ಸಿದ್ದಾರ್ಥ್ ರವರ ಕುರಿತು ನಿರ್ಮಲಾ ಸೀತಾರಾಮನ್ ರವರು ಗಂಭೀರ ಮಾತುಗಳಲ್ಲಿ ಹೇಳಿದ್ದೇನು ಗೊತ್ತಾ??

ಸಿದ್ದಾರ್ಥ್ ರವರ ಕುರಿತು ನಿರ್ಮಲಾ ಸೀತಾರಾಮನ್ ರವರು ಗಂಭೀರ ಮಾತುಗಳಲ್ಲಿ ಹೇಳಿದ್ದೇನು ಗೊತ್ತಾ??

ತನ್ನದೇ ಆದ ವ್ಯಾಪಾರ ಸಾಮ್ರಾಜ್ಯ ಸೃಷ್ಟಿ ಮಾಡಿ ಸಾವಿರಾರು ಕನ್ನಡಿಗರಿಗೆ ಉದ್ಯೋಗ ನೀಡಿದ ಸಿದ್ಧಾರ್ಥ ರವರು ತಮ್ಮ ಜೀವನವನ್ನು ನೇತ್ರಾವತಿ ನದಿಯಲ್ಲಿ ಕೊನೆಗೊಳಿಸುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಸಿದ್ದಾರ್ಥ ಅವರು ನಮ್ಮೆಲ್ಲರನ್ನು ಆಗಲಿರುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಇದನ್ನು ರಾಜಕೀಯ ಲಾಭವನ್ನಾಗಿ ಮಾರ್ ಪಡಿಸಿಕೊಳ್ಳಲು ಪ್ರಯತ್ನ ಪಡುತ್ತಿರುವುದು ವಿಷಾದನೀಯ ಸಂಗತಿ. ಕೆಲವು ಪ್ರಕರಣಗಳಲ್ಲಿ ಸಿದ್ಧಾರ್ಥ ರವರಿಗೆ ಐಟಿ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಮಾತುಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವು ರಾಜಕೀಯ ನಾಯಕರು ಹಾಗೂ ಅವರ ಅಭಿಮಾನಿಗಳು ನರೇಂದ್ರ ಮೋದಿರವರ ನೀತಿಯಿಂದ ಈ ರೀತಿಯ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ದೂರುತ್ತಿದ್ದಾರೆ. ಆದರೆ ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ.

ಇನ್ನು ಸಿದ್ಧಾರ್ಥ್ ರವರ ಆತ್ಮಹತ್ಯೆ ಕುರಿತು ಯಾವುದೇ ಅಧಿಕೃತ ಕಾರಣಗಳು ತಿಳಿದುಬಂದಿಲ್ಲ ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ತಮಗಿಷ್ಟ ಬಂದ ರೀತಿ ಪೋಸ್ಟ್ಗಳನ್ನು ಹರಿದು ಬಿಡುತ್ತಿದ್ದಾರೆ. ಇನ್ನೂ ಕೆಲವರು ಇದನ್ನೇ ಲಾಭವನ್ನು ಪಡೆಯಲು ಸಿದ್ಧಾರ್ಥ ರವರ ಆತ್ಮಹತ್ಯೆಗೆ ಕಾರಣ ಇಲ್ಲಿದೆ ನೋಡಿ, ಲೈವ್ ವಿಡಿಯೋ ನೋಡಿ ಎಂದೆಲ್ಲ ಟೈಟಲ್ ಗಳನ್ನು ಹಾಕಿ ತಮ್ಮ ವೆಬ್ಸೈಟ್ಗಳಿಗೆ ಓದುಗರನ್ನು ಆಕರ್ಷಿಸಿ ಕೊಳ್ಳಲು ಇನ್ನಿಲ್ಲದ ಕುತಂತ್ರ ನೀತಿಯನ್ನು ಅನುಸರಿಸುತ್ತಿದ್ದಾರೆ. ಸಿದ್ಧಾರ್ಥ್ ರವರನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿರುವ ಜನ ಒಂದೆಡೆಯಾದರೆ ಮತ್ತೊಂದೆಡೆ ತಮಗೆ ಇಷ್ಟಬಂದ ರೀತಿಯಲ್ಲಿ ಲಾಭವಾಗಿ ಮಾರ್ಪಡಿಸಿಕೊಳ್ಳಲು ಪ್ರಯತ್ನಪಡುತ್ತಿರುವ ಜನ.

