11 ದಿನಗಳಲ್ಲಿಯೇ ಮತ್ತೊಂದು ಸಾಧನೆ ಮಾಡಿದ ಹಿಮಾದಾಸ್ ! ಮಾಧ್ಯಮಗಳೇ ನಿಮಗೆ ಇದು ಕಾಣುತ್ತಿಲ್ಲವೇ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಕೆಲವು ಕ್ರೀಡೆಗಳು ಬಹಳ ಜನಪ್ರಿಯ ಅದರಲ್ಲಿಯೂ ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚು. 24 ಗಂಟೆಗಳ ಕಾಲ ಸುದ್ದಿಗಳನ್ನು ಪ್ರಸಾರ ಮಾಡುವ ಕೆಲವು ಮಾಧ್ಯಮಗಳು ಕ್ರಿಕೆಟಿನ ಬಗ್ಗೆ ವಿಶೇಷ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ನೋಡುಗರ ಮನ ಗೆದ್ದು ತಮ್ಮ ವಾಹಿನಿಯ ಟಿಆರ್ಪಿ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಒಂದು ಸುದ್ದಿವಾಹಿನಿ ಎಂದ ಮೇಲೆ ಪತ್ರಿಕಾ ಧರ್ಮದ ಪ್ರಕಾರ ಎಲ್ಲಾ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಬೇಕು, ಆದರೆ ಯಾವ ವಾಹಿನಿಯು ಪತ್ರಿಕಾ ಧರ್ಮವನ್ನು ಅನುಸರಿಸದೇ ತಮಗೆ ಟಿಆರ್ಪಿ ನೀಡುವ ಕೆಲಸಗಳಲ್ಲಿ ನಿರತವಾಗಿವೆ. ಆದರೆ ಇಲ್ಲಿ ಭಾರತದ ಚಿನ್ನದ ಹುಡುಗಿ ಹಿಮಾ ದಾಸ್ ರವರು ಕಳೆದ ಹನ್ನೊಂದು ದಿನಗಳಲ್ಲಿ ಅಪ್ರತಿಮ ಸಾಧನೆ ಮೆರೆದು ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಇದೀಗ ಭಾರತದ ಚಿನ್ನದ ಓಟಗಾರ್ತಿ ಹಿಮಾ ದಾಸ್ ರವರು ಕಳೆದ ಹನ್ನೊಂದು ದಿನಗಳಲ್ಲಿ ಮೂರನೇ ಬಾರಿ ಅಂತರರಾಷ್ಟ್ರೀಯ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದೀಗ ಮಹಿಳೆಯರ 200 ಮೀಟರ್ ಓಟದಲ್ಲಿ ಜಯ ಗಳಿಸಿರುವ ಹಿಮಾ ದಾಸ್ ರವರು ಕೇವಲ 23.43 ಸೆಕೆಂಡುಗಳಲ್ಲಿ ಗುರಿಯನ್ನು ಮುಟ್ಟಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಪೋಲೆಂಡಿನಲ್ಲಿ ನಡೆದ ಅಥ್ಲೆಟಿಕ್ಸ್ ನಲ್ಲಿ ಮಹಿಳೆಯರ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಹಿಮದಾಸ್ ರವರು ಅದಾದ ನಂತರ ಮತ್ತೊಮ್ಮೆ 200 ಮೀಟರ್ ಓಟದಲ್ಲಿ 23.65 ಸೆಕೆಂಡುಗಳಲ್ಲಿ ಗುರಿಯನ್ನು ಮುಟ್ಟಿ ಚಿನ್ನದ ಪದಕ ಗೆದ್ದಿದ್ದರು. ಆದರೆ ಈ ಮಾಧ್ಯಮಗಳು ಹಿಮದಾಸ್ ರವರ ಬಗ್ಗೆ ಯಾವುದೇ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ, ಕೇವಲ ಒಂದು ಚಿಕ್ಕ ವಿಷಯವೆಂಬಂತೆ ಹತ್ತು ಸೆಕೆಂಡುಗಳ ಕಾಲದಲ್ಲಿ ವೇಗದ ನ್ಯೂಸ್ ಎಂಬಂತೆ ಮುಗಿಸಿಬಿಡುತ್ತಾರೆ. ಇನ್ನು ಕೆಲವು ಮಾಧ್ಯಮಗಳು ಇದರ ಬಗ್ಗೆ ಸುದ್ದಿಯನ್ನೇ ಪ್ರಕಟಣೆ ಮಾಡಿಲ್ಲ ಎಂಬುದು ವಿಪರ್ಯಾಸದ ಸಂಗತಿ. ದಯವಿಟ್ಟು ಈ ಅಪ್ರತಿಮ ಸಾಧನೆಯನ್ನು ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.

Facebook Comments

Post Author: RAVI