ಗಡಿಯಲ್ಲಿ ಬಾಲ ಬಿಚ್ಚುತ್ತಿರುವ ಪಾಕಿಸ್ತಾನದ ಬಗ್ಗೆ ಮೊದಲ ಬಾರಿ ತುಟಿ ಬಿಚ್ಚಿದ ಬಿಪಿನ್ ರಾವತ್ ! ಹೇಳಿದ್ದೇನು ಗೊತ್ತಾ??

ಭಾರತದ ಮೇಲೆ ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನವು ಇದೀಗ ಗಡಿಯಲ್ಲಿ ವಿನಾಕಾರಣ ಉದ್ವಿಗ್ನತೆ ಸೃಷ್ಟಿಸಲು ಹಾಗೂ ಇದರಿಂದ ಭಾರತದ ಆರ್ಥಿಕತೆಗೆ ಆಗುತ್ತದೆ ಎಂಬ ಊಹೆಯಿಂದ ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಆತಂಕ ಸೃಷ್ಟಿಸಲು ಕೆಲವು ದಿನಗಳಿಂದ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡುತ್ತಿದೆ. ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾಗಿರುವ J-16 ಹಾಗೂ ಅಮೇರಿಕಾ ದೇಶದ F-16 ಯುದ್ಧ ವಿಮಾನಗಳನ್ನು ಮೊದಲು ರವಾನೆ ಮಾಡಿ ತದನಂತರ ತನ್ನ ಹೆಚ್ಚುವರಿ ಸೇನೆಯನ್ನು ದಿನ ದಿನಕ್ಕೂ ಹೆಚ್ಚಿಸುತ್ತಿದೆ. ಕಳೆದೆರಡು ದಿನಗಳಿಂದ ಪಾಕಿಸ್ತಾನವು ಈ ರೀತಿ ವರ್ತಿಸುತ್ತಿದ್ದು ಭಾರತದ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರು ಇದೇ ಮೊದಲ ಬಾರಿಗೆ ಇದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಇದರ ಬಗ್ಗೆ ಮಾತನಾಡಿರುವ ಬಿಪಿನ್ ರಾವತ್ ರವರು ಕಳೆದ ಕೆಲವು ದಿನಗಳಿಂದ ಜಮ್ಮು ಹಾಗೂ ಕಾಶ್ಮೀರ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನವು ಸೇನೆಯನ್ನು ನಿಯೋಜನೆ ಮಾಡುತ್ತಿದೆ, ಅದು ಸಹಜವಾದದ್ದು, ಯಾರು ಇದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಯಾವುದೇ ರೀತಿಯ ಭದ್ರತಾ ಸವಾಲನ್ನು ಎದುರಿಸಲು ಭಾರತ ಸೇನೆಯು ಸಿದ್ಧವಾಗಿ ನಿಂತಿದೆ, ಪ್ರತಿ ದೇಶವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತದೆ. ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಸೇನಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಭಾರತ ದೇಶ ಗಮನಿಸುತ್ತಿದೆ, ಯಾವುದೇ ಒಂದು ಚಿಕ್ಕ ತಪ್ಪು ಪಾಕಿಸ್ತಾನದ ಸೈನಿಕರ ಕಡೆಯಿಂದ ನಡೆದು ದುಸ್ಸಾಹಸಕ್ಕೆ ಕೈ ಹಾಕಿದಲ್ಲಿ ತಕ್ಕ ಪ್ರತ್ಯುತ್ತರ ನೀಡಿ ಹೊಡೆದುರುಳಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಹೇಳಿಕೆ ನೀಡಿದ್ದಾರೆ.