ಭರ್ಜರಿ ಗುಡ್ ನ್ಯೂಸ್: ಬಕ್ರೀದ್ ಹಬ್ಬಕ್ಕೆ ಬಲಿ ತಡೆಯಲು ಮಹತ್ವದ ಹೆಜ್ಜೆ ಇಟ್ಟ ಬಿಜೆಪಿ !

ಭರ್ಜರಿ ಗುಡ್ ನ್ಯೂಸ್: ಬಕ್ರೀದ್ ಹಬ್ಬಕ್ಕೆ ಬಲಿ ತಡೆಯಲು ಮಹತ್ವದ ಹೆಜ್ಜೆ ಇಟ್ಟ ಬಿಜೆಪಿ !

ಭಾರತದಲ್ಲಿ ದೇವರಿಗೆ ಅತಿ ಹೆಚ್ಚು ಬಲಿ ನೀಡಲಾಗುತ್ತದೆ ಎಂಬ ಮುಂದಾಲೋಚನೆಯಿಂದ 1959 ರಲ್ಲಿ ಹಿಂದುಗಳಮೇಲೆ ಬಲಿ ನೀಡಬಾರದು ಎಂಬ ನಿಷೇಧ ಹೇರಲಾಗಿತ್ತು. ದೇವರಿಗೆ ಗುಂಪು ಗುಂಪಿನಲ್ಲಿ ಬಲಿನೀಡಿ ಪ್ರಾಣಿಗಳ ಹತ್ಯೆ ಮಾಡಲಾಗುತ್ತದೆ ಎಂಬ ಆರೋಪ ಮಾಡಿ ಈ ಕಾನೂನನ್ನು ಜಾರಿಗೊಳಿಸಲಾಗಿತ್ತು. ಆದರೆ ಬೇರೆ ಯಾವುದೇ ಧರ್ಮಕ್ಕೂ ಇಲ್ಲದ ಕಾನೂನು ನಮಗೆ ಯಾಕೆ ಎಂದು ಹಿಂದೂಗಳು ಹೋರಾಟಮಾಡಿ 1975 ರಲ್ಲಿ ಹೋರಾಟ ಮಾಡಿ ಯಾವುದೇ ಧರ್ಮವಾಗಲಿ ಬಲಿಕೊಡುವುದು ನಿಷೇಧವಾಗಬೇಕು ಎಂದು ಕಾನೂನು ಜಾರಿಯಾಗುವಂತೆ ಮಾಡಿದ್ದರು. ಇದೀಗ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಪಕ್ಷವು ಗೋಹತ್ಯೆ ಹಾಗೂ ಇತರ ಪ್ರಾಣಿಗಳ ಬಲಿ ನೀಡುವಿಕೆಯನ್ನು ರಾಜ್ಯದಲ್ಲಿ ತಡೆಯಲು ಸಿದ್ಧವಾಗಿದೆ.

ಇದೀಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಬಕ್ರೀದ್ ಹಬ್ಬಕ್ಕೆ ಬಲಿ ನೀಡಲು ಗೋವು ಸೇರಿದಂತೆ ಹಲವಾರು ಪ್ರಾಣಿಗಳ ಸಿದ್ಧತೆ ಭರದಿಂದ ಸಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಯಲ್ಲಿದೆ ಎಂಬುದನ್ನು ಎಲ್ಲರೂ ಮರೆತಂತೆ ಕಾಣುತ್ತಿದೆ. ಕೆಲವು ಮಾರುಕಟ್ಟೆಗಳಲ್ಲಿ ಬಹಿರಂಗವಾಗಿ ಗೋವಿನ ಮಾರಾಟ ನಡೆದು, ಈಗಾಗಲೇ ಬಕ್ರೀದ್ ಹಬ್ಬಕ್ಕೆ ಬಲಿಕೊಡಲು ಗೋವಿನ ವ್ಯಾಪಾರ ಬಹುತೇಕ ಮುಗಿದು ಹೋಗಿದೆ ಇಂತಹ ಪರಿಸ್ಥಿತಿಯಲ್ಲಿ ಗೋವಿನ ಹತ್ಯೆ ತಡೆಯಲು ರಾಜ್ಯ ಬಿಜೆಪಿ ಘಟಕ ಮುಂದಾಗಿದ್ದು, ಪೊಲೀಸ್ ಮಹಾನಿರ್ದೇಶಕರ ಬಾಗಿಲು ತಟ್ಟಿದ್ದಾರೆ. ಹೌದು ಪತ್ರದ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ

ಇದೀಗ ಪೊಲೀಸ್ ನಿರ್ದೇಶಕರಿಗೆ ಮನವಿ ನೀಡಿರುವ ಬಿಜೆಪಿ ಪಕ್ಷವೂ, ಮನವಿ ಪತ್ರದಲ್ಲಿ ರಾಜ್ಯದಲ್ಲಿ ಬಲಿ ನಿಷೇಧ ಕಾಯಿದೆ 1959 ರಿಂದ ಜಾರಿಯಲ್ಲಿದೆ. 1959 ರಲ್ಲಿ ಇದು ಹಿಂದೂಗಳಿಗೆ ಮಾತ್ರ ಅನ್ವಯವಾಗಿತ್ತು, ಆದರೆ 1975 ರಲ್ಲಿ ಎಲ್ಲರಿಗೂ ಅನ್ವಯವಾಗುವಂತೆ ತಿದ್ದುಪಡಿ ಮಾಡಿರುವುದರಿಂದ ಬಕ್ರಿದ್‌ ಗೆ ಬಲಿ ನೀಡುವುದು ಕೂಡ ಕಾನೂನು ಬಾಹಿರವಾಗುತ್ತದೆ. ಇದಲ್ಲದೇ ನಮ್ಮ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಜಾರಿಯಲ್ಲಿದ್ದು, ಯಾವುದೇ ಕಾರಣಕ್ಕೂ ಗೋವುಗಳ ಕಳ್ಳತನ, ಅಕ್ರಮ ಸಾಗಣಿಕೆ ಹಾಗೂ ಹತ್ಯೆ ಮಾಡದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವುದಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹೌದು ಈ ಪತ್ರದ ಮೂಲಕ ಬಕ್ರೀದ್‌ ಹಬ್ಬಕ್ಕೆ ಗೋವುಗಳ ಸಹಿತ ಎಲ್ಲಾ ಪ್ರಾಣಿಗಳ ಕುರ್ಬಾನಿ (ಬಲಿ) ನಿಷೇದ ಇರುವ ಕಾಯಿದೆಯನ್ನು ರಾಜ್ಯದಲ್ಲಿ ಅನುಷ್ಠಮಾಡುವಂತೆ ರಾಜ್ಯ ಬಿಜೆಪಿ ಘಟಕ ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.