ಬಾಂಗ್ಲಾ ವಿರುದ್ಧ ಪಂದ್ಯ, ಕೇದಾರ್ ಆಡುವುದು ಅನುಮಾನ? ಹಾಗಿದ್ದರೆ ಇನ್ಯಾರು ಆಡುತ್ತಾರೆ??

ಬಾಂಗ್ಲಾ ವಿರುದ್ಧ ಪಂದ್ಯ, ಕೇದಾರ್ ಆಡುವುದು ಅನುಮಾನ? ಹಾಗಿದ್ದರೆ ಇನ್ಯಾರು ಆಡುತ್ತಾರೆ??

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಇಂಜುರಿ ಸಮಸ್ಸೆ ಹೆಚ್ಚಾಗಿ ಕಾಡತೊಡಗಿದೆ. ಶಿಖರ್ ಧವನ್ ಬಳಿಕ ಇದೀಗ ವಿಜಯ್ ಶಂಕರ್ ಇಂಜುರಿ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ ಇದು ತಂಡದ ಸಮತೋಲನದ ಮೇಲೆ ಬಾರಿ ಪರಿಣಾಮ ಬೀರಿದೆ, ಈಗಾಗಲೇ ಅರ್ಧ ಟೂರ್ನಿ ಮುಗಿದಿರುವ ಕಾರಣ ಹೊಸ ಆಟಗಾರರು ಆಯ್ಕೆಯಾದರು ಸಹ ಇಂಗ್ಲೆಂಡ್ ದೇಶದ ಹವಮಾನಕ್ಕೆ ಹೊಂದಿಕೊಂಡು, ಸ್ಪೀಡ್ ಪಿಚ್ ಗಳಲ್ಲಿ ಏಕಾಏಕಿ ಉತ್ತಮ ಪ್ರದರ್ಶನ ತೋರುವುದು ಅಷ್ಟು ಸುಲಭದ ಕೆಲಸವಲ್ಲ. ಇದರ ಜೊತೆಗೆ ಕೆಲ ಆಟಗಾರರು ಅಂದುಕೊಂಡಂತೆ ಪ್ರದರ್ಶನ ತೋರುತ್ತಿಲ್ಲ, ನಾಲ್ಕನೇ ಕ್ರಮಾಂಕ ವಂತೂ ಕೇಳಲೇ ಬೇಡಿ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆಗಳು ಹೆಚ್ಚಾಗಿದ್ದು, ಯಾರು ಯಾವ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಾರೆ ಎಂದು ಲೆಕ್ಕಾಚಾರಗಳು ಹೀಗಾಗಲೇ ಆರಂಭವಾಗಿವೆ.

ಕಳೆದ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಗೆಲ್ಲುವ ಅವಕಾಶ ಇದ್ದರೂ ಸಹ ಮಹೇಂದ್ರ ಸಿಂಗ್ ಧೋನಿ ಹಾಗೂ ಕೇದಾರ್ ಜಾಧವ್ ರವರು 31 ಎಸೆತದಲ್ಲಿ 7 ಡಾಟ್ ಬಾಲ್ ಹಾಗೂ 21 ಸಿಂಗಲ್ ರನ್ ಸಿಡಿಸಿ, ಗೆಲ್ಲುವ ಪ್ರಯತ್ನವನ್ನು ಮಾಡದೆ ನೆಟ್ಟಿಗರ ಬಾಯಿಗೆ ಆಹಾರವಾಗಿ ಬಾರಿ ಟೀಕೆಗೆ ಗುರಿಯಾಗಿದ್ದರು. ಕೇವಲ ಕಳೆದ ಪಂದ್ಯದಲ್ಲಿ ಅಷ್ಟೇ ಅಲ್ಲದೆ ಈ ಟೂರ್ನಿಯಲ್ಲಿ ಕೇದಾರ್ ಜಾಧವ್ ರವರು ಹೇಳಿಕೊಳ್ಳುವಂತಹ ಪ್ರಧರ್ಶನವೇನು ನೀಡಿಲ್ಲ, ಆದಕಾರಣ ಕೇದಾರ್ ಜಾಧವ್ ಬದಲು, ಆಲ್ರೌಂಡರ್ ರವೀಂದ್ರ ಜಡೇಜಾಗೆ ಅವಕಾಶ ನೀಡೋ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಎಲ್ಲ ಪಂದ್ಯಗಳಿಂದ ಹೊರಗೆ ಉಳಿದರು ಜಡೇಜಾ ರವರು ಬದಲಿ ಆಟಗಾರರಾಗಿ ಪ್ರತಿಯೊಂದು ಪಂದ್ಯದಲ್ಲಿಯೂ ಕಣಕ್ಕೆ ಇಳಿದು ಫೀಲ್ಡಿಂಗ್ ನಲ್ಲಿ ಮಿಂಚಿದ್ದಾರೆ. ಇನ್ನು ಜಡೇಜಾ ರವರ ಬ್ಯಾಟಿಂಗ್ ಮತ್ತು ಬೌಲಿಂಗ್ ಸಹ ಸಾಕಷ್ಟು ಸುಧಾರಿಸಿದ್ದು ಉತ್ತಮ ಫಾರಂ ನಲ್ಲಿ ಇದ್ದಾರೆ, ಆದಕಾರಣ ಕೇದಾರ್ ಜಾಧವ್ ರವರ ಬದಲಾಗಿ ಜಡೇಜಾ ಕಣ್ಣಕ್ಕೆ ಇಳಿದರೂ ಆಶ್ಚರ್ಯವಿಲ್ಲ.