಿತು ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಇದು ಭಾರತದ ಆಂತರಿಕ ವಿಚಾರ ಎಂದು ಸ್ಪಷ್ಟವಾಗಿ ತಿರುಗೇಟು ನೀಡಿದ್ದರು.

ಇದೀಗ ಇದೇ ವಿಚಾರವನ್ನು ಪಾಕಿಸ್ತಾನದ ವಿದೇಶಾಂಗ ಸಚಿವರಾಗಿರುವ ಶಾ ಮಹಮದ್ ಕುರೇಶಿ ರವರು ಪ್ರಸ್ತಾಪ ಮಾಡಿದ್ದು, ಅಸಹಾಯಕತೆಯನ್ನು ಹೊರಹಾಕಿದ್ದಾರೆ ಹಾಗೂ ಭಾರತದ ಪರ ವಿಶ್ವಮಟ್ಟದಲ್ಲಿ ಯಾವ ರೀತಿ ಬೆಂಬಲವಿದೆ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ. ಇದರಿಂದ ನರೇಂದ್ರ ಮೋದಿ ಅವರು ವಿದೇಶಕ್ಕೆ ಭೇಟಿ ನೀಡಿದಾಗ ಟೀಕೆ ಮಾಡುತ್ತಿದ್ದ ವಿರೋಧಪಕ್ಷಗಳ ಬಾಯಿಗೆ ಇದೀಗ ಬೀಗ ಜಡಿ ದಂತಾಗಿದೆ, ಇನ್ಮುಂದೆ ವಿರೋಧ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬೇರೆ ವಿಧಿಯಿಲ್ಲದೆ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಲು ಮತ್ತೊಂದು ಕಾರಣ ಹುಡುಕಿ ಕೊಳ್ಳಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬಂದಿವೆ. ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು ಗೊತ್ತಾ?

ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾಕ್ ವಿದೇಶಾಂಗ ಸಚಿವ, ಇನ್ನು ಮುಂದೆ ಜಮ್ಮು-ಕಾಶ್ಮೀರದ ವಿಷಯದಲ್ಲಿ ವಿಶ್ವ ಸಂಸ್ಥೆಯ ನೆರವು ಸಿಗುತ್ತದೆ ಎಂಬ ನಿರೀಕ್ಷೆ ಯಾರಿಗೂ ಬೇಡ, ಭಾವನೆಗಳನ್ನು ಹರಿದು ಬಿಡುವುದು ಸುಲಭ, ವಿರೋಧ ವ್ಯಕ್ತಪಡಿಸುವುದು ಸುಲಭ ಆದರೆ ನೈಜ ಸ್ಥಿತಿಯನ್ನು ಯಾರೊಬ್ಬರೂ ಅರ್ಥ ಮಾಡಿಕೊಳ್ಳುವುದಿಲ್ಲ ಅದು ಬಹಳ ಕ್ಲಿಷ್ಟಕರವಾದ ಸಂಗತಿ. ಪಾಕಿಸ್ತಾನೀಯರು ಮೂರ್ಖರ ಸ್ವರ್ಗದಲ್ಲಿ ಬದುಕಬೇಡಿ, ವಿಶ್ವಸಂಸ್ಥೆ ಸೇರಿದಂತೆ ಎಲ್ಲ ದೇಶಗಳು ಭಾರತದ ಪರವಾಗಿ ನಿಂತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಹೊಂದಿದ ಐದು ರಾಷ್ಟ್ರಗಳ ಪೈಕಿ ರಷ್ಯಾ ದೇಶದ ಮೊದಲ ದೇಶವಾಗಿ ಬಹಿರಂಗವಾಗಿ ಬೆಂಬಲ ಘೋಷಣೆ ಮಾಡಿದೆ. ಇನ್ನುಳಿದ ಚೀನಾ, ಫ್ರಾನ್ಸ್, ಅಮೆರಿಕ ಹಾಗೂ ಇಂಗ್ಲೆಂಡ್ ದೇಶಗಳಿಂದ ಸಹ ಪಾಕಿಸ್ತಾನಕ್ಕೆ ಬೆಂಬಲ ದೊರೆಯುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Facebook Comments

Post Author: Ravi Yadav