ಬಿಗ್ ನ್ಯೂಸ್: ಸೋಲೊಪ್ಪಿಕೊಂಡ ಡಿಕೆಶಿ ! ಟ್ರಬಲ್ ಶೂಟರ್ ಗೆ ಮೊದಲ ಅಧಿಕೃತ ಸೋಲು

ಬಿಗ್ ನ್ಯೂಸ್: ಸೋಲೊಪ್ಪಿಕೊಂಡ ಡಿಕೆಶಿ ! ಟ್ರಬಲ್ ಶೂಟರ್ ಗೆ ಮೊದಲ ಅಧಿಕೃತ ಸೋಲು

ಬಿಜೆಪಿ ಪಕ್ಷವು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಧಿಕೃತ ಫಲಿತಾಂಶ ಹೊರಬೀಳುವ ಮುನ್ನ ಸರಳ ಬಹುಮತದತ್ತ ದಾಪುಗಾಲಿಟ್ಟಿದ್ದ ಬಿಜೆಪಿ ಪಕ್ಷವು 16ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೇವಲ ಕೆಲವೇ ಕೆಲವು ಮತಗಳಿಂದ ಸೋತು ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿತ್ತು. ಒಂದೆಡೆ ಜೆಡಿಎಸ್ ಪಕ್ಷವು ಚುನಾವಣೆಗೂ ಮುನ್ನ ಯಾವ ಪಕ್ಷದ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಘೋಷಣೆ ಮಾಡಿದ್ದರಿಂದ ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಚುನಾವಣೆ ಎದುರಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಧಿಕೃತ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನವೇ ಜೆಡಿಎಸ್ ಪಕ್ಷದ ಬಾಗಿಲಿಗೆ ಕಾಂಗ್ರೆಸ್ ಪಕ್ಷವು ತೆರಳಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದಾಗಿ ಮನವೊಲಿಸಿ ಮೈತ್ರಿ ಮಾಡಿಕೊಂಡಿತ್ತು.

ಇತ್ತ ವಿಧಾನಸಭಾ ಚುನಾವಣೆಯಲ್ಲಿ ಬದ್ಧ ಶತ್ರುಗಳಂತೆ ಕಾದಾಡಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವಿನ ನಾಯಕರು ಒಂದೆಡೆಯಾದರೆ ಮತ್ತೊಂದೆಡೆ ದೇವೇಗೌಡರ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ನಾಯಕರು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು. ಯಡಿಯೂರಪ್ಪನವರು ಬಹುಮತವನ್ನು ಸಾಬೀತು ಮಾಡದೆ ರಾಜೀನಾಮೆ ನೀಡಿದ ನಂತರ ಮೈತ್ರಿ ಸರ್ಕಾರ ಅಧಿಕಾರಕ್ಕೆ ಏರಿತ್ತು. ಆದರೆ ಅಧಿಕಾರಕ್ಕೆ ಏರಿದ ಕ್ಷಣದಿಂದಲೂ ಎರಡು ಪಕ್ಷಗಳಲ್ಲಿ ಭಿನ್ನಮತಗಳು ಕಾಣಿಸಿಕೊಂಡವು. ಒಂದೆಡೆ ಆಪರೇಷನ್ ಕಮಲದ ಭೀತಿ ಎದುರಿಸುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಅಂದು ಜೊತೆಯಾಗಿ ನಿಂತು ಎಲ್ಲ ಸವಾಲುಗಳನ್ನು ಎದುರಿಸಿ ಅಧಿಕಾರ ಏರುವ ಹಾಗೆ ಮಾಡಿದ್ದು ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಡಿಕೆ ಶಿವಕುಮಾರ್.

