ಸುಮಲತಾ ಘರ್ಜನೆ: ಪುಟ್ಟರಾಜು ಅಕ್ರಮದ ಕುರಿತು ಸಂಸತ್ತಿನಲ್ಲಿ ಧ್ವನಿಯೆತ್ತಿದ ಮಂಡ್ಯ ಸಂಸದೆ

ಸುಮಲತಾ ಘರ್ಜನೆ: ಪುಟ್ಟರಾಜು ಅಕ್ರಮದ ಕುರಿತು ಸಂಸತ್ತಿನಲ್ಲಿ ಧ್ವನಿಯೆತ್ತಿದ ಮಂಡ್ಯ ಸಂಸದೆ

ಇಡೀ ದೇಶದಲ್ಲಿ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಭಾರಿ ಪೈಪೋಟಿ ಕಂಡುಬಂದರೂ ಕೊನೆಯ ಘಳಿಗೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಂತರದ ಮತಗಳಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ರಾಜಕೀಯ ಘಟಾನುಘಟಿಗಳಿಗೆ ಶಾಕ್ ನೀಡಿದ ಸುಮಲತಾ ರವರು ಇದೀಗ ಸಂಸದೆಯಾದ ಮೇಲೆ ಹಲವಾರು ವಿಷಯಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿದ್ದಾರೆ. ಮಂಡ್ಯ ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಪ್ರತಿಯೊಂದನ್ನು ತಮಗೆ ಸಿಗುತ್ತಿರುವ ಕಡಿಮೆ ಕಾಲಾವಕಾಶದಲ್ಲಿ ಸಂಸತ್ತಿನ ಗಮನಸೆಳೆದು ಸಮಸ್ಯೆಗೆ ಪರಿಹಾರ ಸೂಚಿಸಲು ಕೇಂದ್ರದ ಮೊರೆಹೋಗುತ್ತಿದ್ದಾರೆ.

ಇವರ ಕಾರ್ಯವೈಖರಿ ಕಂಡ ಜನ ತಾವು ನೀಡಿದ ಮತ ವ್ಯರ್ಥ ಗೊಂಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಂಡ್ಯ ಜನರ ನೀರಿನ ಸಮಸ್ಯೆ ಹಾಗೂ ಮಂಡ್ಯ ವಿಶ್ವವಿದ್ಯಾನಿಲಯದ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿಯನ್ನು ಸಲ್ಲಿಸಿರುವ ಸುಮಲತಾ ಅಂಬರೀಶ್ ರವರು ಇದೀಗ ಅಧಿಕಾರ ಪಕ್ಷ ಬಿಜೆಪಿಯು ಮಂಡಿಸಿದ ಮಸೂದೆಯನ್ನು ಬೆಂಬಲಿಸಿ ನೀಡಿರುವ ಹೇಳಿಕೆಯಲ್ಲಿ ಮಂಡ್ಯ ಜನರ ಮತ್ತೊಂದು ಕಷ್ಟವನ್ನು ಹೊರತೆಗೆದು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಸಂಪೂರ್ಣ ವಿವರಕ್ಕಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗೆ ಅಮಿತ್ ಶಾ ರವರು ಅಣೆಕಟ್ಟುಗಳ ರಕ್ಷಣಾ ಮಸೂದೆಯನ್ನು ಜಾರಿಗೆ ತಂದರು. ನೀರಿನ ವಿಷಯ ರಾಜ್ಯ ಸರ್ಕಾರದ ಅಡಿಯಲ್ಲಿ ಬಂದರೂ ಸಹ, ಕೇಂದ್ರ ಸರ್ಕಾರ ಈ ಮಸೂದೆಯನ್ನು ಅಂಗೀಕಾರ ಗೊಳಿಸಿದೆ. ಯಾಕೆಂದರೆ ಈಗಾಗಲೇ ದೇಶದ ಬಹುತೇಕ ಡ್ಯಾಂಗಳು ಹಳೆಯದಾಗಿವೆ, ನವೀಕರಣ ಹಾಗೂ ರಕ್ಷಣೆಯ ಬಗ್ಗೆ ಗಮನ ಹರಿಸದೇ ಹೋದರೆ ಯಾವ ಕ್ಷಣದಲ್ಲಿ ಬೇಕಾದರೂ ಅಪಾಯ ಎದುರಾಗಬಹುದು.ಆದ ಕಾರಣದಿಂದ ಅಣೆಕಟ್ಟು ಸಂರಕ್ಷಣಾ ಮಸೂದೆಯನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿದೆ. ಈ ಮಸೂದೆಯನ್ನು ಮಂಡಿಸುವ ಸಮಯದಲ್ಲಿ ಸುಮಲತಾ ಅಂಬರೀಶ್ ಅವರು ಮಾತನಾಡಿ ಗಮನಸೆಳೆದರು. ಮಸೂದೆಗೆ ತಮ್ಮ ಬೆಂಬಲ ಘೋಷಿಸಿದ ಸುಮಲತಾ ಅಂಬರೀಶ್ ರವರು ಕಾನೂನಿನ ಪ್ರಕಾರ ಅಣೆಕಟ್ಟು ಇರುವ ಜಾಗದಲ್ಲಿ ಸುತ್ತಮುತ್ತ 20 ಕಿಲೋಮೀಟರುಗಳಷ್ಟು ದೂರ ಯಾವುದೇ ಗಣಿಗಾರಿಕೆ ನಡೆಸುವಂತಿಲ್ಲ.

ಆದರೆ ನನ್ನ ಕ್ಷೇತ್ರದಲ್ಲಿ ಅಣೆಕಟ್ಟಿನ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಹೆಸರು ಹೇಳಲಿಕ್ಕೆ ಇಚ್ಛೆಪಡುವುದಿಲ್ಲ ಆದರೆ ಕೆಲವು ವ್ಯಕ್ತಿಗಳು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರ ಇದರ ಬಗ್ಗೆ ಗಮನಹರಿಸಿ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಶಾಸಕ ಪುಟ್ಟರಾಜು ರವರು ಕೆಆರ್ಎಸ್ ಅಣೆಕಟ್ಟಿನ ಸುತ್ತಮುತ್ತ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ, ಅಧಿಕೃತವಾಗಿ ಇವರು ಕ್ರಷರ್ ಮಿಶಿನ್ ಲೈಸನ್ಸ್ ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಇದೇ ವಿಚಾರವನ್ನು ಸುಮಲತಾ ಅಂಬರೀಶ್ ಅವರು ಕೇಂದ್ರದ ಗಮನಕ್ಕೆ ತಂದಿದ್ದಾರೆ.