ಹೀಗಿರುವಾಗ ಭಾರತದ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ರವರು ಸಿದ್ಧಾರ್ಥ ರವರ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಲೋಕಸಭೆಯಲ್ಲಿ ಗುರುವಾರ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ತಿದ್ದುಪಡಿಗಳ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, “ಈ ದೇಶದಲ್ಲಿ ವ್ಯಾಪಾರ ವೈಫಲ್ಯಗಳು ನಿಷೇಧವಾಗಬಾರದು, ಅಥವಾ ಕೀಳಾಗಿ ನೋಡಬಾರದು. ಇದಕ್ಕೆ ತದ್ವಿರುದ್ಧವಾಗಿ, ನಾವು ಐಬಿಸಿಯ ಪತ್ರ ಮತ್ತು ಉತ್ಸಾಹದಲ್ಲಿ ಸಮಸ್ಯೆಗೆ ಗೌರವಾನ್ವಿತ ನಿರ್ಗಮನ ಅಥವಾ ಪರಿಹಾರವನ್ನು ನೀಡಬೇಕು. ”ಸಿದ್ಧಾರ್ಥ ಅವರು ಬರೆದಿರುವ ಪತ್ರದಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ಕಿರುಕುಳದ ಬಗ್ಗೆ ಉಲ್ಲೇಖವಿದೆ. ಐಟಿ ಇಲಾಖೆ ಆರೋಪಗಳನ್ನು ನಿರಾಕರಿಸಿದೆ.

ಯಾವ ಉದ್ಯಮಿಗಳಾದರೂ ಋಣ ಭಾಧ್ಯತೆ ಅಥವಾ ದಿವಾಳಿತನ ಪ್ರಕ್ರಿಯೆಯ ನೀತಿಯ ಅಡಿಯಲ್ಲಿ ತಮಗೆ ಎದುರಾಗಿರುವ ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ವಿಶ್ಲೇಷಣೆ ನೀಡಿದ್ದಾರೆ. ಈ ಪ್ರಕ್ರಿಯೆಯ ಅಡಿಯಲ್ಲಿ ನೀತಿಗೆ ಅನುಗುಣವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ತದನಂತರ ಉದ್ಯಮಿಗಳು ಗೌರವಾನ್ವಿತವಾಗಿ ನಿರ್ಗಮಿಸಬೇಕು ಎಂದು ಸಲಹೆ ನೀಡಿದ್ದಾರೆ. ಯಾರೊಬ್ಬರೂ ದೇಶದಲ್ಲಿನ ಈ ರೀತಿಯ ವ್ಯವಹಾರ ವೈಫಲ್ಯಗಳನ್ನು ನಿಷೇಧಿಸುವುದಾಗಲಿ ಅಥವಾ ಅಂತಹ ಉದ್ಯಮಿಗಳನ್ನು ಯಾವುದೇ ಕಾರಣಕ್ಕೂ ಕೀಳಾಗಿ ಕಾಣಬಾರದು, ಇಂತಹ ವಿಚಾರಗಳ ವಿರುದ್ಧ ಸರ್ಕಾರದ ಉಪಸ್ಥಿತಿಯಲ್ಲಿ ಉದ್ಯಮಿಗಳಿಗೆ ಗೌರವಾನ್ವಿತ ನಿರ್ಗಮನಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.