ಭಾರತೀಯ ಸೇನೆಯ ಪೈಲಟ್ಗಳ ರಫೈಲ್ ಕೌಶಲ್ಯ ಕಂಡು ಬೆರಗಾದ ಫ್ರಾನ್ಸ್ !! ಸೈನಿಕರನ್ನು ಹಾಡಿ ಹೊಗಳಿದ್ದು ಹೇಗೆ ಗೊತ್ತಾ??

ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಶಕ್ತಿಶಾಲಿ ಯುದ್ಧವಿಮಾನ ಎಂದೇ ಖ್ಯಾತಿ ಪಡೆದುಕೊಂಡಿರುವ ರಫೆಲ್ ಫೈಟರ್ ಜೆಟ್ ಗಳು ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಭಾರತದ ತೆಕ್ಕೆಗೆ ಸೇರಿಕೊಳ್ಳಲಿವೆ, ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲ ರಫೆಲ್ ಭಾರತೀಯ ಸೇನೆಯ ತೆಕ್ಕೆಗೆ ಸೇರಿಸಿಕೊಳ್ಳಲಿದ್ದು ಇನ್ನೆರಡು ವರ್ಷದ ವೇಳೆಗೆ 36 ರಫೆಲ್ ಜೆಟ್ ಗಳು ಭಾರತೀಯ ಸೇನೆಯ ಬಳಕೆಗೆ ಲಭ್ಯವಾಗಲಿವೆ. ಇದರಿಂದ ಈಗಾಗಲೇ ಶತ್ರು ರಾಷ್ಟ್ರಗಳು ಅಕ್ಷರಸಹ ನಲುಗು ಹೋಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ, ಯಾಕೆಂದರೆ ರಫೆಲ್ ಯುದ್ಧ ವಿಮಾನ ಇನ್ನು ನಮ್ಮ ತೆಕ್ಕೆಗೆ ಸೇರುವ ಮುನ್ನವೇ ಬಾಲಕೋಟ್ ದಾಳಿ ಇಡೀ ವಿಶ್ವಕ್ಕೆ ಒಂದು ಮಾದರಿ ದಾಳಿಯಾಗಿತ್ತು. ಹೀಗಿರುವಾಗ ರಫೆಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಆನೆಬಲ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದೀಗ ಭಾರತಕ್ಕೆ ರಫೆಲ್ ಯುದ್ಧ ವಿಮಾನಗಳನ್ನು ರಫ್ತು ಮಾಡುತ್ತಿರುವ ಫ್ರಾನ್ಸ್ ದೇಶವು ಭಾರತೀಯ ವಾಯುಪಡೆಯ ಕೌಶಲ್ಯಗಳನ್ನು ಹಾಡಿಹೊಗಳಿದೆ, ಕಳೆದ ಐದು ವರ್ಷಗಳಿಂದ ಪ್ರತಿ ವರ್ಷಕ್ಕೊಮ್ಮೆ ನಡೆಯುತ್ತಿರುವ ಭಾರತ ಹಾಗೂ ಫ್ರಾನ್ಸ್ ನಡುವಿನ ಸಮರಭ್ಯಾಸ ಇಂದು ಕೊನೆಗೊಂಡಿದ್ದು 400 ಗಂಟೆಗಳ ಕಾಲ ಭಾರತೀಯ ಪೈಲೆಟ್ ಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ನೂರು ಗಂಟೆಗಳನ್ನು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಹಾರಾಡಿಸಿ ಶಕ್ತಿ ಪ್ರದರ್ಶನ ಮಾಡಿ ಸಮರಭ್ಯಾಸ ನಡೆಸಿದ ಭಾರತೀಯ ಯೋಧರು ಇನ್ನುಳಿದ 300 ಗಂಟೆಗಳನ್ನು ಫ್ರಾನ್ಸ್ ದೇಶದ ಹಲವಾರು ವಿವಿಧ ರೀತಿಯ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ.

