ಕಾಶ್ಮೀರ ವಿಚಾರದಲ್ಲಿ ಧರ್ಮವನ್ನು ಎಳೆದುತಂದ ಕುತಂತ್ರಿಗಳಿಗೆ ತಕ್ಕ ತಿರುಗೇಟು ಇರ್ಫಾನ್ ಪಠಾಣ್ !

ಕಾಶ್ಮೀರ ವಿಚಾರದಲ್ಲಿ ಧರ್ಮವನ್ನು ಎಳೆದುತಂದ ಕುತಂತ್ರಿಗಳಿಗೆ ತಕ್ಕ ತಿರುಗೇಟು ಇರ್ಫಾನ್ ಪಠಾಣ್ !

ಇಂದು ದೇಶವೇ ಹಲವಾರು ವರ್ಷಗಳಿಂದ ಕಾದು ಕುಳಿತಿದ್ದ ಘಟನೆಗೆ ಸಾಕ್ಷಿಯಾಗಿದೆ, ಇಡೀ ಭಾರತವೇ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಗೆ ಶ್ಲಾಘನೆ ಮಾಡುತ್ತಿದ್ದಾರೆ. ಆದರೆ ಕೆಲವರು ವಿನಾಕಾರಣ ಇದರಲ್ಲಿ ಹಿಂದೂ ಹಾಗೂ ಮುಸ್ಲಿಂ ಎಂಬ ಧರ್ಮಗಳನ್ನು ಎಳೆದು ತಂದು ಮೋದಿ ನೇತೃತ್ವದ ಸರ್ಕಾರದ ನಿರ್ಧಾರ ತಪ್ಪು ಎಂದು ಕಿಡಿಕಾರಿದ್ದಾರೆ. ಕೇವಲ ಮುಸಲ್ಮಾನರ ವಿರುದ್ಧ ನೀತಿ ಅನುಸರಿಸಲು ಮೋದಿ ರವರು ಈ ರೀತಿಯ ನಡೆ ಅನುಸರಿಸುತ್ತಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನೆಲೆಯೂರಿರುವ ಮುಸ್ಲಿಮರು ಸಹ ಇದೆ ಕ್ಷಣಕ್ಕಾಗಿ ಕಾಯುತ್ತಿದ್ದರು ಎಂಬುದನ್ನು ಹಲವಾರು ನಾಯಕರು ಮರೆತಂತೆ ಕಾಣುತ್ತಿದೆ. ಅದರಲ್ಲಿಯೂ ಪ್ರವಾಸಿಗಳನ್ನು ವಾಪಸ್ಸು ಕಳುಹಿಸಿದ್ದರಿಂದ ಇವರಿಗೇನೋ ನಷ್ಟವಾದಂತೆ ಧರ್ಮಗಳನ್ನು ಎಳೆದು ತಂದು ಟೀಕೆ ಮಾಡುತ್ತಿದ್ದಾರೆ, ಇದೇ ವಿಚಾರವಾಗಿ ಇರ್ಫಾನ್ ಪಠಾಣ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರ ಇರ್ಫಾನ್ ಪಠಾಣ್ ರವರು ಜಮ್ಮು ಹಾಗೂ ಕಾಶ್ಮೀರದ ರಣಜಿ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಇದೇ ಸಮಯದಲ್ಲಿ ಕೇಂದ್ರ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ಇರ್ಫಾನ್ ಪಠಾಣ್ ಸೇರಿದಂತೆ ಎಲ್ಲ ಪ್ರವಾಸಿಗಳನ್ನು ಹಾಗೂ ಅಮರನಾಥ ಯಾತ್ರಿಗಳನ್ನು ಕೂಡಲೇ ಕಾಶ್ಮೀರದಿಂದ ವಾಪಸ್ಸು ತಮ್ಮ ತಮ್ಮ ಊರುಗಳಿಗೆ ತೆರಳಲು ಆದೇಶ ನೀಡಿತ್ತು. ಭದ್ರತೆಯ ವಿಚಾರವಾಗಿ ತೆಗೆದುಕೊಂಡ ನಿರ್ಧಾರದ ಪರ ಎಲ್ಲರೂ ಸ್ವ-ಇಚ್ಛೆಯಿಂದ ಕಾಶ್ಮೀರವನ್ನು ತೊರೆದಿದ್ದರು,ಇದಕ್ಕೆ ಇರ್ಫಾನ್ ಪಠಾಣ್ ಸಹ  ಹೊರತಲ್ಲ, ಇರ್ಫಾನ್ ಪಠಾಣ್ ಅವರು ಸಹ ಸ್ವಇಚ್ಛೆಯಿಂದ ಕಾಶ್ಮೀರವನ್ನು ತೊರೆದಿದ್ದರು, ಆದರೆ ಹಲವಾರು ಜನ ಇದನ್ನು ಕಂಖಂಡನೆ ಮಾಡಿದರು, ಇದರಿಂದ ಕುಪಿತಗೊಂಡ ಇರ್ಫಾನ್ ಪಠಾಣ್ ರವರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರ್ಫಾನ್ ಪಠಾಣ್ ರವರು ಮೊದಲ ಟ್ವೀಟ್ ನಲ್ಲಿ ನಾನು ಕಾಶ್ಮೀರವನ್ನು ಇಂದು ಬಿಟ್ಟು ವಾಪಸು ಮನೆಗೆ ತೆರಳುತ್ತಿರಬಹುದು,  ಆದರೆ ನನ್ನ ಮನಸ್ಸು ಮತ್ತು ನನ್ನ ಹೃದಯ ಗಡಿಯಲ್ಲಿ ಹೋರಾಟ ಮಾಡುತ್ತಿರುವ ಭಾರತೀಯ ಯೋಧರು ಸೇರಿದಂತೆ ಜಮ್ಮು-ಕಾಶ್ಮೀರದ ಸಹೋದರ ಸಹೋದರಿಯರಿಗೆ ಮಿಡಿಯುತ್ತಿದೆ ಎಂದಿದ್ದಾರೆ. ಇನ್ನು ಇದರ ನಂತರ ಮತ್ತೊಂದು ಟ್ವೀಟ್ ನಲ್ಲಿ ಅಮರನಾಥ ಯಾತ್ರಿಗಳನ್ನು ವಾಪಸ್ಸು ಕಳುಹಿಸಿದರ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್ ರವರು,