ಕೇವಲ ಮೈತ್ರಿ ಸರ್ಕಾರ ರಚನೆಯಾದ ತಕ್ಷಣ ಡಿಕೆ ಶಿವಕುಮಾರ್ ಅವರ ಜವಾಬ್ದಾರಿ ಮುಗಿದಿರಲಿಲ್ಲ, ಬದಲಾಗಿ ದಿನಕ್ಕೊಂದು ಹೊಸ ಭಿನ್ನಮತಗಳು ಮೈತ್ರಿಯಲ್ಲಿ ಆರಂಭವಾದವು. ದಿನಕ್ಕೊಬ್ಬ ಶಾಸಕರು ಭಿನ್ನಮತವನ್ನು ಹೊರಹಾಕುತ್ತಾ ಬಿಜೆಪಿ ಪಕ್ಷದ ಕಡೆ ಮುಖ ಮಾಡುವ ಸುದ್ದಿಗಳು ಹರಿದಾಡುತ್ತಿದ್ದವು. ಈ ಎಲ್ಲಾ ವಿದ್ಯಮಾನಗಳನ್ನು ಬದಿಗೊತ್ತಿ, ಪ್ರತಿಯೊಬ್ಬ ಶಾಸಕನ ಜೊತೆ ಮಾತನಾಡಿ ಇರುವ ಸಮಸ್ಯೆಗಳನ್ನು ಬಗೆಹರಿಸಿ ಭಿನ್ನಮತಗಳನ್ನು ಶಮಣ ಮಾಡುತ್ತಿದ್ದಿದ್ದು ಟ್ರಬಲ್ ಶೂಟರ್ ಡಿಕೆ ಶಿವಕುಮಾರ್. ಅಷ್ಟೇ ಅಲ್ಲದೆ ಮೈತ್ರಿ ಸರ್ಕಾರದ ಉಳಿವಿಗಾಗಿ ತಮ್ಮ ಬಳಿ ಇದ್ದ ಸಚಿವಸ್ಥಾನದ ಒಂದು ಖಾತೆಯನ್ನು ಸಹ ಬಿಟ್ಟುಕೊಟ್ಟಿದ್ದರು. ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿ ಬಿಜೆಪಿ ಪಕ್ಷಕ್ಕೆ ದೊಡ್ಡ ತಲೆನೋವಾಗಿದ್ದ ಡಿಕೆ ಶಿವಕುಮಾರ್ ಅವರು ಇದೀಗ ಬಿಜೆಪಿ ಪಕ್ಷದ ಮುಂದೆ ಮಂಡಿಯೂರಿದ್ದಾರೆ ಹಾಗೂ ತಮ್ಮ ಸೋಲನ್ನು ತಾವೇ ಒಪ್ಪಿಕೊಂಡಿದ್ದಾರೆ.

ಇಂದು ಕರ್ನಾಟಕದಲ್ಲಿ ದೊಡ್ಡ ರಾಜಕೀಯ ಕ್ರಾಂತಿಯೇ ನಡೆದುಹೋಗಿದೆ, ಮೈತ್ರಿ ಸರ್ಕಾರದ 12 ಶಾಸಕರು ರಾಜೀನಾಮೆ ನೀಡಿ, ಮೈತ್ರಿ ಸರ್ಕಾರ ವಿಫಲವಾಗಿದೆ ಎಂಬ ಘೋಷಣೆಯೊಂದಿಗೆ ವಿಧಾನಸೌಧದಿಂದ ಹೊರನಡೆದಿದ್ದಾರೆ. ಆಪರೇಷನ್ ಕಮಲದ ಸೂಚನೆಗಳು ಸಹ ಕಾಣಸಿಗುತ್ತಿವೆ, ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಬಾರಿಯೂ ಮೈತ್ರಿ ಸರ್ಕಾರವನ್ನು ಉರುಳಿಸುತ್ತಿದ್ದ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ಮೈತ್ರಿ ಸರ್ಕಾರದಲ್ಲಿ ತೊಂದರೆ ಇರಬಹುದು ಆದರೆ ಎಲ್ಲವನ್ನೂ ‌ ಸೆಟಲ್ ಮಾಡಬಹುದಿತ್ತು, ಹೋಗುವ ಶಾಸಕರು ಹೋಗಲಿ ಇನ್ನು ಅವರನ್ನು ಹಿಡಿದು ಕೊಳ್ಳಲು ಇನ್ನು ಸಾಧ್ಯವಿಲ್ಲ. ರಾಜಿನಾಮೆ ನೀಡಿದವರನ್ನು ಮನವೊಲಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಆದರೆ ವಿಫಲನಾಗಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.