ನಾಯ್ಡುಗೆ ಮರ್ಮಾಘಾತ ! ಮೋದಿ ಎಂಬ ಸುನಾಮಿಗೆ ಕೊಚ್ಚಿ ಹೋಗುತ್ತಿದೆ ನಾಯ್ಡು ಪಾರ್ಟಿ, ಮತ್ತೊಂದು ದೊಡ್ಡ ಶಾಕ್ ಭೀತಿಯಲ್ಲಿ ನಾಯ್ಡು

ನಾಯ್ಡುಗೆ ಮರ್ಮಾಘಾತ ! ಮೋದಿ ಎಂಬ ಸುನಾಮಿಗೆ ಕೊಚ್ಚಿ ಹೋಗುತ್ತಿದೆ ನಾಯ್ಡು ಪಾರ್ಟಿ, ಮತ್ತೊಂದು ದೊಡ್ಡ ಶಾಕ್ ಭೀತಿಯಲ್ಲಿ ನಾಯ್ಡು

ಅದ್ಯಾಕೋ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಪ್ರಧಾನಿಯಾಗುವ ಕನಸನ್ನು ಕಟ್ಟಿಕೊಂಡು ನರೇಂದ್ರ ಮೋದಿ ರವರ ವಿರುದ್ಧ ತೊಡೆತಟ್ಟಿ, ಇಡೀ ದೇಶದಲ್ಲೆಡೆ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಸತತ ಪ್ರಯತ್ನ ಮಾಡಿದ ಚಂದ್ರಬಾಬುನಾಯ್ಡು ರವರು ಪ್ರಧಾನಿ ಪಟ್ಟ ಬಿಡಿ ತಮಗೆ ಇದ್ದ ಮುಖ್ಯಮಂತ್ರಿ ಸ್ಥಾನವನ್ನು ಸಹ ಹೀನಾಯವಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡು ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬೆರಳೆಣಿಕೆಯ ಶಾಸಕರನ್ನು ಹೊಂದಿರುವ ತೆಲುಗುದೇಶಂ ಪಾರ್ಟಿಯು ಇದೀಗ ಅವನತಿಯತ್ತ ತಲುಪಿದೆ.

ಇತ್ತೀಚೆಗಷ್ಟೇ ಒಟ್ಟು ತೆಲುಗು ದೇಶ ಪಾರ್ಟಿಯ ಆರು ಜನ ರಾಜ್ಯಸಭಾ ಸದಸ್ಯರಲ್ಲಿ 4 ಸದಸ್ಯರು ತಮ್ಮ ಪಕ್ಷ ತೆಲುಗುದೇಶಂ ಪಾರ್ಟಿ ಗೆ ರಾಜಿನಾಮೆ ನೀಡಿ ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಇಷ್ಟು ಸಾಲದು ಎಂಬಂತೆ ಚಂದ್ರಬಾಬು ನಾಯ್ಡು ರವರಿಗೆ ಇಂದಿನ ಆಂಧ್ರಪ್ರದೇಶದ ಡೈನಾಮಿಕ್ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ರವರು ಒಂದರಮೇಲೊಂದು ಶಾಕ್ ನೀಡುತ್ತಾ, ಈಗಾಗಲೇ ಬಾಡಿಗೆ ಮನೆ ಹಾಗೂ ಪಕ್ಷದ ಕಚೇರಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಭೂ ಒತ್ತುವರಿ ಪ್ರಕರಣದ ಅಡಿಯಲ್ಲಿ ಎರಡನ್ನು ವಶಪಡಿಸಿಕೊಂಡು ಚಂದ್ರಬಾಬುನಾಯ್ಡು ರವರನ್ನು ಬೀದಿಗೆ ತಂದಿದ್ದಾರೆ.

ಇಷ್ಟು ಸಾಲದು ಎಂಬಂತೆ ಇದೀಗ ನರೇಂದ್ರ ಮೋದಿ ಎಂಬ ಸುನಾಮಿಯು ಆಂಧ್ರಪ್ರದೇಶದಲ್ಲಿ ದಿನೇದಿನೇ ಬಾರಿ ವರ್ಚಸ್ಸನ್ನು ಪಡೆದುಕೊಂಡು ಮುನ್ನುಗ್ಗುತ್ತಿದ್ದು, ಇದೇ ಇಂದು ಚಂದ್ರಬಾಬು ನಾಯ್ಡುರವರ ಪಕ್ಷ ತೆಲುಗುದೇಶಂ ಪಾರ್ಟಿಯ ಅಂತ್ಯಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣಸಿಗುತ್ತವೆ. ಯಾಕೆಂದರೆ ಇದೀಗ ತೆಲುಗುದೇಶಂ ಪಾರ್ಟಿಯಿಂದ ಗೆದ್ದಿರುವುದು ಕೇವಲ 23 ಶಾಸಕರು, ಅದರಲ್ಲಿ ಒಂಬತ್ತು ಮಂದಿ ಶಾಸಕರು ಬಿಜೆಪಿ ಪಕ್ಷ ಸೇರಲು ಒಲವು ತೋರಿ, ಬಿಜೆಪಿ ಪಕ್ಷದ ರಾಜ್ಯಸಭಾ ಸಂಸದ ನರಸಿಂಹರಾಜು ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಈ ವಿಷಯವನ್ನು ಕುದ್ದು ಖಚಿತಪಡಿಸಿರುವ ನರಸಿಂಹರಾವ್ ರವರು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹಲವಾರು ನಾಯಕರು ಬಿಜೆಪಿ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. TDP ಪಕ್ಷದ ಒಂಬತ್ತು ಮಂದಿ ಶಾಸಕರು ಸೇರಿದಂತೆ, ಹಾಲಿ ಶಾಸಕರು, ಮಾಜಿ ಶಾಸಕರು, ರಾಜ್ಯ ಸಚಿವರು ಹಾಗೂ ಕಡಿಮೆ ಅಂತರದಿಂದ ಕಳೆದ ಲೋಕಸಭಾ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡವರು ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದಾರೆ. ಚಂದ್ರಬಾಬು ನಾಯ್ಡು ರವರು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮುರಿದುಕೊಂಡು ಬಹಳ ದೊಡ್ಡ ತಪ್ಪು ಮಾಡಿದ್ದಾರೆ, ಏಕಪಕ್ಷೀಯವಾಗಿ ಪಕ್ಷದ ನಾಯಕರ ಒಪ್ಪಿಗೆ ಕೇಳದೆ ಈ ರೀತಿಯ ತೆಗೆದುಕೊಂಡಿದ್ದ ಕ್ಕಾಗಿ ಹಲವಾರು ನಾಯಕರು ಬೇಸತ್ತಿದ್ದಾರೆ ಅಷ್ಟೇ ಅಲ್ಲದೆ ಮೋದಿರವರ ಕಾರ್ಯವೈಖರಿಗೆ ಆಕರ್ಷಿತರಾಗಿ ಬಿಜೆಪಿ ಪಕ್ಷಕ್ಕೆ ಸೇರುವ ಒಲವು ತೋರಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.