ಕಾಶ್ಮೀರ ವಿಷಯದಲ್ಲಿ ಆಫ್ರಿದಿಗೆ ಚಪ್ಪಲಿಗೆ ಬಟ್ಟೆ ಸುತ್ತಿಕೊಂಡು ಹೊಡೆದ ಹಾಗೇ ಉತ್ತರ ನೀಡಿದ ಸಂಸದ ಗಂಭೀರ್ !

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೆಹಲಿ ಸಂಸದ ಗೌತಮ್ ಗಂಭೀರ್ ಅವರು ಒಂದು ಕಾಲದಲ್ಲಿ ಮೈದಾನದಲ್ಲಿ ರನ್ ಗಳಿಸುವ ಮೂಲಕ ಎದುರಾಳಿಗಳಿಗೆ ಕಂಟಕವಾಗುತ್ತಿದ್ದರು. ತದನಂತರ ಕ್ರಿಕೆಟ್ ಬಿಟ್ಟು ನೈಜ ಜೀವನದಲ್ಲಿ ತಮ್ಮ ನೇರ ಮಾತುಗಳ ಮೂಲಕ ವಿರೋಧಿಗಳಿಗೆ ಕಂಟಕವಾದರು, ಅದರಲ್ಲಿಯೂ ಭಾರತ ದೇಶದ ವಿರುದ್ಧ ಯಾವುದೇ ಭಾರತೀಯರಾಗಲಿ ಅಥವಾ ವಿದೇಶದವರಾಗಲಿ ಅಪ್ಪಿತಪ್ಪಿ ಒಂದು ಚಿಕ್ಕ ವಿರೋಧಿ ಹೇಳಿಕೆಯನ್ನು ನೀಡಿದ, ಕೂಡಲೇ ಅಖಾಡಕ್ಕಿಳಿಯುವ ಗಂಭೀರ್ ರವರು ಯಾರು ಎಂಬುದನ್ನು ನೋಡದೆ ನೇರವಾಗಿ ತರಾಟೆಗೆ ತೆಗೆದುಕೊಂಡು ಬೆವರಿಳಿಸುತ್ತಾರೆ. ಇನ್ನು ಪಾಕಿಸ್ತಾನದ ಮಾಜಿ ಆಟಗಾರ ಅಫ್ರಿದಿ ರವರಿಗೆ ಎರಡೆರಡು ಅವಕಾಶ. ಮೈದಾನದಲ್ಲಿ ಅಫ್ರಿದಿ ದವರಿಗೆ ಬೇವರಿಳಿಸುತ್ತಿದ್ದ ಗಂಭೀರ್ ಅವರು ಇದೀಗ ವೈಯಕ್ತಿಕ ಜೀವನದಲ್ಲಿಯೂ ಹಲವಾರು ಬಾರಿ ಬೆವರಿಳಿಸಿದ್ದಾರೆ. ಇದೀಗ ಮತ್ತೊಂದು ವಿಚಾರದಲ್ಲಿ ಪಾಕ್ ಆಟಗಾರರ ಆಫ್ರಿದಿ ರವರಿಗೆ ಖಡಕ್ ಉತ್ತರವನ್ನು ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಅಷ್ಟಕ್ಕೂ ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಇಡೀ ಭಾರತೀಯರೇ ಸಂಭ್ರಮಿಸುತ್ತಿರುವ ಭಾರತದ ಸಂವಿಧಾನದ ವಿಧಿ 370 ನ್ನು ರದ್ಧತಿಯ ಬಗ್ಗೆ ಸುಮ್ಮನೆ ಕೂರಲಾಗದ ಪಾಕ್ ಆಟಗಾರ ಅಫ್ರಿದಿ ರವರು ಟ್ವಿಟರ್ನಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ತಕ್ಕ ತಿರುಗೇಟು ನೀಡಿರುವ ಗಂಭೀರ್ ಅವರು ಮೈದಾನದಲ್ಲಿ ಹಾಗೂ ಮೈದಾನದ ಹೊರಗೂ ದೇಶದ ವಿರುದ್ಧ ಬಂದರೆ ಯಾವ ರೀತಿ ಬೌಂಡರಿ ಗೆರೆಯಾಚೆಗೆ ಬಾಲ್ ಕಳುಹಿಸುತ್ತೇನೆ ಎಂಬುದನ್ನು ತೋರಿಸಿದ್ದಾರೆ. ಅನಗತ್ಯವಾಗಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ತಾನದ ಆಟಗಾರ ಶಾಹಿದ್ ಅಫ್ರಿದಿ ರವರು ಕಾಶ್ಮೀರ ವಿಚಾರದಲ್ಲಿ ಯುನೈಟೆಡ್ ನೇಷನ್ಸ್ ಸಂಸ್ಥೆಯು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ ಟ್ವಿಟರ್ ಮೂಲಕ ಟ್ವೀಟ್ ಮಾಡಿದ್ದ ಆಫ್ರಿದಿ ರವರು ನಮ್ಮೆಲ್ಲರಂತೆ ಕಾಶ್ಮೀರಿ ಜನರಿಗೂ ಸ್ವಾತಂತ್ರ್ಯ ಬೇಕು, ಯುನೈಟೆಡ್ ನೇಷನ್ಸ್ ಸಂಸ್ಥೆ ರೂಪಿಸಿದ್ದು ಯಾವ ಕಾರಣಕ್ಕೆ?? ಸಂಸ್ಥೆಯು ನಿದ್ದೆಯ ಮಾಡುತ್ತಿದೆಯೇ?? ಕಾಶ್ಮೀರದಲ್ಲಿ ಮಾನವೀಯತೆ ವಿರುದ್ಧ ನಡೆಯುತ್ತಿರುವ ಹಿಂಸಾಚಾರ ಮತ್ತು ತೀವ್ರತೆಯನ್ನು ಈ ಕೂಡಲೇ ಅರಿತುಕೊಳ್ಳಬೇಕು. ಅಮೇರಿಕಾ ದೇಶದ ಅಧ್ಯಕ್ಷರಾದ ಟ್ರಂಪ್ ರವರು ತಮ್ಮ ಪಾತ್ರ ವಹಿಸಿ ಈ ಕೂಡಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆಗೆ ಮುಂದಾಗಬೇಕು ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ಬಿಜೆಪಿ ಪಕ್ಷದ ಸಂಸದ ಗೌತಮ್ ಗಂಭೀರ್ ಅವರ ಪ್ರತಿಕ್ರಿಯೆ ಹೀಗಿದೆ,

