ನೆರೆ ಸಂತ್ರಸ್ತರಿಗೆ ಸ್ಪಂದಿಸಿದ ಹಿರಿಯ ನಟಿ ಲೀಲಾವತಿ ! ವಿಶೇಷವಾಗಿ ರವಾನೆ ಮಾಡಿದ್ದು ಏನು ಗೊತ್ತಾ??

ಉತ್ತರ ಕರ್ನಾಟಕದ ರಾಜ್ಯಗಳು ಸೇರಿದಂತೆ ಕರಾವಳಿ ಪ್ರದೇಶದ ಹಲವಾರು ತಾಲೂಕುಗಳು ಇದೀಗ ಅಕ್ಷರಸಹ ಮಹಾಮಳೆಗೆ ನಲುಗಿ ಹೋಗಿವೆ. ಲಕ್ಷಾಂತರ ಜನರು ತಾವು ಇದ್ದ ಸೂರನ್ನು ಕಳೆದುಕೊಂಡು ಸರ್ಕಾರ ಆಯೋಜಿಸಿರುವ ಗಂಜಿ ಕೇಂದ್ರಗಳು ಸೇರಿದಂತೆ ಬೇರೆ ದಾರಿ ಹುಡುಕಿಕೊಂಡು ಜೀವ ಕೈಯಲ್ಲಿ ಬಿಗಿ ಹಿಡಿದುಕೊಂಡು ಬದುಕುತ್ತಿದ್ದಾರೆ. ಇದೀಗ ಇತರ ಜಿಲ್ಲೆಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ನೆರವಿನ ಮಹಾಪೂರ ಹರಿದುಬರುತ್ತಿದೆ. ದೈನಂದಿಕ ವಸ್ತುಗಳು ಸೇರಿದಂತೆ ಹಲವಾರು ಆಹಾರ ಸಾಮಗ್ರಿಗಳು ಉತ್ತರ ಕರ್ನಾಟಕ ಜನರಿಗೆ ಎಲ್ಲರೂ ತಲುಪಿಸುತ್ತಿದ್ದಾರೆ. ಆದರೆ ಹಿರಿಯ ನಟಿ ಲೀಲಾವತಿ ರವರು ವಿಶೇಷ ರೀತಿಯಲ್ಲಿ ಉತ್ತರ ಕರ್ನಾಟಕಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

ಎಲ್ಲರೂ ಮನುಜ ನನ್ನು ನೆನೆದು ಅವರಿಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಸಂಗ್ರಹ ಮಾಡಿಕೊಂಡು ಉತ್ತರ ಕರ್ನಾಟಕದತ್ತ ತೆರಳುತ್ತಿರುವ ಸಂದರ್ಭದಲ್ಲಿ, ಪ್ರಾಣಿಗಳನ್ನು ಮರೆತಂತೆ ಕಾಣುತ್ತಿದೆ. ಅದರಲ್ಲಿಯೂ ನಾವು ದೇವರು ಎಂದು ಭಾವಿಸುವ ಗೋವುಗಳನ್ನು ಯಾರ್ ಒಬ್ಬರಾದರೂ ನೆನಪು ಮಾಡಿಕೊಂಡಿರಾ? ಇದನ್ನು ಗಮನಿಸಿದ್ದ ಹಿರಿಯ ನಟಿ ಲೀಲಾವತಿ ರವರು ರೈತರಿಂದ ತಮ್ಮ ಸ್ವಂತ ಹಣದಲ್ಲಿ ಮೇವು  ಖರೀದಿ ಮಾಡಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಶ್ರಯ ಪಡೆದಿರುವ ಗೋವುಗಳಿಗೆ ಕಳುಹಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ ಮೇವನ್ನು ಕಟಾವು ಮಾಡಿ ಲಾರಿ ತುಂಬಿಸಲು ಹೋದಾಗ, ಮೇವು ಕಡಿಮೆಯಾಗಿದ್ದ ಕಾರಣ ಸ್ಥಳೀಯ ರೈತರ ಬಳಿ ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿ ಉತ್ತರ ಕರ್ನಾಟಕಕ್ಕೆ ಕಳಿಸಿಕೊಟ್ಟಿದ್ದಾರೆ. ಇವರಿಗೆ ಕರುನಾಡ ವಾಣಿ ತಂಡದ ಕಡೆಯಿಂದ ವಿಶೇಷ ರೀತಿಯಲ್ಲಿ ಧನ್ಯವಾದಗಳು.

Facebook Comments

Post Author: RAVI