ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಜ್ಯೋತಿರಾಧಿತ್ಯ ಸಿಂಧ್ಯ ನೀಡಿದ ಶಾಕ್ ಗೆ ತತ್ತರಿಸಿದ ರಾಷ್ಟ್ರ ಕಾಂಗ್ರೆಸ್

ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್: ಜ್ಯೋತಿರಾಧಿತ್ಯ ಸಿಂಧ್ಯ ನೀಡಿದ ಶಾಕ್ ಗೆ ತತ್ತರಿಸಿದ ರಾಷ್ಟ್ರ ಕಾಂಗ್ರೆಸ್

ಇಡೀ ದೇಶದಲ್ಲಿ ಇದೀಗ ಬಿಜೆಪಿ ಪಕ್ಷದ ಅಲೆಯು ಬಹಳ ಜೋರಾಗಿ ದಡಕ್ಕೆ ಬಂದು ಅಪ್ಪಳಿಸುತ್ತದೆ. ದಡ ಏನು ಎಂದು ಕೇಳುವಿರಾ?? ಅದುವೇ ವಿರೋಧ ಪಕ್ಷ. ವಿರೋಧಪಕ್ಷಗಳು ಅಕ್ಷರಸಹ ಬಿಜೆಪಿ ಪಕ್ಷದ ಹೊಡೆತಕ್ಕೆ ನಲುಗಿ ಹೋಗಿವೆ. ನರೇಂದ್ರ ಮೋದಿ ರವರ ಅಲೆಯು ಸುನಾಮಿಯಾಗಿ ಪರಿವರ್ತನೆಗೊಂಡು ಎಲ್ಲ ಪಕ್ಷಗಳನ್ನು ಮಣಿಸಿ ಭರ್ಜರಿಯಾಗಿ ಮುನ್ನೂರಕ್ಕೂ ಹೆಚ್ಚು ಸೀಟುಗಳ ಮೂಲಕ ಅಧಿಕಾರದ ಗದ್ದುಗೆ ಏರಿದ್ದಾರೆ. ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆ ಏರಿದ ತಕ್ಷಣ, ಕೆಲವೇ ಕೆಲವು ಬೆರಳೆಣಿಕೆಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಸಹ ಅಲುಗಾಡುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರವರು ಸಹ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗೂ ಇದೇ ಮೊಟ್ಟಮೊದಲ ಬಾರಿಗೆ ಇತಿಹಾಸದಲ್ಲಿ ಗಾಂಧಿ ಕುಟುಂಬದ ಕೈಯಿಂದ ಅಧ್ಯಕ್ಷಸ್ಥಾನ ಬೇರೊಬ್ಬರಿಗೆ ಸಿಗಲಿದೆ.

ಒಂದು ಕಡೆ ಕಾಂಗ್ರೆಸ್ ಪಕ್ಷದ ನಾಯಕರು ರಾಹುಲ್ ಗಾಂಧಿ ರವರ ರಾಜೀನಾಮೆಯನ್ನು ಅರಗಿಸಿಕೊಳ್ಳಲಾಗದೆ ವಾಪಸ್ಸು ಪಡೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧ್ಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜನಮತವನ್ನು ಸ್ವೀಕರಿಸಿ ಸೋಲಿನ ಹೊಣೆ ಹೊರುತ್ತಿದ್ದೇನೆ, ಸೋಲಿನ ಹೊಣೆ ಹೊತ್ತು ನಾನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಈಗಾಗಲೇ ರಾಜೀನಾಮೆ ಪತ್ರವನ್ನು ರಾಹುಲ್ಗಾಂಧಿ ರವರಿಗೆ ಕಳುಹಿಸಿದ್ದೇನೆ, ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಜವಾಬ್ದಾರಿ ವಹಿಸಿದ ಮತ್ತು ಪಕ್ಷದ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ರಾಹುಲ್ ಗಾಂಧಿ ರವರಿಗೆ ಧನ್ಯವಾದಗಳು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಣೆ ಮಾಡುವ ಮೂಲಕ ಯುವ ನಾಯಕನ ಹುಮ್ಮಸ್ಸಿನ ನೇತೃತ್ವ ಇನ್ನು ಮುಂದೆ ಕಾಂಗ್ರೆಸ್ ಪಕ್ಷಕ್ಕೆ ದೊರೆಯುವುದಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.