ಅಮರನಾಥ ಯಾತ್ರೆ ಯನ್ನು ಸಜ್ಜುಗೊಳಿಸಬೇಕು ಎಂದರೆ ಭಾರತೀಯ ಸೇನೆಯು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುತ್ತದೆ, ಸಂಪೂರ್ಣ ಭದ್ರತೆ ಒದಗಿಸಿ ಅಮರನಾಥ ಯಾತ್ರೆಗೆ ಯಾತ್ರಿಗಳನ್ನು ಸಜ್ಜುಗೊಳಿಸುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಭಾರತೀಯ ಸೇನೆಯು ಅಮರನಾಥ ಯಾತ್ರಿಗಳನ್ನು ವಾಪಸ್ಸು ಕಳುಹಿಸಲು ನಿರ್ಧಾರ ಮಾಡಿದೆ ಎಂದರೆ ಖಂಡಿತ ಅದರ ಹಿಂದೆ ಒಂದು ಬಲವಾದ ಕಾರಣವಿರುತ್ತದೆ, ಬೆದರಿಕೆ ಇದ್ದ ಕಾರಣ ಯಾತ್ರೆ ನಿಲ್ಲಿಸಿ ಎಂದು ಹೇಳಿರುತ್ತಾರೆ. ಭದ್ರತೆ ವ್ಯವಸ್ಥೆ ಮಾಡಿದ್ದು ಸಹ ಬೆದರಿಕೆ ಇದ್ದ ಕಾರಣವೇ, ದಯವಿಟ್ಟು ನಿಮ್ಮ ಕೆಟ್ಟ ಆಲೋಚನೆಗಳನ್ನು ಬಿಟ್ಟು ಪ್ರತಿಯೊಂದಕ್ಕೂ ಧರ್ಮವನ್ನು ಎಳೆದು ತರಬೇಡಿ ಹಾಗೂ ಎಲ್ಲದಕ್ಕೂ ಸಾಕ್ಷಾ ಕೇಳಬೇಡಿ ಎಂದು ಮೃದುವಾದ ಮಾತುಗಳಲ್ಲಿ ಚುಚ್ಚಿದ್ದಾರೆ.