ರಾಜಕೀಯ ತಂತ್ರಗಳಿಗೆ ಸಬ್ ಇನ್ಸ್ಪೆಕ್ಟರ್ ವರ್ಗಾವಣೆ ! ಬಂಟ್ವಾಳ ತಾ. ಜನರಿಂದ ಹಿಡಿಶಾಪ

ರಾಜಕೀಯ ತಂತ್ರಗಳಿಗೆ ಸಬ್ ಇನ್ಸ್ಪೆಕ್ಟರ್ ವರ್ಗಾವಣೆ ! ಬಂಟ್ವಾಳ ತಾ. ಜನರಿಂದ ಹಿಡಿಶಾಪ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಬ್ಬ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲಿಯೂ ತನ್ನ ಕಾರ್ಯ ನಿಷ್ಠೆಯನ್ನು ನಿಷ್ಠಾವಂತವಾಗೀ ನಿರ್ವಹಣೆ ಮಾಡಿದರೆ, ಪೋಲಿಸರಿಗೆ ಎದುರಾಗುವ ತೊಂದರೆಗಳು ಅಷ್ಟಿಷ್ಟಲ್ಲ. ಇಲಾಖೆ ಸೇರಿದ ನಂತರ ಯಾವ ಊರಿಗೆ ವರ್ಗಾವಣೆ ಮಾಡುತ್ತಾರೆ ಎಂಬುದನ್ನು ಮರೆತು ಹೋದ ಕಡೆಯಲ್ಲೆಲ್ಲ ತಮ್ಮ ನಿಷ್ಠೆಯನ್ನು ಪ್ರದರ್ಶಿಸುವ ಅಧಿಕಾರಿಗಳು, ಇತ್ತೀಚಿನ ಕಾಲದಲ್ಲಿ ರಾಜಕೀಯ ಒತ್ತಡಗಳಿಗೆ ಬೇರೆ ವಿಧಿ ಇಲ್ಲದೆ ಮಣಿಯುತ್ತಾರೆ. ಇನ್ನು ಕೆಲವು ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡ ಬಂದರೂ ತಮ್ಮ ಕಾರ್ಯ ನಿಷ್ಠೆಯನ್ನು ಬಿಡದೆ ಕೆಲಸ ಮಾಡುತ್ತಾರೆ, ಆದರೆ ಆ ರೀತಿ ಕೆಲಸ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ವರ್ಗಾವಣೆ ಎಂಬ ಭೂತ ಕಾಡುತ್ತದೆ ಎಂಬುದು ಅವರಿಗೂ ತಿಳಿದಿರುವ ವಿಷಯ. ಇದೇ ರೀತಿಯ ಘಟನೆ ಇದೀಗ ಬಂಟ್ವಾಳ ತಾಲೂಕಿನಲ್ಲಿ ನಡೆದಿದ್ದು, ತಾಲೂಕಿನ ಜನ ರಾಜಕೀಯ ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಒಂದು ಕಾಲದಲ್ಲಿ ಅಪರಾಧಗಳಿಂದ ನಲುಗುತ್ತಿದ್ದ ಬಂಟ್ವಾಳ ತಾಲೂಕಿನ ಜನತೆಗೆ ಇತ್ತೀಚೆಗೆ ಹೊಸ ಆಶ್ವಾಸನೆ ಸಿಕ್ಕಿತ್ತು.ಆ ಆಶ್ವಾಸನೆಯ ಹೆಸರೇ ಚಂದ್ರಶೇಖರ್, ಇವರು ಸಬ್ ಇನ್ಸ್ಪೆಕ್ಟರ್ ಆಗಿ ಬಂಟ್ವಾಳ ತಾಲೂಕಿಗೆ ಕಾಲಿಟ್ಟ ಮೇಲೆ ತಾಲೂಕಿನಲ್ಲಿ ಕೋಮುಗಲಭೆಗಳು ಕಡಿಮೆಯಾಗಿದ್ದವು. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ತಮ್ಮ ಕೆಲಸವನ್ನು ನಿಷ್ಠಾವಂತವಾಗಿ ನಿರ್ವಹಣೆ ಮಾಡಿ ತಾಲೂಕಿನ ಜನರು ನೆಮ್ಮದಿಯಾಗಿ ನಿದ್ದೆ ಮಾಡುವಂತೆ ಮಾಡಿದ ಚಂದ್ರಶೇಖರ್ ರವರು ಇದೀಗ ರಾಜಕೀಯ ಕುತಂತ್ರ ನೀತಿಗಳಿಗೆ ಬಲಿಯಾಗುತ್ತಿದ್ದಾರೆ.

ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ಒತ್ತಡಗಳಿಗೆ ಮಣಿಯದೆ ಅಕ್ಷರಸಹ ನಲುಗಿ ಹೋಗಿದ್ದ ಕಲ್ಲಡ್ಕ ಸೇರಿದಂತೆ ಬಂಟ್ವಾಳ ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದ ಇವರ ಕಾರ್ಯವೈಖರಿಯನ್ನು ಕಂಡ ರಾಜಕೀಯ ಜನತೆ ಇವರಿಂದ ನಮಗೆ ಏನು ಲಾಭವಿಲ್ಲ ಎಂಬುದನ್ನು ಬಹಳ ಬೇಗನೆ ಅರಿತಿದ್ದಾರೆ. ಇದೇ ಕಾರಣಕ್ಕಾಗಿ ಇದೀಗ ಈ ಖಡಕ್ ಅಧಿಕಾರಿಯ ವರ್ಗಾವಣೆ ನಡೆಯುತ್ತಿದೆ, ಇನ್ನು ಕೇವಲ ಎರಡು ದಿನಗಳಲ್ಲಿ ಇವರು ವರ್ಗಾವಣೆಯಾಗಿ ಮತ್ತೊಂದು ಠಾಣೆಗೆ ಹೋಗುತ್ತಾರೆ ಎಂಬ ಸತ್ಯವನ್ನು ಬಂಟ್ವಾಳ ಜನರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಇದರ ಅಧಿಕೃತ ಆದೇಶ ಹೊರ ಬಿದ್ದಿದ್ದು ಈಗಲೂ ಸಹ ಯಾವುದೇ ಪಕ್ಷದ ಹಿರಿಯ ರಾಜಕೀಯ ನಾಯಕರು ಇದರ ಪರವಾಗಿ ಧ್ವನಿ ಎತ್ತಿದ್ದ ಲ್ಲಿ ಖಂಡಿತ ಆದೇಶವನ್ನು ವಾಪಸು ಪಡೆಯುವ ಸಾಧ್ಯತೆಗಳಿವೆ. ದಯವಿಟ್ಟು ಈ ಕುರಿತು ಯಾರಾದರೂ ಧ್ವನಿಯೆತ್ತಿ, ನಿಮ್ಮ ಸಹಾಯವನ್ನು ಈ ಕ್ಷೇತ್ರದ ಜನತೆ ಎಂದಿಗೂ ಮರೆಯುವುದಿಲ್ಲ.