ಸಿಎಂ ಕುಮಾರಸ್ವಾಮಿ ರವರಿಗೆ ಹೊಸ ಸಲಹೆ ನೀಡಿದ ಬಸವರಾಜ್ ಹೊರಟ್ಟಿ : ಆ ಸಲಹೆ ಏನು ಗೊತ್ತಾ??

ಸಿಎಂ ಕುಮಾರಸ್ವಾಮಿ ರವರಿಗೆ ಹೊಸ ಸಲಹೆ ನೀಡಿದ ಬಸವರಾಜ್ ಹೊರಟ್ಟಿ : ಆ ಸಲಹೆ ಏನು ಗೊತ್ತಾ??

ಇದೀಗ ಆಪರೇಷನ್ ಕಮಲ ಇಲ್ಲದೆಯೇ ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಕುಮಾರಸ್ವಾಮಿರವರ ಆಡಳಿತಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಈ ಮಾಹಿತಿಯನ್ನು ಖಚಿತಪಡಿಸಿರುವ ರಾಮಲಿಂಗಾ ರೆಡ್ಡಿ ರವರು, ಡಿಸಿಎಂ ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಡೆ ಇಳಿಸಿದರೆ ಬೆಂಗಳೂರಿನ ಶಾಸಕರು ರಾಜೀನಾಮೆ ವಾಪಸ್ ಪಡೆಯಲು ಸಿದ್ಧರಾಗಿದ್ದಾರೆ ಎಂದು ಮಾಧ್ಯಮಗಳಿಗೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅತೃಪ್ತರ ಗುಂಪಿನ ನಾಯಕ ಸಿದ್ದರಾಮಯ್ಯ ರವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ, ನಮ್ಮ ರಾಜೀನಾಮೆಗಳನ್ನು ವಾಪಸ್ಸು ತೆಗೆದುಕೊಳ್ಳುತ್ತೇವೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಈ ಶಾಸಕರ ಮಾತುಗಳನ್ನು ಹೊರತುಪಡಿಸಿ ಉಳಿದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಈ ಎಲ್ಲಾ ವಿದ್ಯಮಾನಗಳಿಗೆ ಬಿಜೆಪಿ ಪಕ್ಷ ಹೊಣೆ ಎಂದು ದೂರುತ್ತಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ರಾಜಧಾನಿ ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ರವರು ಕುಮಾರಸ್ವಾಮಿ ರವರಿಗೆ, ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಈಗಾಗಲೇ ಪ್ರತಿದಿನವೂ ರಾಜ್ಯದ ಜನರು ಈ ಆಟವನ್ನು ನೋಡಿ ಬೇಸತ್ತಿದ್ದಾರೆ, ಶಾಸಕರ ಈ ನಡೆಯನ್ನು ನೋಡಿದರೆ ಸಿಎಂ ಕುಮಾರಸ್ವಾಮಿ ರವರ ಮೇಲೆ ವಿಶ್ವಾಸ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ದಿವಸ ಶಾಸಕರು ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸುವ ಪರಂಪರೆ ಇತ್ತು. ಆದರೆ ಇದೀಗ ಕೆಲವು ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ನಾನು ಜೆಡಿಎಸ್ ಪಕ್ಷದಲ್ಲಿಯೇ ಇರುತ್ತೇನೆ, ಶಿಕ್ಷಕರ ಆಶೀರ್ವಾದ ಇರುವ ತನಕ ವಿಧಾನ ಪರಿಷತ್ ಸದಸ್ಯನಾಗಿ ಇರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.