ದಾಳಿ ನಂತರ ಮತ್ತೊಂದು ಆದೇಶ ಹೊರಡಿಸಿದ ಅಮಿತ್ ಶಾ ! ಕಾಶ್ಮೀರದಲ್ಲಿರುವ ದೊಡ್ಡ ಮೀನು ವಶಕ್ಕೆ ! ನಡುಗುತ್ತಿದ್ದಾರೆ ದೇಶದ್ರೋಹಿಗಳು

ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡು ಭಾರತದ ವಿರುದ್ಧ ಇಷ್ಟು ದಿವಸ ಕತ್ತಿ ಮಸೆಯುತ್ತಿದ್ದ ದೇಶದ್ರೋಹಿಗಳಿಗೆ ಇದೀಗ ಅಂತ್ಯ ಕಾಲ ಬಂದಂತೆ ಕಾಣುತ್ತಿದೆ. ಯಾವ ಕಾರಣಕ್ಕೆ ಕೇಂದ್ರ ಸರ್ಕಾರ 35 ಸಾವಿರಕ್ಕೂ ಹೆಚ್ಚು ಸೇನೆಯನ್ನು ಕಾಶ್ಮೀರ ತಲುಪಿಸಿದೆ ಎಂಬ ಅನುಮಾನಗಳು ಪ್ರಶ್ನೆಯಾಗಿ ಉಳಿದಿದ್ದ ಸಂದರ್ಭದಲ್ಲಿಯೇ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿ ಭಾರತೀಯ ಸೇನೆಯು ಪರಾಕ್ರಮವನ್ನು ಮೆರೆದಿದೆ.

ಇದೀಗ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಮತ್ತೊಂದು ಆದೇಶ ಹೊರಡಿಸಿರುವ ಅಮಿತ್ ಶಾ ರವರ ನಿರ್ಧಾರ ನೋಡಿದರೆ ಇದು ಕೇವಲ ಪಾಕಿಸ್ತಾನದ ಮೇಲೆ ನಡೆಯುವ ದಾಳಿಯ ಉದ್ದೇಶ ಆಗಿರಲಿಲ್ಲ ಎಂಬ ಮಾಹಿತಿ ಖಚಿತವಾಗಿದೆ.ಯಾಕೆಂದರೆ ಕೇವಲ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅಗತ್ಯವಿದ್ದರೆ, ಸೇನೆಯನ್ನು ಕಳುಹಿಸಿ ದಾಳಿ ಮಾಡಿ ಸುಮ್ಮನಾಗಬೇಕಿತ್ತು.

ಆದರೆ ಸದಾ ಕಾಶ್ಮೀರದ ವಿಶೇಷ ಸ್ಥಾನಮಾನಗಳಿಗೆ ಬೇಡಿಕೆ ಇಟ್ಟು ಈ ವಿಷಯಕ್ಕೆ ಬಂದರೆ ಶಾಂತಿ ಕದಡುವ ಮಾತುಗಳನ್ನು ಆಡುವ ಮೆಹಬೂಬ ಮುಫ್ತಿ ರವರನ್ನು ಇದೀಗ ಭಾರತೀಯ ಸೇನೆಯು ಗೃಹ ನಿರ್ಬಂಧನೆ ಮಾಡಿದೆ. ಹೌದು ಕಾಶ್ಮೀರದಲ್ಲಿ ನಡೆಯುತ್ತಿರುವ ಮಹತ್ವದ ಬೆಳವಣಿಗೆಗಳ ಕುರಿತು, ಒಗ್ಗಟ್ಟಾಗಿ ಹೋರಾಡಲು ಫಾರುಕ್ ಅಬ್ದುಲ್ಲಾ ರವರನ್ನು ಭೇಟಿಯಾಗಲು ತೆರಳುತ್ತಿದ್ದ ಮೆಹಬೂಬ ಮುಫ್ತಿ ರವರನ್ನು ಇದೀಗ ಭಾರತೀಯ ಸೇನೆಯು ತನ್ನ ವಶಕ್ಕೆ ತೆಗೆದುಕೊಂಡು ಗೃಹ ಬಂಧನ ಮಾಡಿದೆ.

ಪಾಕಿಸ್ತಾನದ ದಾಳಿಯ ವಿಚಾರವಾಗಿ ಈ ನಡೆ ಬೇಕಾಗಿರಲಿಲ್ಲ ಆದಕಾರಣ ಇದು ಇಷ್ಟಕ್ಕೆ ಮುಗಿಯುವುದಿಲ್ಲ, ಮುಂದೆ ಖಂಡಿತವಾಗಲೂ ಅಮಿತ್ ಶಾ ರವರು ಸ್ವಾತಂತ್ರ್ಯ ದಿನದ ಉಡುಗೊರೆಯಾಗಿ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಅದೇ ನಡೆದಲ್ಲಿ ಭಾರತದ ಕಿರೀಟದಲ್ಲಿ ಮತ್ತೊಂದು ಹೊಸ ಪರ್ವ ಆರಂಭವಾಗಲಿದೆ.

Facebook Comments

Post Author: RAVI