ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ ! ಕೊನೆಗೂ ಕಠಿಣ ನಿರ್ಧಾರ ತೆಗೆದುಕೊಂಡ ಸಿಎಂ

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ ! ಕೊನೆಗೂ ಕಠಿಣ ನಿರ್ಧಾರ ತೆಗೆದುಕೊಂಡ ಸಿಎಂ

ಕಳೆದ ಒಂದು ವರ್ಷಗಳಿಂದ ಯಾವ ಕ್ಷಣದಲ್ಲಿ ಸರ್ಕಾರ ಉರುಳುತ್ತದೊ ಎಂಬ ಭೀತಿಯಿಂದ ನಿಭಾಯಿಸಿಕೊಂಡು ಬಂದಿದ್ದ ರಾಜ್ಯ ಸರ್ಕಾರ ಕೊನೆಗೂ ಅಂತಿಮ ಘಟ್ಟಕ್ಕೆ ಬಂದು ತಲುಪಿದಂತೆ ಕಾಣುತ್ತಿದೆ. ಈಗಾಗಲೇ ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ ಎರಡಂಕಿ ಮೊತ್ತ ತಲುಪಿದೆ, ಕೇವಲ 99 ಶಾಸಕರ ಬೆಂಬಲವನ್ನು ಹೊಂದಿರುವ ಮೈತ್ರಿ ಸರ್ಕಾರ, ಶಾಸಕರ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾದ ಮರುಕ್ಷಣ ಉರುಳಲಿದೆ. ಕಳೆದ ಒಂದು ವರ್ಷಗಳಿಂದ ಬಾರಿ ಆಂತರಿಕ ಯುದ್ಧವನ್ನು ಬೆನ್ನಲ್ಲಿ ಕಟ್ಟಿಕೊಂಡು ಅಧಿಕಾರ ನಡೆಸುತ್ತಿದ್ದ ಮೈತ್ರಿ ಸರ್ಕಾರಕ್ಕೆ ಕೊನೆಗೂ ಬ್ರೇಕ್ ಬೀಳುವುದು ಖಚಿತವಾಗಿದೆ, ಹೀಗಿರುವಾಗ ಕುಮಾರಸ್ವಾಮಿ ರವರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದಾರೆ ಎನ್ನಲಾಗಿದೆ. ಸಿಎಂ ಕುಮಾರಸ್ವಾಮಿ ರವರ ಆಪ್ತ ಮೂಲಗಳಿಂದ ಈ ವಿಷಯ ಹೊರ ಬಿದ್ದಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಕುಮಾರಸ್ವಾಮಿ ರವರು ರಾಜಿನಾಮೆ ಘೋಷಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಒಂದು ವೇಳೆ ಅದೇ ನಡೆದಲ್ಲಿ ಕಳೆದ ಒಂದು ವರ್ಷಗಳ ದೋಸ್ತಿ ಸರ್ಕಾರ ಅಂತ್ಯ ಕಾಣಲಿದೆ. ಇಂದು ಒಂದು ಕಡೆ ರಾಜೀನಾಮೆಯ ಮೂರನೇ ಹಂತವಾಗಿ, ಮೂರ್ನಾಲ್ಕು ಶಾಸಕರು ವಿಧಾನಸೌಧಕ್ಕೆ ರಾಜೀನಾಮೆ ನೀಡಲು ತೆರಳಿದಾಗ ಕುಮಾರಸ್ವಾಮಿ ರವರು, ದೇವೇಗೌಡರ ನಿವಾಸದಲ್ಲಿ ತಮ್ಮ ಪಕ್ಷದ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಾತನಾಡುವ ವೇಳೆ ನಾನು ಅಮೆರಿಕ ದೇಶದಿಂದ ಬರುವಾಗಲೇ ರಾಜೀನಾಮೆಗೆ ನಿರ್ಧಾರ ಮಾಡಿದ್ದೇ ಆದರೆ ಕೆಲವು ಕಾಂಗ್ರೆಸ್ ಪಕ್ಷದ ನಾಯಕರು ನನ್ನನ್ನು ತಡೆದರು, ಕೇವಲ ನನಗೆ ಅವಮಾನ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಶಾಸಕರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಪ್ತರ ಜೊತೆ ಚರ್ಚಿಸಿ ರಾಜೀನಾಮೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.