ಬಿಜೆಪಿ ಕಾರ್ಯಕತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿ ಬಿ ಎಸ್ ವೈ

ಬಿಜೆಪಿ ಕಾರ್ಯಕತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿ ಬಿ ಎಸ್ ವೈ

ಕಳೆದ ರಾತ್ರಿಯಿಂದ ರಾಜ್ಯ ರಾಜಕಾರಣ ಅಕ್ಷರಶ ಅಲ್ಲೋಲ ಕಲ್ಲೋಲವಾಗಿತ್ತು, ಇಷ್ಟು ದಿವಸ ಶಾಸಕರ ರಾಜೀನಾಮೆ ಹಾಗೂ ಭಿನ್ನಮತಗಳಿಂದ ಬಾರಿ ಸಡ್ಡು ಮಾಡುತ್ತಿದ್ದ ರಾಜಕಾರಣ ಇದ್ದಕ್ಕಿದ್ದ ಹಾಗೇ ಹೊಸ ತಿರುವ ನೀಡುವ ಸೂಚನೆಗಳು ಕಾಣಬಂದಿದ್ದವು. ಹೌದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕೆಲವು ಹಿರಿಯ ನಾಯಕರ ಭೇಟಿಯಿಂದ ರಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ವಿಚಾರಕ್ಕೆ ಬಾರಿ ಆಕ್ರೋಶ ಕೇಳಿ ಬಂದಿತ್ತು ಅದರಲ್ಲಿಯೂ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬದ್ದ ವೈರಿಗಳಂತೆ ಕಾದಾಡಿ, ಯಾವುದಕ್ಕೂ ಜಗ್ಗದೆ ಬಿಜೆಪಿ ಗೆಲ್ಲಿಸಲು ಹಗಲು ಇರುಳು ದುಡಿದ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದಿದರು.ಮೊದಲಿಂದಲೂ ಕಾರ್ಯಕರ್ತರಿಂದ ಗೆದ್ದು ಮುಂದೆ ಬಂದಿರುವ ಪಕ್ಷಕ್ಕೆ ಒಂದು ವೇಳೆ ಈ ನಿರ್ಣಯ ಕೈಗೊಂಡಲ್ಲಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಬಹುತೇಕ ಅಂತ್ಯಗೊಂಡಂತೆ ಎಂದು ರಾಜಕೀಯ ಪಂಡಿತರು ಸಹ ಅಭಿಪ್ರಾಯ ಪಟ್ಟಿದ್ದರು ಆದರೆ ಕೊನೆಗೂ ಬಿಜೆಪಿ ಪಕ್ಷದ ಕಾರ್ಯ ಕರ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಆಕ್ರೋಶ ಹೊರಹಾಕಿದ ಕಾರ್ಯಕರ್ತರನ್ನು ನೋಡಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಕೊನೆಗೂ ಕಾರ್ಯಕರ್ತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಯಡಿಯೂರಪ್ಪ ನವರು ಜೆಡಿಎಸ್ ಜತೆ ಸರ್ಕಾರ ರಚಿಸುವುದು ಸಾಧ್ಯವೇ ಇಲ್ಲ. ಇಂತಹ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಇದು ರಾಜಕೀಯ ದೊಂಬರಾಟವಷ್ಟೇ. ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸುವುದು ಸಾಧ್ಯವಿದೆಯೇ?? ನೂರು ಬಾರಿ ಹೇಳಿದ್ದೇನೆ ಜೆಡಿಎಸ್ ಪಕ್ಷದೊಂದಿಗೆ ಒಮ್ಮೆ ಸರ್ಕಾರ ರಚಿಸಿ ಅನುಭವಿಸಿ ಸಾಕಾಗಿದೆ, ಎಂದು ಹೇಳಿಕೆ ನೀಡಿದ್ದಾರೆ.ಇದೆ ವಿಚಾರವಾಗಿ ಮಾತನಾಡಿರುವ ಶಾಸಕ ಎಂಪಿ ರೇಣುಕಾಚಾರ್ಯ ‘ಸತ್ತರೂ ನಾವು ಜೆಡಿಎಸ್ ಜತೆಗೆ ಹೋಗುವುದಿಲ್ಲ’ ಎಂದಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿಸ್ಸೀಮ. ಅಪ್ಪ ಮಕ್ಕಳ ಆಟವನ್ನು 20-20 ಸರ್ಕಾರವಿದ್ದಾಗಲೇ ನೋಡಿದ್ದೇವೆ ಎಂದು ಕಿಡಿ ಕಾರಿದ್ದಾರೆ.