ದೋಸ್ತಿಗಳಿಗೆ ಮರ್ಮಘಾತ !! ಶಿರಡಿ ಮಂದಿರದಲ್ಲಿ ಹೊಸ ಪ್ರಮಾಣಮಾಡಿದ ಅತೃಪ್ತರು ! ಸಿಎಂಗೆ ಬಿಗ್ ಶಾಕ್

ದೋಸ್ತಿಗಳಿಗೆ ಮರ್ಮಘಾತ !! ಶಿರಡಿ ಮಂದಿರದಲ್ಲಿ ಹೊಸ ಪ್ರಮಾಣಮಾಡಿದ ಅತೃಪ್ತರು ! ಸಿಎಂಗೆ ಬಿಗ್ ಶಾಕ್

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿಯ ಸರ್ಕಾರ ಯಾವ ಕ್ಷಣದಲ್ಲಿ ಬೇಕಾದರೂ ಉರುಳಬಹುದು ಎಂಬ ಮಾತುಗಳು ಹಾಗೂ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಹಲವಾರು ಶಾಸಕರ ರಾಜೀನಾಮೆ ನಂತರವೂ ಸಹ ಕುಮಾರಸ್ವಾಮಿ ಅವರು ತಾವಾಗಿಯೇ ಮುಂದೆ ಬಂದು ವಿಶ್ವಾಸಮತ ಸಾಬೀತು ಪಡಿಸುತ್ತೇನೆ ಎಂದು ಹೇಳಿ ಎಲ್ಲರ ಹುಬ್ಬೇರಿಸಿದ್ದರು. ಈ ನಡುವೆ ದೋಸ್ತಿಗಳಿಗೆ ವಿಶ್ವಾಸಮತ ಸಾಬೀತು ಪಡಿಸುವಂತೆ ರಾಜ್ಯಪಾಲರ ಕಡೆಯಿಂದ ಆದೇಶ ಹೊರಡಿಸಲು ತುದಿಗಾಲಲ್ಲಿ ಕಾದು ನಿಂತಿದ್ದ ಬಿಜೆಪಿ ಪಕ್ಷಕ್ಕೆ ಶಾಕ್ ಎದುರಾಗಿತ್ತು. ಆದರೆ ಕುಮಾರಸ್ವಾಮಿ ರವರು ಅತೃಪ್ತರನ್ನು ಮನವೊಲಿಸಿ ಕರೆದುಕೊಂಡು ಬರುವ ಆತ್ಮವಿಶ್ವಾಸದೊಂದಿಗೆ ತಾನೇ ವಿಶ್ವಾಸಮತ ಸಾಬೀತು ಪಡಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಕುಮಾರಸ್ವಾಮಿ ರವರ ಈ ನಡೆ ಬಾರಿ ಚರ್ಚೆಗೆ ಗ್ರಾಸವಾಗಿತ್ತು, ಒಂದು ಕಡೆಯಿಂದ ಬಿಜೆಪಿ ಪಕ್ಷದಿಂದ ಶಾಸಕರನ್ನು ಸೆಳೆಯಲಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಮತ್ತೊಂದೆಡೆ ಅತೃಪ್ತರನ್ನು ಮನವೊಲಿಸುವ ಕೆಲಸಕ್ಕೆ ಈಗಾಗಲೇ ದೋಸ್ತಿಗಳು ಕೈಹಾಕಿದ್ದರು. ಪರಿಸ್ಥಿತಿ ಹೀಗಿರುವಾಗ ಇಂದು ವಾರದ ಅಂತ್ಯದ ಮೂಡಿನಲ್ಲಿ ದೇವಸ್ಥಾನಕ್ಕೆ ತೆರಳಿದ ಅತೃಪ್ತರು ಹೊಸ ಶಪಥವನ್ನು ಮಾಡಿದ್ದಾರೆ. ಶಿರಡಿ ಸಾಯಿಬಾಬಾ ರವರ ಮಂದಿರದಲ್ಲಿ ಅತೃಪ್ತರ ಈ ಪ್ರಮಾಣ ದೋಸ್ತಿಗಳಿಗೆ ಹೊಸ ಶಾಕ್ ನೀಡಿದೆ. ಅಷ್ಟೇ ಅಲ್ಲದೆ ಅತೃಪ್ತರನ್ನು ಮನವೊಲಿ ಸುತ್ತೇವೆ ಎಂಬ ಅಚಲ ನಂಬಿಕೆಯಿಂದ ಬಹುಬೇಗ ವಿಶ್ವಾಸಮತ ಸಾಬೀತು ಮಾಡಲು ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದ ಕುಮಾರಸ್ವಾಮಿ ರವರಿಗೆ ಬಿಗ್ ಶಾಕ್ ಎದುರಾಗಿದೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಇಂದು ಹಲವಾರು ದೋಸ್ತಿ ನಾಯಕರು ಒಂದೆಡೆ ಅತೃಪ್ತ ಶಾಸಕರನ್ನು ಮನವೊಲಿಸಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ, ಮುಂಬೈನಲ್ಲಿ ರೆಸಾರ್ಟ್ ವಾಸ್ತವ್ಯದಲ್ಲಿ ಇರುವ 12 ಜನ ಬಂಡಾಯ ಶಾಸಕರು ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳಿದ್ದರು. ಕಾಂಗ್ರೆಸ್ ಪಕ್ಷದ 7 ಜೆಡಿಎಸ್ ಪಕ್ಷದ ಮೂರು ಹಾಗೂ ಇಬ್ಬರು ಪಕ್ಷೇತರ ಶಾಸಕರು ವಿಶ್ವಾಸಮತಕ್ಕೆ ಗೈರು ಹಾಜರಾಗಲು ನಿರ್ಧಾರ ಮಾಡಿ, ರಾಜೀನಾಮೆ ಹಿಂತೆಗೆದುಕೊಳ್ಳುವ ಪ್ರಸಂಗವೇ ಇಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ ಎನ್ನಲಾಗಿದೆ. ಅತೃಪ್ತ ಶಾಸಕರ ಈ ನಡೆ ಶಾಸಕರನ್ನು ಮನವೊಲಿಸಿ ಸರ್ಕಾರ ಉಳಿಸಿಕೊಳ್ಳುವ ಕನಸು ಕಾಣುತ್ತಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ದೊಡ್ಡ ಶಾಕ್ ನೀಡಿದೆ.

