ಅಭಿನಂದನ್ ರವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಭಾರತೀಯ ವಾಯುಪಡೆ ಯಿಂದ ಹೊಸ ಐಡಿಯಾ ! ಏನದು ಗೊತ್ತಾ??

ಅಭಿನಂದನ್ ರವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಭಾರತೀಯ ವಾಯುಪಡೆ ಯಿಂದ ಹೊಸ ಐಡಿಯಾ ! ಏನದು ಗೊತ್ತಾ??

ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರುಳಿಸಿ ತಾನು ಪಾಕಿಸ್ತಾನದಲ್ಲಿ ಇದ್ದೇನೆ ಎಂದು ತಿಳಿದರೂ ಸಹ ಭಾರತಮಾತೆಯ ಘೋಷಣೆಗಳನ್ನು ಧೈರ್ಯವಾಗಿ ಕೂಗಿ ಭಾರತಕ್ಕೆ ಮರಳಿ ವಾಪಸ್ ಬಂದಿರುವ ವಿಂಗ್ ಕಮಾಂಡರ್ ಅಭಿನಂದನ್ ರವರು ಭಾರತೀಯರ ಮಟ್ಟಿಗೆ ಒಬ್ಬ ಹೀರೋ ಎಂಬುವುದರಲ್ಲಿ ಎರಡು ಮಾತಿಲ್ಲ. ಇಡೀ ಭಾರತೀಯ ದೇಶಭಕ್ತರು ಅಭಿನಂದನ ಅಭಿಮಾನಿಯಾಗಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಹೀಗಿರುವಾಗ ಭಾರತೀಯ ವಾಯುಪಡೆಯು ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಮುಂದಾಗಿದ್ದು, ಬಹಳ ವೇಗವಾಗಿ ಬೆಳೆಯುತ್ತಿರುವ ವಿಡಿಯೋ ಗೇಮ್ ಅಖಾಡಕ್ಕೆ ಇಳಿಯಲು ಭಾರತೀಯ ವಾಯುಪಡೆಯು ಅಭಿನಂದನ್ ರವರನ್ನು ಬಳಸಿಕೊಂಡು ವಿಶೇಷ ರೀತಿಯಲ್ಲಿ ಸಜ್ಜಾಗಿದೆ.

ಹೌದು ಇದೀಗ ಎಲ್ಲಿ ನೋಡಿದರೂ ಆನ್ಲೈನ್ ಗೇಮ್ ಗಳ ಹವಾ ಹೆಚ್ಚಾಗಿದೆ, ಅದರಲ್ಲಿಯೂ ಯುದ್ಧದ ಆಧಾರಿತ ಗೇಮ್ಗಳು ಹೆಚ್ಚು ಸದ್ದು ಮಾಡುತ್ತಿವೆ. ಇದೇ ಕಾರಣಕ್ಕಾಗಿ ಭಾರತೀಯ ವಾಯುಪಡೆಯು ಹೊಸರೀತಿಯ ಮೊಬೈಲ್ ಗೇಮ್ ಸಿದ್ದಪಡಿಸಿದ್ದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಗೇಮಿನ ಟೀಸರನ್ನು ಬಿಡುಗಡೆ ಮಾಡಿದೆ. ಈ ತಿಂಗಳ ಅಂತ್ಯದೊಳಗೆ ಈ ಗೇಮ್ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ಗಳಲ್ಲಿ ಲಭ್ಯವಾಗಲಿದ್ದು, ಟ್ರೈಲರ್ ನಲ್ಲಿ ಮಿಗ್ 21 ಯುದ್ದವಿಮಾನ ಮತ್ತು ಅದರ ಪಕ್ಕದಲ್ಲಿ ಪೈಲೆಟ್ ವಿಂಗ್ ಕಮಾಂಡರ್ ಅಭಿನಂದನ್ ರವರನ್ನು ಹೋಲುವಂತೆ ಮೀಸೆ ಯೊಂದಿಗೆ ಅನಿಮೇಟೆಡ್ ವ್ಯಕ್ತಿಯೊಬ್ಬ ಕೋಪಗೊಂಡಂತೆ ಇರುವುದು ಕಾಣಸಿಗುತ್ತದೆ. ಈ ಗೇಮಿನ ಮೂಲಕ ಭಾರತೀಯ ವಾಯುಪಡೆಯು ಗೇಮಿಂಗ್ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಿದ್ಧವಾಗಿದೆ.