ಜೆಡಿಎಸ್ಗೆ ಮರ್ಮಾಘಾತ: ಮತ್ತೊಬ್ಬ ಹಿರಿಯ ಜೆಡಿಎಸ್ ಶಾಸಕ ರಾಜೀನಾಮೆ ಖಚಿತಪಡಿಸಿದ ಹಳ್ಳಿಹಕ್ಕಿ! ದೋಸ್ತಿ ಪತನಕ್ಕೆ ಕ್ಷಣಗಣನೆ

ಜೆಡಿಎಸ್ಗೆ ಮರ್ಮಾಘಾತ: ಮತ್ತೊಬ್ಬ ಹಿರಿಯ ಜೆಡಿಎಸ್ ಶಾಸಕ ರಾಜೀನಾಮೆ ಖಚಿತಪಡಿಸಿದ ಹಳ್ಳಿಹಕ್ಕಿ! ದೋಸ್ತಿ ಪತನಕ್ಕೆ ಕ್ಷಣಗಣನೆ

ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಕ್ರಾಂತಿಗೆ ಬಿಜೆಪಿ ಪಕ್ಷವಂತೂ ಕಾರಣವಲ್ಲ ಎಂಬುದು ಎಲ್ಲರಿಗೂ ತಿಳಿದು ಹೋಗಿದೆ. ಈಗಾಗಲೇ ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ರಾಜೀನಾಮೆ ಗಳಿಗೆ ಸ್ಪಷ್ಟ ಕಾರಣವನ್ನು ತಿಳಿಸಿ, ಕುಮಾರಸ್ವಾಮಿರವರ ನೇತೃತ್ವದ ಸರ್ಕಾರದ ವೈಫಲ್ಯವೇ ನಮ್ಮ ರಾಜಿನಾಮೆಗೆ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಒಬ್ಬೊಬ್ಬ ಶಾಸಕರು ಒಂದೊಂದು ಕಾರಣವನ್ನು ಹೊರಗೆ ಇಟ್ಟು, ರಾಜೀನಾಮೆ ನೀಡಿ ಇದೀಗ ಕೆಲವರು ರೆಸಾರ್ಟ್ ಸೇರಿಕೊಂಡಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನಲ್ಲಿ ಉಳಿದು ರಾಜಕೀಯ ಕ್ರಾಂತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ತಮ್ಮ ವಿದೇಶ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಆಗಮಿಸಿ ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಈ ಎಲ್ಲಾ ವಿದ್ಯಮಾನಗಳ ನಡುವೆ ಕುಮಾರಸ್ವಾಮಿರವರ ನೇತೃತ್ವದ ವಿರುದ್ಧ ಸಿಡಿದೆದ್ದು, ರಾಜೀನಾಮೆ ನೀಡಿರುವ ಮಾಜಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್ ರವರು ಹೊಸ ಬಾಂಬ್ ಸಿಡಿಸಿದ್ದಾರೆ. ರಾಜೀನಾಮೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವನಾಥ್ ರವರು ತಮ್ಮ ರಾಜೀನಾಮೆಗೆ ಕುಮಾರಸ್ವಾಮಿ ರವರು ಪಕ್ಷದಲ್ಲಿ ನನ್ನ ಮಾತಿಗೆ ಯಾವುದೇ ಮನ್ನಣೆ ಕೊಡಲಿಲ್ಲ ಹೆಸರಿಗೆ ಮಾತ್ರ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದೆ, ಈಗಾಗಲೇ ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಸಂಪೂರ್ಣವಾಗಿ ವಾಷ್ ಔಟ್ ಆಗಿದೆ. ಜೆಡಿಎಸ್ ನಾಯಕರ ನಡುವಳಿಕೆ ಬಹುತೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಅದರಲ್ಲಿಯೂ ಸಾರಾ ಮಹೇಶ್ ಅವರ ನಡವಳಿಕೆ ಸಂಪೂರ್ಣವಾಗಿ ಸರಿ ಇಲ್ಲ ಎಂದು ಹೇಳಿಕೆ ನೀಡಿದ್ದರು.

ಇದೀಗ ಮತ್ತೊಮ್ಮೆ ಮಾಧ್ಯಮಗಳಿಗೆ ಮಾಹಿತಿ ಮುಟ್ಟಿಸಿರುವ ವಿಶ್ವನಾಥ್ ರವರು, ಜೆಡಿಎಸ್ ಪಕ್ಷದ ನಾಯಕರ ನಡವಳಿಕೆ ಪಕ್ಷದ ಬಹುತೇಕ ಶಾಸಕರಿಗೆ ಇಷ್ಟವಾಗುತ್ತಿಲ್ಲ, ಇನ್ನು ಸಚಿವ ಸಾರಾ ಮಹೇಶ್ ರವರು ಭಿನ್ನವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಯಾರಿಗೂ ಸಹ ಇಷ್ಟವಾಗುತ್ತಿಲ್ಲ, ಇದೇ ಕಾರಣವನ್ನು ಮುಂದಿಟ್ಟು ಕೊಂಡು ಜೆಡಿಎಸ್ ಪಕ್ಷದ ಹಿರಿಯ ನಾಯಕ ಜಿ ಟಿ ದೇವೇಗೌಡ ರವರು ಸಂಪೂರ್ಣವಾಗಿ ಬೇಸತ್ತಿದ್ದಾರೆ. ನೋಡುತ್ತಿರಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ಅವರು ರಾಜೀನಾಮೆ ನೀಡುತ್ತಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಇದೀಗ ಈ ಸುದ್ದಿ ರಾಜ್ಯರಾಜಕಾರಣದಲ್ಲಿ ಮತ್ತೊಂದು ಅಲೆಯನ್ನು ಸೃಷ್ಟಿಸಿದ್ದು, ಜೆಡಿಎಸ್ ಪಕ್ಷವು ನಡುಗಿ ಹೋಗಿದೆ. ಒಂದು ವೇಳೆ ಅದೇ ನಡೆದಲ್ಲಿ ಹಳೆ ಮೈಸೂರು ಭಾಗದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದ ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದಂತಾಗುತ್ತದೆ.

ಇತ್ತೀಚೆಗೆ ಜಿಟಿ ದೇವೇಗೌಡರು ಸಹ ಹಲವಾರು ಬಾರಿ ನರೇಂದ್ರ ಮೋದಿ ರವರ ಕಾರ್ಯವೈಖರಿಗೆ ಬೇಶ್ ಎಂದಿದ್ದರು, ಆದರೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೀರ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಒಳ್ಳೆಯ ಕೆಲಸ ಯಾರೇ ಮಾಡಲಿ ಅವರನ್ನು ಅಭಿನಂದಿಸಬೇಕು. ಆದ ಕಾರಣಕ್ಕೆ ನರೇಂದ್ರ ಮೋದಿರವರ ಕಾರ್ಯವನ್ನು ಅಭಿನಂದಿಸುತ್ತಿದ್ದೇನೆ. ಅಭಿನಂದಿಸಿದ ತಕ್ಷಣ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದ ದೇವೇಗೌಡರ ಬಗ್ಗೆ ಹೆಚ್ ವಿಶ್ವನಾಥ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜಿನಾಮೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಜಿಟಿ ದೇವೇಗೌಡರು ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಬೆಂಗಳೂರಿಗೆ ಹೋಗಿ ತದನಂತರ ಮಾತನಾಡುತ್ತೇನೆ ಎಂದು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.