ಬಿಗ್ ನ್ಯೂಸ್: ಮಂಡಿಯೂರಿದ ಇಮ್ರಾನ್ ಖಾನ್ ! ಇದು ಭಾರತದ ತಾಕತ್ತು ! ಶಹಭಾಷ್ ಮೋದಿಜಿ – ಅಮಿತ್ ಶಾ !!

ಬಿಗ್ ನ್ಯೂಸ್: ಮಂಡಿಯೂರಿದ ಇಮ್ರಾನ್ ಖಾನ್ ! ಇದು ಭಾರತದ ತಾಕತ್ತು ! ಶಹಭಾಷ್ ಮೋದಿಜಿ – ಅಮಿತ್ ಶಾ !!

ಪಾಕಿಸ್ತಾನವು ಕಳೆದ ಕೆಲವು ದಿನಗಳಿಂದ ಏನೋ ಮಾಡಿ ಬಿಡುತ್ತೇವೆ ಎಂದು ಇಂಗು ತಿಂದ ಮಂಗನಂತೆ ವರ್ತಿಸುತ್ತಿದೆ. ಅಲ್ಲ ಸ್ವಾಮಿ ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದರೆ ಪಾಕಿಸ್ತಾನಕ್ಕೆ ಯಾಕೆ ಚಿಂತೆ ಎಂದು ಎಲ್ಲರೂ ಹೇಳುತ್ತಿದ್ದರೂ, ಸಹ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ, ಹಾಗೆ ಮಾಡಿಬಿಡುತ್ತೇವೆ ಹೀಗೆ ಮಾಡಿಬಿಡುತ್ತೇವೆ ಎಂದು ಮೈಪರಚಿಕೊಂಡರು. ಭಾರತಕ್ಕೆ ಪಾಠ ಕಲಿಸುತ್ತೇವೆ ಎಂದು ತೆಗೆದುಕೊಂಡ ಕ್ರಮಗಳೆಲ್ಲ ಉಲ್ಟಾ ಹೊಡೆದು ಪಾಕಿಸ್ತಾನಕ್ಕೆ ಬುದ್ದಿ ಕಲಿಸಿವೆ, ಹೀಗಿರುವಾಗ ಕಾಶ್ಮೀರದ ವಿಷಯ ಕುರಿತು ಚರ್ಚಿಸಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಅಲ್ಲಿನ ಜನಪ್ರತಿನಿಧಿಗಳು ಕೀಳುಮಟ್ಟದ ಭಾಷೆಯಲ್ಲಿ ಬಳಸಿಕೊಂಡು ಕಿತ್ತಾಡಿಕೊಂಡು ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಿತ್ತು.

ಹೀಗಿರುವಾಗ ತನ್ನ ಬೆಂಬಲಕ್ಕೆ ನಿಂತು ಕೊಳ್ಳುತ್ತವೆ ಎಂದು ಊಹಿಸಿದ ರಾಷ್ಟ್ರ ಗಳೆಲ್ಲವೂ ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದವು. ಇದರಿಂದ ಇಮ್ರಾನ್ ಖಾನ್ ರವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ, ಸರಿಯಾಗಿ ಊಟ, ತಿಂಡಿ, ನಿದ್ರೆ ಮಾಡದೆ ಇಮ್ರಾನ್ ಖಾನ್ ರವರು ನಡುಗೆ ಹೋದಂತೆ ಕಾಣುತ್ತಿದೆ. ಇಮ್ರಾನ್ ಖಾನ್ ರವರು ಇದೇ ಭಯವನ್ನು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವಂತೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಪಡಿಸಿದ್ದು, ಭಾರತದ ಮುಂದೆ ಮಂಡಿಯೂರಿ ದ್ದಾರೆ. ಅಷ್ಟೇ ಅಲ್ಲದೆ ಭಾರತದ ವಿರುದ್ಧ ಪಾಕಿಸ್ತಾನ ಎಷ್ಟು ಭಯಬೀತ ವಾಗಿ ನಲುಗಿ ಹೋಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಭಾರತದ ತಾಕತ್ತು ಏನು ಎಂಬುದನ್ನು ಇಡೀ ವಿಶ್ವಕ್ಕೆ ಸಾರಿ ಹೇಳಿದ್ದಾರೆ.

