ಮೋದಿ ಶಾ ಜೋಡಿಯ ಮೋಡಿ ! ಮೆಹಬೂಬ ಮಸ್ತಿ ಹೇಗಿದ್ದರೂ ಹೇಗಾದರೂ ಗೊತ್ತಾ ??

ಮೋದಿ ಶಾ ಜೋಡಿಯ ಮೋಡಿ ! ಮೆಹಬೂಬ ಮಸ್ತಿ ಹೇಗಿದ್ದರೂ ಹೇಗಾದರೂ ಗೊತ್ತಾ ??

ಜಮ್ಮು-ಕಾಶ್ಮೀರದ ಮೆಹಬೂಬ ಮುಫ್ತಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದಾ ಕೇಂದ್ರ ಸರ್ಕಾರದ ನಡೆಗಳ ವಿರುದ್ಧ ಕಿಡಿಕಾರುತ್ತಾರೆ. ಕಳೆದ ಬಾರಿ ಬಿಜೆಪಿ ಪಕ್ಷ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತಂದು ಉಗ್ರರ ಸದ್ದಡಗಿಸಲು ತನ್ನದೇ ಆದ ಸರ್ಕಾರ ಬೀಳಿಸಿಕೊಂಡ ಕ್ಷಣದಿಂದಲೂ ಮೆಹಬೂಬ ಮುಫ್ತಿ ರವರು ಬಿಜೆಪಿ ಪಕ್ಷದ ವಿರುದ್ಧ ಕೆಂಡ ಕಾರುತ್ತಿದ್ದರು. ಅದರಲ್ಲಿಯೂ ಅಮಿತ್ ಶಾ ರವರು ಗೃಹ ಮಂತ್ರಿಯಾದ ಮೇಲೆ ಪ್ರತಿಯೊಂದು ಕಠಿಣ ನಿರ್ಧಾರಗಳ ವಿರುದ್ಧ ಕಿಡಿಕಾರುತ್ತಿದ್ದ ಮೆಹಬೂಬ ಮುಫ್ತಿ ರವರು, ಉಗ್ರರನ್ನು ಸದೆಬಡಿಯಲು ಜಮ್ಮು ಹಾಗೂ ಕಾಶ್ಮೀರ ಕ್ಕೆ ಸೇನಾ ಪಡೆಗಳು ತಲುಪಿದ ಕ್ಷಣದಿಂದಲೂ, ದೇಶದ ಪರವಾಗಿ ನಿಲ್ಲದೆ ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ಹೀಗೆ ಹಲವಾರು ಕೆಲಸಕ್ಕೆ ಬಾರದ ಕಾರಣಗಳನ್ನು ನೀಡುತ್ತಾ ಸದಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದರು. ಇವರೊಬ್ಬರೇ ಅಲ್ಲ ಕಾಶ್ಮೀರದ ಹಲವಾರು ರಾಜಕಾರಣಿಗಳು ಇದೇ ರೀತಿಯ ನಡುವಳಿಕೆ ತೋರುತ್ತಿದ್ದರು.

ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ಹಲವಾರು ದಿನಗಳಿಂದ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆಯುತ್ತದೆ ಎಂಬ ಕಾರಣಕ್ಕೆ ಸದಾ ಕಿಡಿಕಾರುತ್ತಿದ್ದ ಮೆಹಬೂಬ ಮುಫ್ತಿ ರವರು ಕೇಂದ್ರ ಸರ್ಕಾರಕ್ಕೆ ಕಡಕ್ ಎಚ್ಚರಿಕೆಗಳನ್ನು ನೀಡುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆದರೆ ಕಾಶ್ಮೀರ ಶಾಂತಿಯುತವಾಗಿ ಇರುವುದಿಲ್ಲ,ರಕ್ತಪಾತ ನಡೆಸುತ್ತೇವೆ, ಜಮ್ಮು-ಕಾಶ್ಮೀರ ಸುಟ್ಟು ಹೋಗುತ್ತದೆ ಎಂದೆಲ್ಲ ಹೇಳಿಕೆ ನೀಡಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ರವಾನಿಸುತ್ತಿದ್ದ ಮೆಹಬೂಬ ಮುಫ್ತಿ ರವರ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ?? ಕೆಲವು ದಿನಗಳ ಹಿಂದಷ್ಟೇ ಮೆಹಬೂಬ ಮುಫ್ತಿ ರವರ ಪರಿಸ್ಥಿತಿ ಬೇರೆಯದಾಗಿತ್ತು, ಯಾವುದಕ್ಕೂ ಹೆದರದೆ ಸದಾ ಕೇಂದ್ರ ಸರ್ಕಾರದ ವಿರುದ್ಧ ಮನಬಂದಂತೆ ಟೀಕೆಗಳನ್ನು ಮಾಡುತ್ತಿದ್ದರು.

ಆದರೆ ಇದೀಗ ಅಮಿತ್ ಶಾ ರವರ ಕಾರ್ಯವೈಖರಿಗೆ ಬೆಚ್ಚಿ ಬಿದ್ದು ತಣ್ಣಗಾಗಿದ್ದಾರೆ. ಇಷ್ಟು ದಿವಸ ಯಾವುದೇ ವಿಷಯವನ್ನಾಗಲೀ ಎಚ್ಚರಿಕೆಯ ಮೂಲಕ ಹೇಳುತ್ತಿದ್ದ ಮೆಹಬೂಬ ಮುಫ್ತಿ ರವರು ಇದೀಗ ಮೊದಲ ಬಾರಿಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಹೌದು ಪತ್ರಿಕಾಗೋಷ್ಠಿ ನಡೆಸಿದ ಮೆಹಬೂಬಾ ಮುಫ್ತಿ ರವರು ಇಸ್ಲಾಂ ಧರ್ಮದಲ್ಲಿ ಕೈಮುಗಿದು ಕೇಳಿಕೊಳ್ಳಲು ಅವಕಾಶವಿಲ್ಲ. ಆದರೆ ನಾನು ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಯನ್ನು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ ದಯವಿಟ್ಟು ವಿಶೇಷ ಸ್ಥಾನಮಾನ ತೆಗೆದುಹಾಕುವ ಯಾವ ನಿರ್ಧಾರಗಳು ಕೈಗೊಳ್ಳಬೇಡಿ, ಜನರು ಈಗಾಗಲೇ ಭಯದಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರದಲ್ಲಿ ಎಲ್ಲಿ ನೋಡಿದರೂ ಸೇನೆ ಕಾಣಿಸುತ್ತಿದೆ, ಪ್ರವಾಸಿಗರು ಹಾಗೂ ಅಮರನಾಥ ಯಾತ್ರಿಗಳನ್ನು ವಾಪಸ್ಸು ಕಳಿಸಿದರು ಉದ್ದೇಶವಾದರೂ ಏನು?? ಗವರ್ನರ್ ಅವರನ್ನು ಕೇಳಿದರೆ ಏನೂ ಇಲ್ಲ ಎನ್ನುತ್ತಾರೆ ದಯವಿಟ್ಟು ಈ ಕೂಡಲೇ ಇದರ ಬಗ್ಗೆ ನಿರ್ಣಯ ಕೈಗೊಳ್ಳಿ, ಇದು ನನ್ನ ಎಚ್ಚರಿಕೆಯಲ್ಲ ದಯವಿಟ್ಟು ನನ್ನ ಮನವಿ ಎಂದು ಭಾವಿಸಿ ಎಂದು ಕೈಮುಗಿದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.