ಇದೇ ವೇಳೆಯಲ್ಲಿ ಭಾರತ ಎದುರು ನೋಡುತ್ತಿರುವ ರಫೆಲ್ ಯುದ್ಧ ವಿಮಾನಗಳನ್ನು ಬಳಸಿದ ಭಾರತೀಯ ವಾಯುಪಡೆಯ ಯೋಧರ ಕೌಶಲ್ಯವನ್ನು ಫ್ರಾನ್ಸ್ ದೇಶದ ವಾಯುಪಡೆಯ ಮುಖ್ಯಸ್ಥ ಜನರಲ್ ಫಿಲಿಪ್ ಲಿವಿಗ್ನ್ ಬಹಳ ಮೆಚ್ಚಿಕೊಂಡರು. ಭಾರತೀಯ ಪೈಲೆಟ್‍ಗಳು ಅತ್ಯಂತ ಸಮರ್ಥವಾಗಿ ರಫೇಲ್ ಜೆಟ್‍ಗಳನ್ನು ಚಾಲನೆ ಮಾಡಿದ್ದಾರೆ. ಜುಲೈ ಒಂದರಿಂದ 12ರ ವರೆಗೆ ನಡೆದ ಭಾರತ ಹಾಗೂ ಫ್ರಾನ್ಸ್ ನಡುವಿನ ಸಮರಭ್ಯಾಸ ಗರುಡ-6 ನಲ್ಲಿ ಭಾರತೀಯ ಯೋಧರು ರಫೆಲ್ ಯುದ್ಧ ವಿಮಾನಗಳನ್ನು ಯಶಸ್ವಿಯಾಗಿ ಹಾರಾಟ ನಡೆಸಿ ನಿರ್ದಿಷ್ಟವಾಗಿ ಗುರಿಗಳನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ. ಇದು ಭಾರತೀಯ ವಾಯುಪಡೆಯ ಕೌಶಲ್ಯ ಎಷ್ಟರಮಟ್ಟಿಗೆ ಅಭಿವೃದ್ಧಿಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಹಾಡಿ ಹೊಗಳಿದ್ದಾರೆ.

ಇದೇ ತಾಲೀಮಿನ ವೇಳೆ ರಫೆಲ್ ಯುದ್ಧ ವಿಮಾನಗಳನ್ನು ಯಶಸ್ವಿಯಾಗಿ ಹಾರಾಟ ನಡೆಸಿದ ನಂತರ ಮಾತನಾಡಿದ ಭಾರತೀಯ ಏರ್ ಮಾರ್ಷಲ್ ರಾಕೇಶ್ ಕುಮಾರ್ ರವರು ಇದೊಂದು ಅವಿಸ್ಮರಣೀಯ ಅನುಭವ ಇತರ ಯುದ್ಧ ವಿಮಾನಗಳ ಹಾರಾಟ ನಡೆಸುವುದಕ್ಕೂ, ರಫೇಲ್ ಯುದ್ಧ ವಿಮಾನಗಳ ಹಾರಾಟ ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ. ರಫೆಲ್ ಯುದ್ಧ ವಿಮಾನಗಳ ಚಾಲನೆ ಬಹಳ ವಿಶಿಷ್ಟವಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಸಮರಭ್ಯಾಸ ನಡೆದುಕೊಂಡು ಬಂದಿದ್ದು ಎರಡು ದೇಶಗಳ ವಾಯುಪಡೆ, ನೌಕಾದಳ ಹಾಗೂ ಭೂಸೇನೆಯ ಸಿಬ್ಬಂದಿ ಈ ತಾಲೀಮಿನಲ್ಲಿ ಪಾಲ್ಗೊಂಡು ತಮ್ಮ ಶಕ್ತಿಯನ್ನು ಪ್ರದರ್ಶನ ನೀಡಿ ಸಮರಾಭ್ಯಾಸ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ವೇಳೆಯಲ್ಲಿ ಮಾತನಾಡಿದ ಫ್ರಾನ್ಸ್ ದೇಶದ ಸೇನೆಯ ಅಧ್ಯಕ್ಷ ಭಾರತ- ಫ್ರಾನ್ಸ್ ದೇಶಗಳ ನಡುವಿನ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲ ವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments

Post Author: RAVI