ಹೌದು, ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಬಳಿಕ ಇದೀಗ ಮೋದಿ ಅಮಿತ್ ಶಾ ರವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆತಂಕ ಇಮ್ರಾನ್ ಖಾನ್ ಅವರಲ್ಲಿ ಅಕ್ಷರಸಹ ಮನೆ ಮಾಡಿದೆ. ನಡುಗಿ ಹೋಗುತ್ತಿರುವ ಪಾಕಿಸ್ತಾನ, ಮೋದಿ ಅಮಿತ್ ಶಾ ಜೋಡಿಗೆ ಎಷ್ಟರಮಟ್ಟಿಗೆ ತಲೆ ಕೆಡಿಸಿಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಆರ್ಎಸ್ಎಸ್ ಸಂಸ್ಥೆಯ ಬಗ್ಗೆ ಕಿಡಿಕಾರಿದರೂ ಸಹ ಟ್ವೀಟ್ ಗಳು ಭಾರತೀಯರ ಮನಗೆದ್ದಿದೆ. ಈ ಸುದ್ದಿಯನ್ನು ಸ್ವತಃ ಇಮ್ರಾನ್ ಖಾನ್ ರವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಣೆ ಮಾಡಿದ್ದು, ಕೆಳಗಡೆ 2 ಟ್ವೀಟ್ ಗಳನ್ನು ಅಟ್ಯಾಚ್ ಮಾಡಲಾಗಿದೆ. ಆಂಗ್ಲ ಭಾಷೆಯಲ್ಲಿ ಅನುವಾದ ಮಾಡಿರುವ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಇಮ್ರಾನ್ ಖಾನ್ ರವರು ಟ್ವಿಟರ್ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, ಆರ್ಎಸ್ಎಸ್ ಸಂಸ್ಥೆಯ ಹಿಂದೂ ನಿರಂಕುಶ ಪ್ರಭುತ್ವದ ಸಿದ್ಧಾಂತದಿಂದ ನನಗೆ ಭಯವಾಗುತ್ತಿದೆ, ಅವ್ರದ್ದು ನಾಜಿ ಹಾಗೂ ಆರ್ಯನ್ ಸಂಘಟನೆಗಳ ರೀತಿಯ ಪ್ರಭುತ್ವ. ಇದು ಜಮ್ಮು-ಕಾಶ್ಮೀರದಲ್ಲಿ ಕೊನೆಯಾಗುವ ಯಾವುದೇ ಸಾಧ್ಯತೆಗಳಿಲ್ಲ, ಯಾಕೆಂದರೆ ಅವರ ಟಾರ್ಗೆಟ್ ಕೇವಲ ಜಮ್ಮು-ಕಾಶ್ಮೀರ ವಲ್ಲ ಬದಲಾಗಿ ಪಾಕಿಸ್ತಾನ. ಮುಂದಿನ ದಿನಗಳಲ್ಲಿ ಭಾರತ ಪಾಕಿಸ್ತಾನವನ್ನು ಟಾರ್ಗೆಟ್ ಮಾಡಲಿದೆ, ಇದು ನನ್ನಲ್ಲಿ ಭಯವನ್ನು ಹುಟ್ಟುಹಾಕುತ್ತಿದೆ ಅಂತ ತಾವೇ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಸ್ವಾಮಿ, ಇಷ್ಟು ದಿವಸ ಭಾರತದ ವಿರುದ್ಧ ಜಗಳಕ್ಕೆ ಕಾಲ್ಕೆರೆದು ಬರುತ್ತಿದ್ದ ಪಾಕಿಸ್ತಾನದ ಪರಿಸ್ಥಿತಿ ಇದೀಗ ಬಹಿರಂಗವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಯವಾಗುತ್ತಿದೆ ಎಂದು ಹೇಳುವ ಮಟ್ಟಕ್ಕೆ ತಲುಪಿದೆ ಎಂದರೆ ಅದಕ್ಕೆ ಮೋದಿ ಅವರ ನಾಯಕತ್ವ ಹಾಗೂ ಅಮಿತ್ ಶಾ ರವರ ಆಕ್ರಮಣಕಾರಿ ಕಾರ್ಯವೈಕರಿ ಕಾರಣ. ಶಭಾಷ್ ಅಮಿತ್ ಶಾ ! ಸುಭಾಷ್ ಮೋದಿಜಿ.