ಅಂತಾರಾಷ್ತ್ರೀಯ ಮಾಧ್ಯಮಗಳಿಗೆ ಖಡಕ್ ಸಂದೇಶ ರವಾನಿಸಿದ ಅಮಿತ್ ಶಾ, ಭಾರತದಲ್ಲಿ ಇರುವ ದೇಶ ದ್ರೋಹಿ ಮಾಧ್ಯಮಗಳಿಗೂ ಅನ್ವಯ.

ಅಂತಾರಾಷ್ತ್ರೀಯ ಮಾಧ್ಯಮಗಳಿಗೆ ಖಡಕ್ ಸಂದೇಶ ರವಾನಿಸಿದ ಅಮಿತ್ ಶಾ, ಭಾರತದಲ್ಲಿ ಇರುವ ದೇಶ ದ್ರೋಹಿ ಮಾಧ್ಯಮಗಳಿಗೂ ಅನ್ವಯ.

ಇದೀಗ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಶಾಂತಿ ನೆಲೆಸುತ್ತದೆ. ಮೋದಿ ಅಮಿತ್ ಶಾ ಜೋಡಿಯು ಜಮ್ಮು ಹಾಗೂ ಕಾಶ್ಮೀರ ದಲ್ಲಿ ಮೋಡಿ ಮಾಡಿ ಜನರಲ್ಲಿ ಇದೀಗ ಭರವಸೆ ಮೂಡಿಸಿದೆ. ಲಕ್ಷಾಂತರ ಕಾಶ್ಮೀರ ಜನರು ಮತ್ತೊಮ್ಮೆ ಸಾಮಾನ್ಯ ಜೀವನ ಆರಂಭಿಸಿದ್ದಾರೆ. ಉಗ್ರರು ಕಣಿವೆಯಲ್ಲಿ ಇನ್ನು ಮುಂದೆ ತಮ್ಮ ಆಟ ನಡೆಯುವುದಿಲ್ಲ ಎಂದು ಈಗಾಗಲೇ ಅರ್ಥಮಾಡಿಕೊಂಡು ಹೇಗಾದರೂ ಮಾಡಿ ಸರ್ಕಾರದ ವಿರುದ್ಧ ಪಿತೂರಿ ನಡೆಸಲು ರಣತಂತ್ರ ಹೆಣೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಅಮಿತ್ ಹಾಗೂ ಮೋದಿ ರವರ ಮೇಲೆ ನಂಬಿಕೆ ಇಟ್ಟು ಕಾಶ್ಮೀರಿ ಪಂಡಿತರು ಸಹ ಕಾಶ್ಮೀರಕ್ಕೆ ವಾಪಸ್ಸು ತೆರಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ದೇಶದಲ್ಲಿ ಇರುವ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.

ಜಮ್ಮು ಹಾಗೂ ಕಾಶ್ಮೀರ ದಲ್ಲಿ ಸಂಪೂರ್ಣ ಶಾಂತಿ ಹದಗೆಟ್ಟಿದೆ, ಭಾರತೀಯ ಸೇನೆಯು ಹೋರಾಟಗಾರರ ಮೇಲೆ ಗುಂಡು ಹಾರಿಸುತ್ತಿದ್ದೆ ಎನ್ನುವ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ಇಷ್ಟೆಲ್ಲಾ ಸಾಲದು ಎಂಬಂತೆ ದೇಶದ ಕೆಲವು ಪ್ರತಿಷ್ಠಿತ ಮಾಧ್ಯಮಗಳು ನಕಲಿ ವಿಡಿಯೋಗಳನ್ನು ಎಲ್ಲೆಡೆ ಹರಡಿಸಿ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಇದೇ ಸತ್ಯ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಿಟ್ಟಾಗಿ ಇರುವ ಅಮಿತ್ ಶಾ ರವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಈಗಾಗಲೇ ಕರೆ ಮಾಡಿ ಎಚ್ಚರಿಕೆ ನೀಡಲಾಗಿದೆ. ದುರದೃಷ್ಟ ಎಂದರೆ ಭಾರತದ ಕೆಲವು ಮಾಧ್ಯಮಗಳು ಸಹ ಈ ರೀತಿಯ ನಕಲಿ ಸುದ್ದಿಗಳನ್ನು ಹರಡಿಸುತ್ತವೆ ಒಂದು ವೇಳೆ ಇದು ಇದೇ ರೀತಿ ಮುಂದುವರೆದರೆ ಅಂತರಾಷ್ಟ್ರೀಯ ಮಾಧ್ಯಮವಾಗಲಿ ಅಥವಾ ದೇಶಿಯ ಮಾಧ್ಯಮವಾಗಲಿ ದೇಶದ ವಿಷಯಕ್ಕೆ ಬಂದಾಗ ಕಠಿಣಕ್ರಮ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.