ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ, ವಿಶ್ವಕಪ್ ಶ್ರೇಷ್ಠ ತಂಡ ಘೋಷಿಸಿದ ಐಸಿಸಿ ! ಸ್ಥಾನ ಪಡೆದ ಭಾರತೀಯರು ಯಾರು ಯಾರು ಗೊತ್ತಾ??

ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿ, ವಿಶ್ವಕಪ್ ಶ್ರೇಷ್ಠ ತಂಡ ಘೋಷಿಸಿದ ಐಸಿಸಿ ! ಸ್ಥಾನ ಪಡೆದ ಭಾರತೀಯರು ಯಾರು ಯಾರು ಗೊತ್ತಾ??

ವರ್ಣರಂಜಿತ ವಿಶ್ವಕಪ್ಗೆ ಈಗಾಗಲೇ ತೆರೆಬಿದ್ದಿದ್ದು ಇಂಗ್ಲೆಂಡ್ ತಂಡವು ಈ ಬಾರಿ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವದ 10 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ವಿಶ್ವದ ಬಲಾಢ್ಯ ನಾಲ್ಕು ತಂಡಗಳು ಸೆಮಿಫೈನಲಿಗೆ ತಲುಪಿದ್ದವು. ಇತ್ತ ಭಾರತ ತಂಡವೂ ಸಹ ಸೆಮಿಫೈನಲ್ ನವರಿಗೆ ಅತ್ಯುತ್ತಮ ಪ್ರದರ್ಶನ ನೀಡಿ, ಮಳೆ ಬಂದು ಪಂದ್ಯ ಮುಂದಿನ ದಿನಕ್ಕೆ ಮುಂದೂಡಿದ್ದರಿಂದ ಮೈದಾನ ಬಹಳ ವಿಚಿತ್ರವಾಗಿ ವರ್ತಿಸಿತ್ತು, ಆ ಕ್ಲಿಷ್ಟಕರ ಮೈದಾನದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ವೈಫಲ್ಯ ಕಂಡು ಸೆಮಿಫೈನಲ್ ಇಂದ ಭಾರತ ತಂಡ ನಿರ್ಗಮಿಸಿತ್ತು. ಕೊನೆಗೆ ಫೈನಲ್ನಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಶತಮಾನದ ರೋಚಕ ಪಂದ್ಯ ಎಂಬ ಖ್ಯಾತಿಗೆ ಒಳಗಾಗುವಂತೆ ಕಾದಾಟ ನಡೆಸಿದ್ದವು.

ಇದೀಗ ಈ ಟೂರ್ನಿಯ ಆಟಗಾರರ ಪ್ರದರ್ಶನದ ಮೇಲೆ ಐಸಿಸಿ ಸಂಸ್ಥೆಯು ವಿಶ್ವಕಪ್ ಟೂರ್ನಿಯ ಶ್ರೇಷ್ಠ ತಂಡವನ್ನು ಪ್ರಕಟನೆ ಮಾಡಿದ್ದು ಎಲ್ಲರೂ ಊಹಿಸಿದಂತೆ ಕೇನ್ ವಿಲಿಯಮ್ಸನ್ ರವರು ಶ್ರೇಷ್ಠ ನಾಯಕನಾಗಿ ಹೊರಬಂದು, ಈ ತಂಡದ ನಾಯಕರಾಗಿದ್ದಾರೆ. ಇನ್ನು ಇಂಗ್ಲೆಂಡ್ ತಂಡದಿಂದ ಒಟ್ಟು ನಾಲ್ಕು ಆಟಗಾರರು ಆಯ್ಕೆಯಾಗಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಭಾರತ ತಂಡದಿಂದ ತಲಾ ಎರಡು ಆಟಗಾರರು ಆಯ್ಕೆಯಾಗಿದ್ದಾರೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಾಂಗ್ಲಾದೇಶದ ಆಟಗಾರರ ಶಕೀಬ್ ಹಲ್ ಹಸನ್ ರವರು ಸೆಮಿಫೈನಲ್ ಗೆ ತಲುಪದ ತಂಡಗಳಿಂದ ಆಯ್ಕೆಯಾದ ಏಕೈಕ ಆಟಗಾರರಾಗಿದ್ದಾರೆ. ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಐನೂರಕ್ಕೂ ಹೆಚ್ಚು ರನ್ ಗಳಿಸಿ ಹತ್ತಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರನಾಗಿ ಶಕಿಬ್ ಅಲ್ ಹಸನ್ ರವರ ಹೊರಹೊಮ್ಮಿದ್ದಾರೆ.

ಇದೇ ಕಾರಣಕ್ಕಾಗಿ ಶಕಿಬ್ ಅಲ್ ಹಸನ್ ರವರನ್ನು ಆಯ್ಕೆ ಮಾಡಿರುವುದಾಗಿ ಐಸಿಸಿ ಸಂಸ್ಥೆಯು ಘೋಷಣೆ ಮಾಡಿದ್ದು, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ರವರು ಈ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಐಸಿಸಿ ಸಂಸ್ಥೆಯು, ಇಡೀ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ರವರು ತಮ್ಮ ಬ್ಯಾಟಿಂಗ್ ಕೌಶಲ್ಯದ ಮೂಲಕ ಹಾಗೂ ತಮ್ಮ ಅತ್ಯುತ್ತಮ ನಾಯಕತ್ವದ ಗುಣಗಳಿಂದ ನ್ಯೂಜಿಲೆಂಡ್ ತಂಡವನ್ನು ಕರೆದುಕೊಂಡು ಹೋಗಿದ್ದಾರೆ ಆದಕಾರಣ ಈ ಬಾರಿಯ ವಿಶ್ವಕಪ್ ಟೂರ್ನಿಯ ಶ್ರೇಷ್ಠ ತಂಡಕ್ಕೆ ಕೇನ್ ವಿಲಿಯಮ್ಸನ್ ರವರು ನಾಯಕರಾಗಿದ್ದಾರೆ ಎಂದು ತಿಳಿಸಿದೆ.

ಇನ್ನುಳಿದಂತೆ ಉಳಿದ ಹನ್ನೊಂದರ ಬಳಗವು ಈ ಕೆಳಗಿನಂತಿದ್ದು, ನ್ಯೂಜಿಲೆಂಡ್ ತಂಡದ ಮತ್ತೊಬ್ಬ ಪ್ರಮುಖ ಬೌಲರ್ ಬೋಲ್ಟ್ ರವರು 12ನೇ ಆಟಗಾರರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಹಲವಾರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿರುವುದು ಒಂದು ವಿಶೇಷ ಸಂಗತಿ. ಹನ್ನೊಂದರ ಬಳಗ: ರೋಹಿತ್ ಶರ್ಮಾ, ಜೇಸನ್ ರಾಯ್, ಕೇನ್ ವಿಲಿಯಮ್ಸನ್, ಜೋಯ್ ರೂಟ್, ಶಕಿಬ್ ಅಲ್ ಹಸನ್, ಬೆನ್ ಸ್ಟೋಕ್ಸ್, ಅಲೆಕ್ಸ್ ಕ್ಯಾರಿ, ಮಿಚೆಲ್ಸ್ ಸ್ಟಾರ್ಕ್, ಜೋಫ್ರಾ ಆಚರ್, ಲುಕಿ ಫಗರ್ಸನ್ , ಜಸ್ವಿತ್ ಬುಮ್ರಾ, ಟ್ರೆಂಟ್ ಬೋಲ್ಟ್ ( 12ನೇ ಮೀಸಲು ಆಟಗಾರ). ಈ ತಂಡದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.