ಫಿಲಂ ಸ್ಟೈಲ್ನಲ್ಲಿ ಅಪ್ಪನೊಂದಿಗೆ ಅವಾಜ್ ಹಾಕಿದ ಯಶ್ ಪುತ್ರಿ ಐರಾ ! ನೆಟ್ಟಿಗರು ಫಿದಾ

ಇದೀಗ ಕರ್ನಾಟಕದ ಖ್ಯಾತ ನಟ ಯಶ್ ರವರು ಕೇವಲ ಕರ್ನಾಟಕದ ಮಟ್ಟಕ್ಕೆ ಹೆಸರು ಮಾಡಿಲ್ಲ. ಬದಲಾಗಿ ಇಡೀ ದೇಶದ ಜನತೆ ಇಂದೂ ಕೆಜಿಎಫ್ ಚಿತ್ರದ ನಾಯಕ ಎಂದು ಯಶ್ ರವರನ್ನು ಗುರುತಿಸುತ್ತಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ರಿಲೀಸಾದ ಕೆಜಿಎಫ್ ಚಿತ್ರವು ಐದು ಭಾಷೆಗಳಲ್ಲಿ ತನ್ನ ಕಮಾಲ್ ಮಾಡಿತ್ತು, ಇಡೀ ವಿಶ್ವದ ಎಲ್ಲೆಡೆ ಹಲವಾರು ದೇಶಗಳಲ್ಲಿ ಈ ಚಿತ್ರ ಬಿಡುಗಡೆ ಕಂಡು ಭರ್ಜರಿ ಯಶಸ್ಸು ಸಾಧಿಸಿತ್ತು. ಇನ್ನು ಕೆಜಿಎಫ್ ಚಿತ್ರದ ಎರಡನೇ ಭಾಗ ಕ್ಕಾಗಿ ಜನರು ಕಾದು ಕುಳಿತಿದ್ದಾರೆ, ಇದೀಗ ಈ ನ್ಯಾಷನಲ್ ಸ್ಟಾರ್ ಯಶ್ ರವರು ತಮ್ಮ ಮುದ್ದು ಪುತ್ರಿ ಗೆ 8 ತಿಂಗಳು ತುಂಬಿದ ಸಂತಸದಲ್ಲಿ ತಮ್ಮೊಂದಿಗೆ ತೆಗೆಸಿಕೊಂಡಿರುವ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋದ ಕ್ಯಾಪ್ಷನ್ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಇಂಟರ್ನೆಟ್ನಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ( ಕೆಳಗಡೆ ಫೋಟೋ ಇದೆ ನೋಡಿ)

View this post on Instagram

@iamradhikapandit

A post shared by Yash (@thenameisyash) on

ಇದೇ ವೇಳೆ ಯಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಐರಾ ಜೊತೆಗೆ ಇರುವ ಫೋಟೋವನ್ನು ಹಾಕಿ, ಅದರ ಮೇಲೆ’ನಿಮ್ಮನ್ನು ನೀವು ಕೆಟ್ಟವರು ಎಂದು ತಿಳಿದುಕೊಂಡಿದ್ದರೆ, ನನ್ನ ತಂದೆ ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.

Facebook Comments

Post Author: RAVI