ಒಟ್ಟಿನಲ್ಲಿ ಇಂದು ರಾಮಲಿಂಗಾರೆಡ್ಡಿ, ಎಂ ಟಿ ಬಿ ನಾಗರಾಜ್ ರವರನ್ನು ಭೇಟಿ ಮಾಡಿರುವ ದೋಸ್ತಿ ಪಕ್ಷದ ನಾಯಕರು ಅತೃಪ್ತ ಶಾಸಕರನ್ನು ಭೇಟಿ ಮಾಡುವ ಕನಸು ಇಟ್ಟುಕೊಂಡಿದ್ದರು. ಆದರೆ ಈ ನಡುವೆ ಅತೃಪ್ತರು ಪ್ರಮಾಣ ಮಾಡಿರುವುದರಿಂದ ಕುಮಾರಸ್ವಾಮಿ ರವರ ಸರ್ಕಾರ ಬಹುತೇಕ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಕಳೆದುಕೊಳ್ಳುವುದು ಖಚಿತವಾಗಿದೆ. ಹೀಗಿರುವಾಗ ಕುಮಾರಸ್ವಾಮಿ ರವರು ಯಾವ ನಡೆಯ ಮೂಲಕ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ದೋಸ್ತಿ ಸರ್ಕಾರದ ಭವಿಷ್ಯ ಇನ್ನು ಕೇವಲ ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರವಾಗಲಿದೆ, ಒಂದು ವೇಳೆ ದೋಸ್ತಿ ಸರ್ಕಾರಕ್ಕೆ ಎದುರಾಗಿರುವ ಅತಿದೊಡ್ಡ ಸಂಕಷ್ಟವನ್ನು ದೋಸ್ತಿಗಳು ಎದುರಿಸಿ ಮತ್ತೊಮ್ಮೆ ಸರ್ಕಾರ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾದಲ್ಲಿ ಬಹುತೇಕ ದೋಸ್ತಿ ಸರ್ಕಾರ ಸುಭದ್ರವಾಗಲಿದೆ, ಆದರೆ ಇದಕ್ಕೆ ಅತೃಪ್ತ ಶಾಸಕರು ಅನುವು ಮಾಡಿಕೊಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.