ಸರ್ಜಿಕಲ್ ಸ್ಟ್ರೈಕ್ 3.0 ಗಣೇಶ ಹಬ್ಬ ಮರೆತರೆ ಅಮಿತ್ ಶಾ?? ಸೇನೆಯ ಆರ್ಭಟಕ್ಕೆ ಉತ್ತರ ನೀಡಲಾಗದೆ ಮಂಡಿಯೂರಿ ಸುಮ್ಮನಾದ ಪಾಕಿಸ್ತಾನ

ಇದೀಗ ಕಳೆದ ಕೆಲವು ದಿನಗಳ ಹಿಂದೆ ಕಾಶ್ಮೀರದಲ್ಲಿ ಆತಂಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಬಾಯಿ ಪಡೆದುಕೊಳ್ಳುತ್ತಿದ್ದ ದೇಶದ್ರೋಹಿಗಳಿಗೆ ಮರ್ಮಾಘಾತ ಎದುರಾಗಿದೆ. ಪ್ರತಿಯೊಬ್ಬ ಭಾರತೀಯನು ಅಮಿತ್ ಶಾ ರವರು ಆಗಸ್ಟ್ 15ರಂದು ಇಡೀ ಭಾರತೀಯರಿಗೆ ಗುಡ್ ನ್ಯೂಸ್ ನೀಡಲು ಕಾಶ್ಮೀರಕ್ಕೆ ಸೇನಾ ರವಾನೆ ಮಾಡುತ್ತಿದ್ದಾರೆ ಎಂದು ಆಗಸ್ಟ್ 15 ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದರು. ಆದರೆ ಇಲ್ಲಿ ಅಮಿತ್ ಶಾ ರವರು ಇಂದಿನಿಂದಲೇ ಸ್ವಾತಂತ್ರ್ಯ ದಿನೋತ್ಸವಕ್ಕೆ ಉಡುಗೊರೆಗಳನ್ನು ನೀಡಲು ಆರಂಭಿಸಿದ್ದಾರೆ. ಬಹುಶಹ ಅಮಿತ್ ಶಾ ರವರು ಆಷಾಢ ಮಾಸ ಮುಗಿದ ನಂತರ ಗಣೇಶ ಹಬ್ಬ ಬರುತ್ತದೆ ಎಂಬುದನ್ನು ಮರೆತು ದೀಪಾವಳಿ ಬರುತ್ತದೆ ಎಂದು ಕೊಂಡಂತೆ ಕಾಣುತ್ತಿದೆ, ಅದಕ್ಕಾಗಿಯೇ ನೇರವಾಗಿ ದೀಪಾವಳಿ ಹಬ್ಬ ಆಚರಿಸಲು ಭಾರತೀಯ ಸೇನೆಗೆ ಅವಕಾಶ ನೀಡಿದಂತೆ ಕಾಣುತ್ತಿದೆ. ಹೌದು ಇಂದು ಭಾರತೀಯ ಸೇನೆಯು ಪಾಕಿಸ್ತಾನ ವಶಪಡಿಸಿಕೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ ಉಗ್ರರ ನೆಲೆ ಮೇಲೆ ಭರ್ಜರಿ ದಾಳಿ ನಡೆಸಿ ವಾಪಾಸಾಗಿದೆ.

ಪಾಕ್ ಆಕ್ರಮಿತ ಗಡಿಯೊಳಗೆ ಬರೋಬ್ಬರಿ 30 ಕಿಲೋಮೀಟರ್ ನುಗ್ಗಿದ ಭಾರತೀಯ ಸೇನೆಯು ಉಗ್ರರ ತರಬೇತಿ ಕೇಂದ್ರಗಳನ್ನು ಗುರಿಯಾಗಿ ಮಾಡಿಕೊಂಡು ಆರ್ಟಿಲರಿ ಗನ್ ಗಳ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ. ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ನೆಲೆಗಳನ್ನು ನಾಶಮಾಡಿ ಹಿಂದಿರುಗಿದೆ.ಜಮ್ಮು ಕಾಶ್ಮೀರದ ನೀಲಂ ಜೇಲಂ ಪ್ರಾಜೆಕ್ಟ್ ಬಳಿ ನಿಖರ ದಾಳಿ ನಡೆಸಲಾಗಿದೆ. ಈ ಹಿಂದೆ ನಡೆದಿದ್ದ ಎಲ್ಲಾ ದಾಳಿಗಳಿಗಿಂತಲೂ ಈ ದಾಳಿ ಭಿನ್ನವಾಗಿದೆ. ಆದರೆ ಘಟನೆಯಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿಲ್ಲ. ನೀಲಂ ಜೇಲಂ ಪ್ರಾಜೆಕ್ಟ್ ಪಾಕಿಸ್ತಾನ ಕೈಗೊಳ್ಳುತ್ತಿರುವ ಜಲ ವಿದ್ಯುತ್ ಯೋಜನ ಇದಾಗಿದ್ದು, ಈ ದಾಳಿಯಿಂದ ಯೋಜನೆಗೆ ಹಾನಿಯಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿಯನ್ನು ಮಾಡಿದೆ. ಆದರೆ ಇಲ್ಲಿ ದಾಳಿ ನಡೆಯುತ್ತಿರ ಬೇಕಾದರೆ ಪಾಕಿಸ್ತಾನದ ಕಡೆಯಿಂದ ಶರಣಾಗತಿಯ ಸಡ್ಡು ಕೇಳಿಬಂದಿದೆ, ಅಂದರೆ ಯಾವುದೇ ಪ್ರತ್ಯುತ್ತರ ನೀದರೆ ಪಾಕಿಸ್ತಾನ ಸೇನೆ ಸುಮ್ಮನಾಗಿದೆ. ಎಲ್ಲಾ ಮುಗಿದು ಹೋದಮೇಲೆ ಟ್ವಿಟ್ಟರ್ ನಲ್ಲಿ ಇದೀಗ ಬಾಯಿ ಬಡೆದುಕೊಳ್ಳುತ್ತಿದೆ.

Facebook Comments

Post Author: RAVI