ರಮೇಶ್ ಕುಮಾರ್ ರವರಿಗೆ ಬಿಗ್ ಶಾಕ್! ಹೊರಬಿತ್ತು ಮಹಾ ಹಗರಣ

ರಮೇಶ್ ಕುಮಾರ್ ರವರಿಗೆ ಬಿಗ್ ಶಾಕ್! ಹೊರಬಿತ್ತು ಮಹಾ ಹಗರಣ

ಇತ್ತೀಚಿಗೆ ಭಾರೀ ಸದ್ದು ಮಾಡುತ್ತಿರುವ ಮಾಜಿ ರಮೇಶ್ ಕುಮಾರ್ ರವರಿಗೆ ಇದೀಗ ದೊಡ್ಡ ಶಾಕ್ ಎದುರಾಗಿದೆ. ಇಷ್ಟು ದಿವಸ ರಾಜಕೀಯದಲ್ಲಿ ಅಷ್ಟಾಗಿ ಸದ್ದು ಮಾಡದ ರಮೇಶ್ ಕುಮಾರ್ ರವರು ಇತ್ತೀಚೆಗೆ, ವಿಧಾನಸಭಾ ಕಲಾಪದಲ್ಲಿ ಬಾರಿ ಸದ್ದು ಮಾಡಿದ್ದರು. ಯಾಕೆಂದರೆ ಇವರ ನಡೆಯನ್ನು ಕಂಡ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೊಂಡಾಡಿದರೆ, ಬಿಜೆಪಿ ಪಕ್ಷದ ಕಾರ್ಯಕರ್ತರು ಮನಬಂದಂತೆ ಟೀಕೆಗಳನ್ನು ಮಾಡಿದರು. ಹೊಗಳಿಕೆ ಅಥವಾ ತೆಗಳಿಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಮೇಶ್ ಕುಮಾರ್ ರವರು ತಾವು ರಜಾ ತೆಗೆದುಕೊಳ್ಳಬೇಕಾಗಿದ್ದ ಭಾನುವಾರ ಸಹ ಕೆಲಸ ಮಾಡಿ, ಮುಂಬೈನಲ್ಲಿ ಕುಳಿತಿದ್ದ ಎಲ್ಲ ಅತೃಪ್ತ ಶಾಸಕರನ್ನು ಅನರ್ಹ ಮಾಡುವ ಮೂಲಕ ಅಚ್ಚರಿ ನಡೆ ಇಟ್ಟು ಮತ್ತಷ್ಟು ಸದ್ದು ಮಾಡಿದ್ದರು. ಇದೀಗ ರಾಜಕೀಯ ನಡೆಯಲ್ಲದೆ ಹಗರಣದ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.

