ಬಿಗ್ ಬ್ರೇಕಿಂಗ್- ಉದ್ದೇಶ ಬಹಿರಂಗ ಪಡಿಸಿದ್ದಾರೆಯೇ ರಾಜನಾಥ್ ಸಿಂಗ್? ಸೇನೆ ಜಮಾವಣೆಯಾಗಿರುವುದು ಇದಕ್ಕೇನಾ?

ಇದೀಗ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಿಮಗೆ ಹೆಚ್ಚಾಗಿ ಹೇಳಬೇಕೆಂದಿಲ್ಲ, ಮೂವತ್ತೈದು ಸಾವಿರಕ್ಕೂ ಹೆಚ್ಚು ಯೋಧರು ಕಾಶ್ಮೀರದಲ್ಲಿ ಜಮಾವಣೆಗೊಂಡಿದ್ದಾರೆ, ಯಾಕೆ ಎಂದು ಕಾರಣ ತಿಳಿಯುವ ಮುನ್ನವೇ  ಈಗಾಗಲೇ ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ, ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿಯಾದ ಮೆಹಬೂಬ ಮುಫ್ತಿ ರವರನ್ನು ಗೃಹಬಂಧನದಲ್ಲಿ ಇಟ್ಟು, ಪ್ರವಾಸಿಗರನ್ನು ಈ ಕೂಡಲೇ ಜಮ್ಮು-ಕಾಶ್ಮೀರ ತೊರೆಯುವಂತೆ ಆದೇಶ ನೀಡಲಾಗಿದೆ.ಈ ಎಲ್ಲ ಮಹತ್ವದ ಬೆಳವಣಿಗೆಯ ಬಗ್ಗೆ ಇದೀಗ ಮತ್ತೊಂದು ಮಹತ್ವದ ಸುದ್ದಿ ಕೇಳಿ ಬಂದಿದ್ದು, ಕೆಲವು ದಿನಗಳ ಹಿಂದೆ ರಾಜನಾಥ್ ಸಿಂಗ್ ಅವರು ಹೇಳಿದ ಮಾತು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಒಂದು ವೇಳೆ ಅದೇ ನಡೆದಲ್ಲಿ ಭಾರತೀಯರ ಸಂತಸ ಮುಗಿಲು ಮುಟ್ಟಲಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಕೆಲವು ದಿನಗಳ ಹಿಂದಷ್ಟೇ ಅಮೆರಿಕ ದೇಶದ ಹರುಕು ಬಾಯಿಯ ಅಧ್ಯಕ್ಷ ಟ್ರಂಪ್ ರವರು ಸುಖಾಸುಮ್ಮನೆ ಮೋದಿರವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾಶ್ಮೀರದ ವಿಷಯದಲ್ಲಿ ಮಾತುಕತೆಗೆ ಮಧ್ಯ ಪ್ರವೇಶಿಸಲು ಮನವಿ ಮಾಡಿದ್ದಾರೆ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಭಾರತ ಬಲವಾಗಿ ಖಂಡಿಸಿ ಟ್ರಂಪ್ ರವರಿಗೆ ತಕ್ಕ ತಿರುಗೇಟು ನೀಡಿತ್ತು. ಇದೇ ವಿಚಾರವನ್ನು ಬಳಸಿಕೊಂಡ ವಿರೋಧಪಕ್ಷಗಳು ಸಂಸತ್ತಿನಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ರಾಜನಾಥ್ ಸಿಂಗ್ ರವರು ಇನ್ನು ಮುಂದೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಮಾತುಕತೆ ನಡೆಸುವ ಸಂದರ್ಭ ಎದುರಾಗುವುದಿಲ್ಲ ಒಂದು ವೇಳೆ ಎದುರಾದರೆ ನಾವು ಕೇವಲ ಈಗಿನ ಕಾಶ್ಮೀರದ ಕುರಿತು ಮಾತನಾಡುವುದಿಲ್ಲ ಬದಲಾಗಿ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನವು ವಶಪಡಿಸಿಕೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ತೆಕ್ಕೆಗೆ ನೀಡುವಂತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಈ ವಿಷಯ ಇಡೀ ದೇಶದಲ್ಲಿ ಭಾರಿ ಸದ್ದು ಮಾಡಿತ್ತು, ಇದೀಗ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಉಗ್ರರ ತಾಣಗಳನ್ನು ನಾಶ ಮಾಡಿರುವ ಸಂದರ್ಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೊಮ್ಮೆ ಭಾರತದ ವಶಕ್ಕೆ ಪಡೆದುಕೊಂಡು ಪಾಕಿಸ್ತಾನ ಈ ಪ್ರದೇಶದಲ್ಲಿ ನಡೆಸುತ್ತಿರುವ ಉಗ್ರರ ಟ್ರೈನಿಂಗ್ ಸೆಂಟರ್ ಗಳು ಹಾಗೂ ಉಗ್ರರಿಗೆ ಕುಮ್ಮಕ್ಕು ನೀಡುವ ಎಲ್ಲ ಯೋಜನೆಗಳನ್ನು ಬಂದ್ ಮಾಡಿ ಹಳೆ ಕಾಶ್ಮೀರದ ವೈಭವನ್ನು ಮರಳಿ ತರಲು ಪ್ರಯತ್ನ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿವೆ. ಕೇವಲ ವಿಶೇಷ ಸ್ಥಾನಮಾನವನ್ನು ತೆಗೆಯುವ ಯೋಜನೆ ಅಮಿತ್ ಶಾ ರವರ ತಲೆಯಲ್ಲಿದ್ದರೆ, ಇಡೀ ಜಮ್ಮು-ಕಾಶ್ಮೀರದಲ್ಲಿ ಸೇನೆಯನ್ನು ಜಮಾವಣೆ ಮಾಡಿ, ಪ್ರತ್ಯೇಕ ವಾದಿಗಳನ್ನು ಬಂಧಿಸಿದ್ದರೆ ಅಲ್ಲಿಗೆ ಕೆಲಸ ಮುಗಿಯುತ್ತಿತ್ತು. ಆದರೆ ಪಾಕಿಸ್ತಾನದ ಮೇಲೆ ಯಾವ ಕಾರಣಕ್ಕೆ ದಾಳಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದ ಕಾರಣ ಬಹುಶಃ ಇದು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದುಕೊಳ್ಳುವ ನಡೆ ಇರಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿದೆ. ಆದರೆ ಗೃಹ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಇಲ್ಲಿಯವರೆಗೂ ಹೊರಬಿದ್ದಿಲ್ಲ.

Facebook Comments

Post Author: RAVI