ಕುಮಾರಸ್ವಾಮಿ ರವರಿಗೆ ಬಿಗ್ ಶಾಕ್- ಕುರ್ಚಿ ಕಿತ್ತುಕೊಳ್ಳಲ್ಲು ಹೊಸ ಯೋಜನೆ ರೂಪಿಸಿದಿಯೇ ಕಾಂಗ್ರೆಸ್ ??, ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ

ಕುಮಾರಸ್ವಾಮಿ ರವರಿಗೆ ಬಿಗ್ ಶಾಕ್- ಕುರ್ಚಿ ಕಿತ್ತುಕೊಳ್ಳಲ್ಲು ಹೊಸ ಯೋಜನೆ ರೂಪಿಸಿದಿಯೇ ಕಾಂಗ್ರೆಸ್ ??, ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ

ಕಳೆದ ಒಂದು ವರ್ಷದಿಂದ ದೋಸ್ತಿ ಸರ್ಕಾರ ಅಲುಗಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಮೊದಲಿನಿಂದಲೂ ಸರ್ಕಾರ ಬೀಳುವ ಆತಂಕದಿಂದ ಅಧಿಕಾರ ನಡೆಸುತ್ತಿದ್ದ ದೋಸ್ತಿಗಳು ನೆನ್ನೆ ಅಕ್ಷರಸಹ ಬೆಚ್ಚಿಬಿದ್ದಿದ್ದಾರೆ. ಒಂದೆಡೆ ಕುಮಾರಸ್ವಾಮಿ ರವರು ಗ್ರಾಮವಾಸ್ತವ್ಯದ ಕಾರ್ಯಕ್ರಮದಲ್ಲಿ ಅಭಿವೃದ್ಧಿಯಿಂದ ಹೆಸರು ಮಾಡುವ ಬದಲು ಕೋಟಿ ಕೋಟಿ ಖರ್ಚು ಮಾಡಿ ವಿವಾದ ಸೃಷ್ಟಿಸಿ, ಗ್ರಾಮ ವಾಸ್ತವ್ಯ ಮುಗಿದ ಕೆಲವೇ ದಿನಗಳಲ್ಲಿ ಅಮೇರಿಕಾ ದೇಶಕ್ಕೆ ಹಾರುವ ಮೂಲಕ ವಿರೋಧಪಕ್ಷಗಳ ಬಾಯಿಗೆ ಮತ್ತೊಮ್ಮೆ ಆಹಾರವಾಗಿದ್ದರು. ನೋಡನೋಡುತ್ತಿದ್ದಂತೆ ಶಾಸಕ ಆನಂದ್ ಸಿಂಗ್ ರವರು ಜಿಂದಾಲ್ ವಿಚಾರದಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆ ಮಾಡಿ ರಾಜೀನಾಮೆ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ರವರಿಗೆ ನೀಡಿದ್ದೇನೆ ಎಂದು ಖಚಿತಪಡಿಸಿದ್ದರು.

ತದನಂತರ ಕೆಲವೇ ಗಂಟೆಗಳಲ್ಲಿ ದೋಸ್ತಿ ಸರ್ಕಾರ ರಚನೆಯಾದ ಕ್ಷಣದಿಂದಲೂ ಬಂಡಾಯ ಶಾಸಕರಾಗಿ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ ರವರು ಕೊನೆಗೂ ರಾಜೀನಾಮೆ ನೀಡಿದ್ದರು. ರಮೇಶ್ ಜಾರಕಿಹೊಳಿ ರವರ ರಾಜೀನಾಮೆ ವಿಷಯ ಹೊಸದಲ್ಲ ಆದರೆ ಆನಂದ್ ಸಿಂಗ್ ರವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ ಕಾರಣ, ದೋಸ್ತಿ ಗಳಲ್ಲಿ ಮತ್ತಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆ ಮೂಡಿತ್ತು. ಇನ್ನು ಅಮೆರಿಕ ಪ್ರವಾಸದಲ್ಲಿರುವ ಕುಮಾರಸ್ವಾಮಿಯವರು ಕರ್ನಾಟಕ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ, ಬಿಜೆಪಿ ಪಕ್ಷದ ಸರ್ಕಾರ ರಚಿಸುವ ಕನಸು ಹಗಲು ಕನಸಾಗಿಯೇ ಉಳಿಯಲಿದೆ ಎಂದು ಹೇಳಿಕೆ ನೀಡಿದ್ದರು. ಇತ್ತ ಬಿಜೆಪಿ ಪಕ್ಷವು ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಒಂದು ವೇಳೆ ಪಕ್ಷದ ಆಂತರಿಕ ಕಲಹದಿಂದ ಶಾಸಕರು ರಾಜೀನಾಮೆ ನೀಡಿದ್ದಲ್ಲಿ ಸರ್ಕಾರ ರಚಿಸದೇ ಕೂರಲೂ ನಾವು ಸನ್ಯಾಸಿಗಳಲ್ಲ ಎಂಬ ಹೇಳಿಕೆ ನೀಡಿದ್ದರು.

ಇದೀಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಶಾಸಕ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಪುಟ ಪುನರ್ ರಚನೆ ಮಾಡಲು ರಾಜ್ಯ ಕಾಂಗ್ರೆಸ್ಸಿಗರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬದಲಾದರೂ ಬದಲಾಗಬಹುದು, ಆದರೆ ಸರ್ಕಾರ ಬೀಳುವ ಸಾಧ್ಯತೆಗಳಿಲ್ಲ. ಈಗಾಗಲೇ ಎರಡು ಶಾಸಕರು ರಾಜೀನಾಮೆ ನೀಡಿದ್ದಾರೆ, ಮತ್ತಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಎಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬುದನ್ನು ನೋಡಿ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಂಪುಟ ಪುನರ್ ರಚನೆ ಮಾಡಿ ಮುಖ್ಯಮಂತ್ರಿ ಸ್ಥಾನ ಬದಲಾದರೂ ಅಚ್ಚರಿಯಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಎಸ್ ರಾಮಪ್ಪ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಸಕ ಎಸ್ ರಾಮಪ್ಪ ಈ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು ರಾಜ್ಯರಾಜಕಾರಣದಲ್ಲಿ ಇಂದು ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಕಾಂಗ್ರೆಸ್ ಶಾಸಕರು ಹೇಳಿದಂತೆ ನಡೆದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ, ಅಷ್ಟೇ ಅಲ್ಲದೇ ಹಲವಾರು ಸಚಿವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡು ಬಂಡಾಯ ಏಳುವ ಸೂಚನೆಗಳು ಸಹ ಕಾಣಸಿಗುತ್ತಿವೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಒಂದು ವೇಳೆ ಕುಮಾರಸ್ವಾಮಿ ರವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಡೆ ಇಳಿಯಬೇಕಾಗಿ ಬಂದರೆ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸಿದ್ದರಾಮಯ್ಯರವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರಾ? ಅಥವಾ ಹೊಸಬರಿಗೆ ಮಣೆ ಹಾಕಲು ಸೂಚಿಸಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.