ಅಫ್ರಿದಿ ರವರು ಈ ವಿಚಾರದಲ್ಲಿ ಸ್ಪಷ್ಟ ವಾಗಿದ್ದಾರೆ, ಮಾನವೀಯತೆಯ ವಿರುದ್ಧ ಅನಗತ್ಯ ತೀವ್ರತೆಯ ಮತ್ತು ಹಿಂಸಾಚಾರ ಖಂಡಿತ ಇದೆ. ಇದನ್ನು ಬೆಳಕಿಗೆ ತಂದ ಆಫ್ರಿದಿ ರವರನ್ನು ಪ್ರಶಂಸೆ ಮಾಡಲೇಬೇಕು, ಆದರೆ ಒಂದು ಸಂಗತಿಯನ್ನು ಆಫ್ರಿದಿ ರವರು ಮರೆತಿದ್ದಾರೆ. ಇವೆಲ್ಲವೂ ನಡೆಯುತ್ತಿರುವುದು ಜಮ್ಮು ಹಾಗೂ ಕಾಶ್ಮೀರ ದಲ್ಲಿ ಅಲ್ಲ, ಬದಲಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಮಗನೇ ಚಿಂತಿಸಬೇಡ ಇದನ್ನು ನಾವು ಶೀಘ್ರದಲ್ಲೇ ಬಗೆಹರಿಸಿಕೊಳ್ಳಲು ಇದ್ದೇವೆ ಎಂದು ಅಫ್ರಿದಿ ಗೂಗ್ಲಿಗೆ ಸಿಕ್ಸರ್ ಮೂಲಕ ಉತ್ತರ ನೀಡಿದ್ದಾರೆ. ಅಂದರೆ ಖಂಡಿತ ಭಾರತ ಜಮ್ಮು ಹಾಗೂ ಕಾಶ್ಮೀರದ ಭಾಗವಾದ ಪಾಕ್ ಆಕ್ರಮಿತ ಕಾಶ್ಮೀರವನ್ನು ಶೀಘ್ರದಲ್ಲಿ ವಾಪಸು ಪಡೆದುಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಟಾಂಗ್ ನೀಡಿದ್ದಾರೆ.

Facebook Comments

Post Author: Ravi Yadav