ಡಿಕೆಶಿಗೆ ಬಿಗ್ ಶಾಕ್ ! ಡಿಕೆಶಿ ಬುಡಕ್ಕೆ ಮತ್ತೊಂದು ಬಾಂಬ್ ಇಟ್ಟ ಸಿದ್ದು.

ಇದೀಗ ರಾಜ್ಯ ರಾಜಕಾರಣವು ಬಾರಿ ತಲ್ಲಣಗೊಂಡಿದೆ, ಮೈತ್ರಿ ಸರ್ಕಾರ ಉರುಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ಗಿರುವಾಗ ಡಿಕೆ ಶಿವಕುಮಾರ್ ರವರು ಇನ್ನಿಲ್ಲದ ಕಸರತ್ತು ನಡೆಸಿ ಮೈತ್ರಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಅತೃಪ್ತರ ಮನವೊಲಿಸಲು ಡಿಕೆ ಶಿವಕುಮಾರ್ ಅವರು ಬಾರಿ ಪ್ರಯತ್ನ ನಡೆಸಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ, ಅಷ್ಟೇ ಅಲ್ಲದೆ ಹಲವಾರು ಬಾರಿ ಮೈತ್ರಿ ಸರ್ಕಾರ ವನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂಬ ಖ್ಯಾತಿ ಪಡೆದು ಕೊಂಡಿದ್ದರು. ಇಷ್ಟೆಲ್ಲಾ ಮಾಡಿರುವ ಡಿಕೆ ಶಿವಕುಮಾರ್ ಅವರಿಗೆ ಕೊನೆಗೆ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯರವರು ನೀಡಿರುವ ಪ್ರತಿಫಲ ಹೇಗಿದೆ ಗೊತ್ತಾ?? ಇದೀಗ ಇದೇ ಟ್ರಬಲ್ ಶೂಟರ್ ಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಹೊಸ ರೀತಿಯ ದೂರು ಹೋಗಿದೆ.

ಹೌದು ಮೈತ್ರಿ ಸರ್ಕಾರವನ್ನು ಉಳಿಸಲಿಕ್ಕೆ ಮುಂಬೈಗೆ ತೆರಳಿದ ಡಿಕೆ ಶಿವಕುಮಾರ್ ಅವರ ವಿರುದ್ಧ ಕೆರಳಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯರವರು ಇದೀಗ ಹೈಕಮಾಂಡ್ನ ಬಳಿ ಸರ್ಕಾರ ಉರುಳುವುದಕ್ಕೆ ಕಾರಣ ಯಾರು ಎಂದು ವರದಿ ನೀಡಿದ್ದಾರೆ. ಈ ವರದಿಯಲ್ಲಿ ಕೇಳಿಬಂದ ಮೊದಲ ಹೆಸರು ಡಿಕೆ ಶಿವಕುಮಾರ್, ಹೌದು ಇಷ್ಟಕ್ಕೆಲ್ಲ ಕಾರಣ ಡಿಕೆ ಶಿವಕುಮಾರ್ ಅವರು ಎಂದು ಸಿದ್ದರಾಮಯ್ಯರವರು ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ಗುಲಾಮ್ ನಬಿ ರವರಿಗೆ ಮಾಜಿ ಸಿದ್ದರಾಮಯ್ಯರವರು ಈ ವಿಚಾರವಾಗಿ ಪ್ರಸ್ತಾಪಿಸಿ, ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಡಿಕೆ ಶಿವಕುಮಾರ್ ಅವರು ಹಸ್ತಕ್ಷೇಪ ಮಾಡಿದ್ದು ಇದಕ್ಕೆಲ್ಲಾ ಕಾರಣ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜೊತೆ ಜಗಳ ಮಾಡಿಕೊಂಡ ರಮೇಶ್ ಜಾರಕಿಹೊಳಿ ಅವರು ಬಂಡಾಯ ಸಾರಿದರು ಈಗ ಅದು ಈ ಮಟ್ಟಕ್ಕೆ ಬಂದು ನಿಂತಿದೆ ಎಂದು ಹೇಳಿದ್ದಾರೆ.

Facebook Comments

Post Author: RAVI