ಹೌದು, ಇದೀಗ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ರವರ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ. ಯಡಿಯೂರಪ್ಪ ನವರು ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸಲು ಯತ್ನಿಸುತ್ತಿರುವ ವೇಳೆಯಲ್ಲಿ ಈ ದೂರು ದಾಖಲಾಗಿರುವುದು ಮತ್ತಷ್ಟು ಸದ್ದು ಮಾಡುತ್ತಿದೆ. ಕಳೆದ 2018ರ ಹಗರಣವನ್ನು ಇದೀಗ ಹೊರ ತೆಗೆದಿರುವ ವಕೀಲ ಶಿವಾರೆಡ್ಡಿ ಎಂಬುವವರು, ಲೋಕಾಯುಕ್ತದಲ್ಲಿ ಸಂಪೂರ್ಣ ದಾಖಲೆಗಳ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಇದರಿಂದ ರಮೇಶ್ ಕುಮಾರ್ ರವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಹಗರಣದ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ವಕೀಲ ಶಿವರೆಡ್ಡಿ ರವರು, 2018 ರಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ರವರು, 2014 ರಿಂದ 2017ರವರೆಗೆ ಒಟ್ಟು 14,209 ಬ್ಯಾಚ್ ಗಳ ಔಷಧಿಯನ್ನು ಖರೀದಿ ಮಾಡಿದ್ದಾರೆ. ಆದರೆ ಯಾವುದೇ ಔಷಧಿಗಳ ಗುಣಮಟ್ಟವನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಿಸದೇ ಅಂದು ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ರವರು 14,209 ಔಷಧಿಗಳ ಪೈಕಿ ಕೇವಲ 6776 ಔಷಧಿಗಳ ಸ್ಯಾಂಪಲ್ ಗಳನ್ನು ಮಾತ್ರ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಷ್ಟೇ ಅಲ್ಲದೆ ಔಷಧಿಗಳ ಗುಣಮಟ್ಟದ ಪರೀಕ್ಷೆಯಲ್ಲಿ ಭಾಗವಹಿಸಿದ 16 ಕಂಪನಿಗಳ ಔಷಧಿಗಳ ಗುಣಮಟ್ಟದಲ್ಲಿ ಕೊರತೆ ಇದೆಯೆಂದು ಫಲಿತಾಂಶದಿಂದ ತಿಳಿದುಬಂದಿದ್ದು, ಔಷಧಿಗಳ ಗುಣಮಟ್ಟದಲ್ಲಿ ಕೊರತೆ ಇದೆ ಎಂದು ತಿಳಿದರೂ ಸಹ ಆಸ್ಪತ್ರೆಗಳಿಗೆ ಯಾವುದೇ ಅಂಜಿಕೆಯಿಲ್ಲದೆ ಪೂರೈಕೆ ಮಾಡಲಾಗಿದೆ. ಇನ್ನೂ ಇದನ್ನು ಅರಿಯದ ವೈದ್ಯರು ಗುಣಮಟ್ಟವಿಲ್ಲದ ಔಷಧಿಗಳನ್ನು ರೋಗಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಪ್ರಕರಣ ರಾಜ್ಯದಲ್ಲಿ ಒಂದು ಬಾರಿ ಸದ್ದು ಮಾಡುತ್ತಿದ್ದಂತೆ, ಕೇವಲ ನಾಮ್ಕಾವಾಸ್ತೆಗೆ 16 ಕಂಪನಿಗಳ ಪೈಕಿ ಕೇವಲ ಎರಡು ಕಂಪನಿಗಳ ಮೇಲೆ ದೋಷವನ್ನು ಹೊರಿಸಿ, ಆ 2 ಕಂಪನಿಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರ್ಪಡೆ ಮಾಡಲಾಗಿತ್ತು, ಉಳಿದ 14 ಕಂಪನಿಗಳ ಕಳಪೆ ಗುಣಮಟ್ಟದ ಔಷಧಿಗಳನ್ನು ಇನ್ನು ರೋಗಿಗಳಿಗೆ ಪೂರೈಸಲಾಗುತ್ತದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ. ಇದೀಗ ಈ ಪ್ರಕರಣ ಮತ್ತೊಮ್ಮೆ ಜೀವ ಪಡೆದುಕೊಂಡಿದ್ದು ಸ್ಪೀಕರ್ ರಮೇಶ್ ಕುಮಾರ್ ರವರಿಗೆ ಮತ್ತೊಂದು ಸವಾಲು ಎದುರಾಗಿದೆ. ಒಂದು ವೇಳೆ ಲೋಕಾಯುಕ್ತ ಸಂಸ್ಥೆಯು ಮತ್ತೊಮ್ಮೆ ತನ್ನ ಬಲವನ್ನು ವಾಪಸ್ಸು ಪಡೆದುಕೊಂಡು, ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ್ದಲ್ಲಿ ರಮೇಶ್ ಕುಮಾರ್ ರವರಿಗೆ ಮತ್ತೊಂದು ಕಂಟಕ ಎದುರಾಗಲಿದೆ ಎಂದು ಅಭಿಪ್ರಾಯ ಕೇಳಿಬಂದಿದೆ. ಇದೀಗ ರಮೇಶ್ ಕುಮಾರ್ ರವರು ಯಾವ ರೀತಿ ನಡೆಯನ್ನು ಇಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.