ವಂದೇ ಭಾರತ್ – ಭರ್ಜರಿ ಯಶಸ್ಸು, ಹೂಡಿದ ಬಂಡವಾಳ ಎಷ್ಟು ದಿನಗಳಲ್ಲಿ ವಾಪಸ್ಸು ಗೊತ್ತಾ??

ವಂದೇ ಭಾರತ್ – ಭರ್ಜರಿ ಯಶಸ್ಸು, ಹೂಡಿದ ಬಂಡವಾಳ ಎಷ್ಟು ದಿನಗಳಲ್ಲಿ ವಾಪಸ್ಸು ಗೊತ್ತಾ??

ನರೇಂದ್ರ ಮೋದಿ ರವರು ಕಳೆದ ಬಾರಿ ಅಧಿಕಾರದ ಅವಧಿಯಲ್ಲಿ ಇಂದು ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿರುವ ಮೇಕ್ ಇನ್ ಇಂಡಿಯಾ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದರು, ಭಾರತದ ಆರ್ಥಿಕತೆಗೆ ಅತಿ ದೊಡ್ಡ ಹೊಡೆತವಾಗಿರುವ ಆಮದು ತಡೆಯಲು ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ನರೇಂದ್ರ ಮೋದಿ ಅವರು ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ ಅಂದು ವಿರೋಧ ಪಕ್ಷಗಳು ಕೇವಲ ನರೇಂದ್ರ ಮೋದಿ ಅವರನ್ನು ದೂಷಿಸುವುದು ಉದ್ದೇಶದಿಂದ ಭಾರತೀಯರ ಕೌಶಲ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೇಕ್ ಇನ್ ಇಂಡಿಯಾ ಒಂದು ವಿಫಲವಾಗುವ ಯೋಜನೆಯೆಂದು ಕಟು ಮಾತುಗಳಿಂದ ಟೀಕೆ ಮಾಡಿದ್ದರು.

ಅಷ್ಟೇ ಯಾಕೆ ಇದೇ ಯೋಜನೆಯ ಅಡಿಯಲ್ಲಿ ಸಂಪೂರ್ಣ ಭಾರತದಲ್ಲಿಯೇ ಸಿದ್ದಪಡಿಸಿದ ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭವಾದಾಗ, ಇದ್ದಕ್ಕಿದ್ದ ಹಾಗೇ ಅಡ್ಡಬಂದ ಜಾನುವಾರಿಗೆ ಗುದ್ದಿದ ಪರಿಣಾಮ ಕೇವಲ ಒಂದು ಗಂಟೆ ತಡವಾಗಿದ್ದಕ್ಕೆ, ರಾಹುಲ್ ಗಾಂಧಿ ರವರು ಸಹ ಇದರ ಬಗ್ಗೆ ಮಾತನಾಡಿ ತಾಂತ್ರಿಕ ದೋಷದಿಂದ ರೈಲು ಕೆಟ್ಟು ನಿಂತಿದೆ. ಇದು ಮೇಕ್ ಇನ್ ಇಂಡಿಯಾದ ಅತಿ ದೊಡ್ಡ ಸೋಲು ಎಂದು ಟೀಕೆ ಮಾಡಿದ್ದರು. ಆದರೆ ಇದೀಗ ಈ ಎಲ್ಲಾ ಟೀಕೆಗಳಿಗೂ ವಂದೇ ಭಾರತ ಎಕ್ಸ್ಪ್ರೆಸ್ ಉತ್ತರ ನೀಡಿದ್ದು, ನವದೆಹಲಿ ಹಾಗೂ ವಾರಣಾಸಿಯ ನಡುವೆ ವಾರಕ್ಕೆ ಐದು ದಿನ ಸಂಚರಿಸುವ ಈ ರೈಲಿನ ನಿರ್ಮಾಣಕ್ಕೆ ನೂರು ಕೋಟಿ ವೆಚ್ಚ ಮಾಡಲಾಗುತ್ತದೆ, ಈ ವೆಚ್ಚವನ್ನು ಕೇವಲ 12 ರಿಂದ 15 ತಿಂಗಳಲ್ಲಿ ವಾಪಸು ಪಡೆಯಬಹುದು. ಕೇವಲ 12ರಿಂದ 15 ತಿಂಗಳುಗಳಲ್ಲಿ ಹೂಡಿದ ಬಂಡವಾಳ ವಾಪಸು ಬರುತ್ತದೆ ಈಗಾಗಲೇ ಕನಿಷ್ಠ ತಿಂಗಳಿಗೆ ಏಳು ಕೋಟಿ ರು ಸಂಗ್ರಹವಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.