ವ್ಹಾ, ರಾಮಮಂದಿರ ಸಂಧಾನ ಮುರಿದ ನಂತರ ಯೋಗಿ ಆದಿತ್ಯನಾಥ್ ಹೇಳಿದ್ದೇನು ಗೊತ್ತಾ??

ವ್ಹಾ, ರಾಮಮಂದಿರ ಸಂಧಾನ ಮುರಿದ ನಂತರ ಯೋಗಿ ಆದಿತ್ಯನಾಥ್ ಹೇಳಿದ್ದೇನು ಗೊತ್ತಾ??

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಾಣದ ಕುರಿತು ಕೇಸನ್ನು ಪ್ರತಿದಿನ ವಿಚಾರಣೆ ಮಾಡಲಿದೆ. ಕಳೆದ ಕೆಲವು ದಿನಗಳ ಹಿಂದೆ ಸಂಧಾನಕ್ಕೆ ಪ್ರಯತ್ನಪಡಿ ಎಂದು ಆದೇಶ ನೀಡಿದ ಸುಪ್ರೀಂಕೋರ್ಟ್ ಕೊನೆಗೂ ಸಂಧಾನ ಯತ್ನ ವಿಫಲವಾದ ನಂತರ ತೀರ್ಪು ವಿಳಂಬವಾಗುತ್ತಿದೆ ಎಂಬ ಮನವಿಯನ್ನು ಅಂಗೀಕಾರ ಮಾಡಿ ಆಗಸ್ಟ್ 6 ರಿಂದ ಪ್ರತಿದಿನ ವಿಚಾರಣೆ ನಡೆಸಲು ಅನುಮತಿ ನೀಡಿದೆ. ಒಟ್ಟಿನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ರಾಮಮಂದಿರ ನಿರ್ಮಾಣದ ಕುರಿತು ತೀರ್ಪು ಹೊರ ಬೀಳುವುದು ಖಚಿತವಾದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಳಾಗಿರುವ ಯೋಗಿ ಆದಿತ್ಯನಾಥ್ ಅವರು ಪತ್ರಿಕಾಗೋಷ್ಠಿ ಕರೆದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಮಹಾಭಾರತವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡಿರುವ ಯೋಗಿ ಆದಿತ್ಯನಾಥ ರವರು ರಾಮಮಂದಿರ ನಿರ್ಮಾಣದ ಸಂಧಾನ ಸಮಿತಿಯ ಪ್ರಯತ್ನ ಕುರಿತು ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಹಲವಾರು ವರ್ಷಗಳ ರಾಮ ಜನ್ಮಭೂಮಿಯ ವಿವಾದದ ಬಗ್ಗೆ ರಚಿಸಲಾಗಿದ್ದ ಸಂಧಾನ ಸಮಿತಿಯು ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ, ಆದರೆ ಮೂವರು ಸದಸ್ಯರು ತಮ್ಮ ಶಕ್ತಿ ಮೀರಿ ಸಂಧಾನ ಮಾಡಲು ಪ್ರಯತ್ನ ಪಟ್ಟಿದ್ದನ್ನು ಶ್ಲಾಘನೆ ಮಾಡಿ, ಹಿಂದೂ ಮಹಾ ಪುರಾಣವಾದ ಮಹಾಭಾರತದ ಉದಾಹರಣೆಯನ್ನು ತೆಗೆದುಕೊಂಡಿರುವ ಯೋಗಿ ಆದಿತ್ಯನಾಥ್ ಅವರು ಸುಪ್ರೀಂಕೋರ್ಟ್ ಮೂರು ಸದಸ್ಯರ ತಂಡವನ್ನು ರಚನೆ ಮಾಡಿ ಸಂಧಾನ ಮಾಡುವಂತೆ ಸೂಚನೆ ನೀಡಿತ್ತು. ಸಂಧಾನ ವಿಫಲವಾಗಿದೆ, ಆದರೆ ನನಗೆ ಈ ಮಧ್ಯಸ್ಥಿಕೆಯಿಂದ ಏನು ಪ್ರಯೋಜನವಿಲ್ಲ ಎಂಬುದು ಮೊದಲೇ ತಿಳಿದಿತ್ತು, ಈ ಪ್ರಯತ್ನ ಬಹಳ ಒಳ್ಳೆಯದು ಮಹಾಭಾರತ ಯುದ್ಧಕ್ಕೆ ಮುನ್ನ ಇದೇ ರೀತಿಯ ಸಂಧಾನ ಪ್ರಯತ್ನ ನಡೆದಿತ್ತು, ಆದರೆ ಅಲ್ಲಿಯೂ ಫಲ ಕಂಡಿರಲಿಲ್ಲ. ಇನ್ನೇನಿದ್ದರೂ ಯುದ್ಧ  ಎಂಬಂತೆ  ಹೇಳಿಕೆ ನೀಡಿದ್ದಾರೆ. ಇದೀಗ ಈ ನೇರ ನುಡಿಗಳು ಸಾಮಾಜಿಕ  ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದ್ದು, ದಿನೇ ದಿನೇ ರಾಮ ಮಂದಿರ ನಿರ್ಮಾಣದ ಕೂಗು ಹೆಚ್ಚುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ತೀರ್ಪು ಹೊರಬೀಳಲಿದ್ದು, ಕೇಂದ್ರ ಸರ್ಕಾರದ ನಡೆ ಮೇಲೆ ಎಲ್ಲರ ಗಮನ ನೆಟ್ಟಿದೆ.