ಪಾಕಿಸ್ತಾನಕ್ಕೆ ಬಾರಿ ಮುಖಭಂಗ, ಮೋದಿ ವಿರುದ್ಧ ದೂರು ನೀಡಿ ಮಾನ ಹರಾಜು ಹಾಕಿಸಿಕೊಂಡಿದ್ದು ಹೇಗೆ ಗೊತ್ತಾ?

ಪಾಕಿಸ್ತಾನಕ್ಕೆ ಬಾರಿ ಮುಖಭಂಗ, ಮೋದಿ ವಿರುದ್ಧ ದೂರು ನೀಡಿ ಮಾನ ಹರಾಜು ಹಾಕಿಸಿಕೊಂಡಿದ್ದು ಹೇಗೆ ಗೊತ್ತಾ?

ಭಾರತ ಸಂವಿಧಾನದ ಅತಿದೊಡ್ಡ ಲೋಪವಾದ ವಿಶೇಷ ಸ್ಥಾನಮಾನವನ್ನು ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ್ದ ನಿರ್ಧಾರದಿಂದ ಪಾಕಿಸ್ತಾನ ಅದೇಗೆ ಲಾಭವಾಗುತಿತ್ತೋ ತಿಳಿದಿಲ್ಲ, ಈದೀಗ ಅಮಿತ್ ಶಾ ಹಾಗೂ ಮೋದಿ ಜೋಡಿ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿರುವ ಕಾರಣ ಬಾರಿ ತಲೆ ಕೆಡಿಸಿಕೊಂಡಿದೆ. ನಮ್ಮ ರಾಜ್ಯದ ವಿಶೇಷ ಸ್ಥಾನಮಾನಕ್ಕೂ ಅದಕ್ಕೂ ಏನು ಸಂಬಂಧ ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ಭಾರತದ ನಿರ್ಧಾರದಿಂದ ಒಂದೆಡೆ ಪ್ರತ್ಯಕವಾದಿಗಳು ಕಂಗೆಟ್ಟಿದ್ದರೆ ಮತ್ತೊಂದೇ ಪಾಕಿಸ್ತಾನ ಮೈ ಪರಚಿಕೊಳ್ಳುತ್ತಿದೆ. ಹೌದು ಮೋದಿ ನೇತೃತ್ವದ ಸರ್ಕಾರ ಈ ಕಠಿಣ ನಿರ್ಧಾರ ತೆಗೆದುಕೊಂಡ ಕ್ಷಣದಿಂದಲೂ ಪಾಕಿಸ್ತಾನ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದೆ, ಅಷ್ಟೇ ಅಲ್ಲದೆ ಏನೋ ಭಾರತಕ್ಕೆ ಇದರಿಂದ ಬಾರಿ ನಷ್ಟವಾಗುವಂತೆ ಚಲನ ಚಿತ್ರ, ರೈಲು ನಿಲ್ಲಿಸುವುದು, ವ್ಯಾಪಾರ ನಿಲ್ಲಿಸಿ ರಾಯಬಾರಿಯನ್ನು ವಾಪಸ್ಸು ಕಳಿಸಿ ನಗೆಪಾಟಲಿಗೆ ಗುರಿಯಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಪಾಕಿಸ್ತಾನ ಏನೋ ಬಡಾಯಿ ಕೊಚ್ಚಿಕೊಳ್ಳಲು ಭಾರತಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಟ್ರಂಪ್ ಮೊರೆ ಹೋಗಿದ್ದರು. ಆದರೆ ಮೋದಿರವರ ನಾಯಕತ್ವದ ಬಗ್ಗೆ ತಿಳಿದಿದ್ದ ಟ್ರಂಪ್ ಸಹ ಪಾಕಿಸ್ತಾನಕ್ಕೆ ಕೈ ಕೊಟ್ಟಿದ್ದರು, ಇಷ್ಟಲ್ಲ ಆದರೂ ಸುಮ್ಮನಾಗದ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಮೋದಿ ವಿರುದ್ಧ ದೂರು ದಾಖಲು ಮಾಡಿತ್ತು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಭಧ್ರತಾ ಮಂಡಳಿ ಅಧ್ಯಕ್ಷೆ ಜೊವಾನ್ನಾ ವ್ರೊನೆಕ್ಕಾ ರವರು ಪಾಕಿಸ್ತಾನ ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ದೂರನ್ನು ರದ್ದು ಮಾಡಲಾಗಿದೆ. ಇದೇ ವಿಷಯವನ್ನು ಮಾದ್ಯಮದವರು ಜೊವಾನ್ನಾ ವ್ರೊನೆಕ್ಕಾ ರವರು ಪ್ರತಿಕ್ರಿಯೆ ನೀಡಿಲ್ಲ ಎಂದು ಅಧ್ಯಕ್ಷ ಆಂಟೋನಿಯೋ ಗುಟೆರಸ್ ರನ್ನು ಪ್ರಶ್ನೆ ಮಾಡಿದಾಗ, ನಾವು ಭಾರತದ ವಿರುದ್ಧ ಯಾವುದೇ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ತೆಪ್ಪಗಿರುವಂತೆ ಟಾಂಗ್ ನೀಡಿದ್ದಾರೆ. ಇಮ್ರಾನ್ ಖಾನ್ ರವರು ಹೀಗಲಾದರು ಮೋದಿ ಎಂಬ ನಾಯಕನ ವರ್ಚಸ್ಸು ಅಂತಾರಾಷ್ಟ್ಶಿಯ ಮಟ್ಟದಲ್ಲಿ ಹೇಗಿದೆ ಎಂಬುದನ್ನು ಅರಿತು ಸುಮ್ಮನಾದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ.