ಬಿಗ್ ನ್ಯೂಸ್: ಬಿಜೆಪಿ ಫುಲ್ ಖುಷ್! ಸರ್ಕಾರ ಪತನವಾದರೆ 2 ಕಡೆ ಸರ್ಕಾರ ರಚಿಸುವ ಅವಕಾಶ ಪಡೆಯಲಿದೆ ಬಿಜೆಪಿ ! ಹೇಗೆ ಗೊತ್ತಾ??

ಬಿಗ್ ನ್ಯೂಸ್: ಬಿಜೆಪಿ ಫುಲ್ ಖುಷ್! ಸರ್ಕಾರ ಪತನವಾದರೆ 2 ಕಡೆ ಸರ್ಕಾರ ರಚಿಸುವ ಅವಕಾಶ ಪಡೆಯಲಿದೆ ಬಿಜೆಪಿ ! ಹೇಗೆ ಗೊತ್ತಾ??

ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ರಾಜ್ಯರಾಜಕಾರಣದಲ್ಲಿ ಯಾರೂ ಊಹಿಸದ ರೀತಿಯಲ್ಲಿ ರಾಜಕೀಯ ಕ್ರಾಂತಿ ನಡೆದಿದೆ. ಸರ್ಕಾರ ಸುಭದ್ರವಾಗಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಿಸ್ವಾರ್ಥವಾಗಿ ದುಡಿಯುತ್ತಿರುವ ಹಲವಾರು ನಾಯಕರು ತಮ್ಮ ನಾಯಕರ ಕಾರ್ಯವೈಖರಿಯ ವಿರುದ್ಧ ಬೇಸತ್ತು ರಾಜೀನಾಮೆ ನೀಡಿ ಎಲ್ಲರ ಹುಬ್ಬೇರಿಸಿದ್ದಾರೆ. ತಪ್ಪು ಮಾಡಿದರೂ ತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳುವ ಈ ಕಾಲದಲ್ಲಿ ತಮ್ಮದೇ ನಾಯಕರ ವಿರುದ್ಧ ಸಿಡಿದೆದ್ದು, ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪವನ್ನು ಮಾಡಿ ರಾಜೀನಾಮೆ ನೀಡಿ ದೋಸ್ತಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ಇನ್ನು ಕೇವಲ ಎರಡು ಶಾಸಕರು ರಾಜೀನಾಮೆ ನೀಡಿದ್ದಲ್ಲಿ ಬಿಜೆಪಿ ಪಕ್ಷವು ಬಹುಮತ ಸಾಬೀತುಪಡಿಸಲು ಬೇಕಾದ ಸಂಖ್ಯೆಯನ್ನು ಪಡೆಯಲಿದ್ದು ಸರ್ಕಾರ ರಚನೆ ಮಾಡಲಿದೆ, ಆದರೆ ಸಂಪೂರ್ಣವಾಗಿ ರಾಜೀನಾಮೆಗಳು ಅಂಗೀಕಾರವಾಗಿ, ದೋಸ್ತಿಗಳ ಸಂಖ್ಯಾಬಲ ಖಚಿತವಾಗಿ ಕುಸಿದ ನಂತರ ಸರ್ಕಾರ ರಚಿಸುವ ಯೋಚನೆ ಮಾಡುತ್ತೇವೆ ಎಂದು ಯಡಿಯೂರಪ್ಪನವರು ಹೇಳಿಕೆ ನೀಡಿದ್ದಾರೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಒಂದು ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿ ಮುರಿದು ಕೊಂಡು, ಎಲ್ಲಾ ಶಾಸಕರ ರಾಜೀನಾಮೆ ಸ್ವೀಕಾರ ಗೊಂಡ ನಂತರ ಸರ್ಕಾರ ಉರುಳಿದರೆ ಕೇವಲ ರಾಜ್ಯದ ಅಧಿಕಾರದ ಗದ್ದುಗೆ ಅಷ್ಟೇ ಅಲ್ಲದೆ ಬಿಜೆಪಿ ಪಕ್ಷಕ್ಕೆ ಮತ್ತೊಂದು ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಅದು ಹೇಗೆ ಅಂತೀರಾ?? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ. ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಪಕ್ಷವು ಹೆಚ್ಚು ಸಂಖ್ಯಾಬಲವನ್ನು ಹೊಂದಿದ್ದರೂ ಸಹ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವು ಜನಾದೇಶವನ್ನು ತಿರಸ್ಕರಿಸಿ ಬೆಂಗಳೂರು ಮಹಾನಗರಪಾಲಿಕೆಯ ಅಧಿಕಾರದ ಗದ್ದುಗೆ ಏರಲಿಕ್ಕೆ, ಶಾಸಕರ, ರಾಜ್ಯಸಭಾ ಸದಸ್ಯರ ಹಾಗೂ ವಿಧಾನಪರಿಷತ್ ಸದಸ್ಯರ ಬೆಂಬಲ ಪಡೆದು ಬಹುಮತವನ್ನು ಸಾಬೀತು ಮಾಡಿ ಅಧಿಕಾರದ ಗದ್ದುಗೆಗೆ ಏರಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿದ್ದರು.

ಆದರೆ ಇದೀಗ 13ಶಾಸಕರ ಪೈಕಿಂಗ್ ಬೆಂಗಳೂರಿನ ಐದು ಪ್ರಭಾವಿ ಶಾಸಕರು ರಾಜೀನಾಮೆ ನೀಡಿರುವ ಕಾರಣ, ಈ ಎಲ್ಲಾ ಶಾಸಕರು ಬೆಂಗಳೂರು ಮಹಾನಗರ ಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಒಂದು ವೇಳೆ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಬೆಂಗಳೂರು ಮಹಾನಗರ ಪಾಲಿಕೆಯ ಮೈತ್ರಿ ಆಡಳಿತದ ಸಂಖ್ಯಾಬಲ ಕುಸಿಯಲಿದೆ. ಈಗಾಗಲೇ 137 ಸದಸ್ಯರ ಬಲ ಹೊಂದಿರುವ ದೋಸ್ತಿ ಗಳಲ್ಲಿ ಆರು ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಅಂಗೀಕಾರವಾದರೆ 131 ಕ್ಕೆ ಕುಸಿಯಲಿದೆ, ಇದರಿಂದ 126 ಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿ ಪಕ್ಷವು ಪಾಲಿಕೆಯಲ್ಲಿರುವ ರಾಮಲಿಂಗ ರೆಡ್ಡಿ ರವರ ಪಕ್ಕ ಬೆಂಬಲಿಗರಾದ ಹಾಲಿ ಮೇಯರ್ ಗಂಗಾಂಬಿಕೆ, ಮಾಜಿ ಮೇಯರ್ ಮಂಜುನಾಥರೆಡ್ಡಿ ಸೇರಿದಂತೆ ಹಲವಾರು ಕಾಂಗ್ರೆಸ್ ಸದಸ್ಯರನ್ನು ತನ್ನತ್ತ ಸೆಳೆದುಕೊಂಡು ಅಡ್ಡಮತದಾನ ಮಾಡಿಸಿ ಅಧಿಕಾರದ ಗದ್ದುಗೆ ಏರಬಹುದು.

ಇನ್ನು ರಾಜೀನಾಮೆ ನೀಡಿರುವ ಶಾಸಕ ಗೋಪಾಲಯ್ಯ ರವರ ಪತ್ನಿ ಸೇರಿದಂತೆ ಬೆಂಬಲಿಗ ಸದಸ್ಯರು ಕೂಡ ಚುನಾವಣೆಯ ವೇಳೆ ಅಡ್ಡಮತದಾನ ಮಾಡಬಹುದು. ಇದರಿಂದ ನಾಲ್ಕು ವರ್ಷಗಳಿಂದ ಮೈತ್ರಿ ಹಿಡಿತದಲ್ಲಿರುವ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಾರಿ ಬಿಜೆಪಿ ಪಕ್ಷದ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಲಿವೆ. ಶಾಸಕರ ಪಕ್ಷಾಂತರ ಪರ್ವ ನಡೆದಲ್ಲಿ ಶಾಸಕರ ಹೆಸರನ್ನು ಬಳಸಿಕೊಂಡು ಗೆದ್ದು ಬಂದಿರುವ ಅನೇಕ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಬಿಜೆಪಿ ಪಕ್ಷ ಸೇರಿಕೊಳ್ಳಲಿದ್ದಾರೆ, ಒಟ್ಟಿನಲ್ಲಿ ಈ ರಾಜಕೀಯ ಕ್ರಾಂತಿಯಿಂದ ಬಿಜೆಪಿ ಪಕ್ಷವು ಕೇವಲ ಒಂದು ಸರ್ಕಾರ ರಚಿಸುತ್ತಿದ್ದ ಬದಲಾಗಿ ರಚಿಸುತ್ತಿರುವುದು ಎರಡು ಸರ್ಕಾರ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ, ಯಾವುದೇ ರೀತಿಯ ವೆಬ್ಸೈಟ್ ಡಿಸೈನ್ ಅಥವಾ ಜಾಹೀರಾತಿಗಾಗಿ 9148497148 ನಂಬರ್ಗೆ ವಾಟ್ಸಾಪ್ ಮಾಡಿ.